Dry Red Chilli Mela: ಒಣ ಮೆಣಸಿನಕಾಯಿ ಮಾರಾಟದಲ್ಲೂ ಕಲಬೆರಕೆ ಅಪಾಯ! ಅದಕ್ಕೇ ಮೇಳ ಆಯೋಜನೆ, ಕೆಂಪು ಸುಂದರಿಗೆ ಇದೆ ಬಂಗಾರದ ಬೆಲೆ

Hubballi: ಮಾರುಕಟ್ಟೆಯಲ್ಲಿ ಕಲಬೆರಕೆ ಮೆಣಸಿನಕಾಯಿ ಸಿಗತ್ತೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಹೀಗಾಗಿ ನೇರವಾಗಿ ರೈತರಿಂದ ಮೆಣಸಿನಕಾಯಿ ಖರೀದಿ ಮಾಡಲು ಒಣ ಮೆಣಸಿನಕಾಯಿ ಮೇಳ ಆಯೋಜನೆ‌ ಮಾಡಲಾಗಿದೆ. ಗ್ರಾಹಕರೂ ಕೂಡಾ ಮೇಳದತ್ತ ಆಗಮಿಸುತ್ತಿದ್ದಾರೆ.

Dry Red Chilli Mela: ಒಣ ಮೆಣಸಿನಕಾಯಿ ಮಾರಾಟದಲ್ಲೂ ಕಲಬೆರಕೆ ಅಪಾಯ! ಅದಕ್ಕೇ ಮೇಳ ಆಯೋಜನೆ, ಕೆಂಪು ಸುಂದರಿಗೆ ಇದೆ ಬಂಗಾರದ ಬೆಲೆ
ಒಣ ಮೆಣಸಿನಕಾಯಿ ಮಾರಾಟದಲ್ಲೂ ಕಲಬೆರಕೆ ಅಪಾಯ, ಅದಕ್ಕೇ ಒಣ ಮೆಣಸಿನಕಾಯಿ ಮೇಳ ಆಯೋಜನೆ, ಕೆಂಪು ಸುಂದರಿಗೆ ಇದೆ ಬಂಗಾರದ ಬೆಲೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 21, 2023 | 6:00 PM

ಈ ಬಾರಿ ಕೆಂಪು ಸುಂದರಿ ಒಣ ಮೆಣಸಿನಕಾಯಿಗೆ ಬಂಗಾರದ ಬೆಲೆ ಇದೆ. ಕೆಂಪು ಸುಂದರಿ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದು ಒಂದು ಕೆಜಿ ಒಣ ಮೆಣಸಿನಕಾಯಿ ಸಾವಿರದ ಸಮೀಪ ಬಂದು ನಿಂತಿದೆ. ಮಾರುಕಟ್ಟೆಯಲ್ಲಿ ಕೆಂಪು ಸುಂದರಿಗೆ ಬೇಡಿಕೆ ಹೆಚ್ಚಾಗ್ತಿರೋದು ಸಹಜವಾಗಿ ಗ್ರಾಹಕರಿಗೆ ಹೊರೆ ಅಗಿದೆ, ಇದೇ ಕಾರಣಕ್ಕೆ ಒಣ ಮೆಣಸಿನಕಾಯಿ ಮೇಳ ಆಯೋಜನೆ ಮಾಡಲಾಗಿತ್ತು. ದರ ಹೆಚ್ಚಿದ್ರೂ ಕೆಂಪು ಸುಂದರಿ ಖರೀದಿಗೆ ಗ್ರಾಹಕರ ದಂಡೇ ಅಲ್ಲಿ ನೆರದಿತ್ತು! ಈ ದೃಶ್ಯಗಳು ‌ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯ ಮೂರು ಸಾವಿರ ಮಠದ ಹೈಸ್ಕೂಲ್ ಆವರಣದಲ್ಲಿ (Moorusavir Mutt High School Grounds, Hubballi) ಒಣಮೆನಸಿನಕಾಯಿ ಮೇಳ ಆಯೋಜನೆ ಮಾಡಲಾಗಿದೆ. ಕಳೆದ ಎರಡು ವರ್ಷ ಕೊರೊನಾ ಇದ್ದ ಕಾರಣ ಮೇಳ (Dry Red Chilli Mela) ಆಯೋಜನೆ ಮಾಡಿರಲಿಲ್ಲ. ಈ ಬಾರಿ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಮೇಳ ಆಯೋಜನೆ ಮಾಡಲಾಗಿದೆ. ಮೇಳದಲ್ಲಿ ನೇರವಾಗಿ ರೈತರಿಂದ (Farmers) ಗ್ರಾಹಕರಿಗೆ ಮೆಣಸಿನಕಾಯಿ ಮಾರಾಟ ಮಾಡಲಿದ್ದಾರೆ.

ಒಣ ಮೆಣಸಿನಕಾಯಿ ಮೇಳದಲ್ಲಿ 100 ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದಾರೆ. ಹೈಸ್ಕೂಲ್ ಆವರಣದಲ್ಲಿ ಬಂದ ರೈತರಿಗೆ ಪ್ರತ್ಯೇಕ ಮಳಿಗೆ ಹಾಕಲಾಗಿದೆ. ಇನ್ನು ಗದಗ, ಹಾವೇರಿ, ಬ್ಯಾಡಗಿ, ಧಾರವಾಡ, ಬಳ್ಳಾರಿಯಿಂದ ರೈತರು ಮೇಳದಲ್ಲಿ ಭಾಗಿಯಾಗಿದ್ದಾರೆ. ಈ ಮೇಳದಲ್ಲಿ 10ಕ್ಕೂ ಹೆಚ್ಚು ವಿವಿಧ ತಳಿಯ ಒಣ ಮೆಣಸಿನಕಾಯಿ ಮಾರಾಟ ಮಾಡಲಾಗ್ತಿದೆ. ಬ್ಯಾಡಗಿ ಮೆಣಸಿನಕಾಯಿ, ಸೀಜಂಟ್, ಬ್ಯಾಡಗಿ ದಪ್ಪಕಾಯಿ, ಬ್ಯಾಡಗಿ ಕಡ್ಡಿ ಕಾಯಿ ಸೇರಿ ವಿವಿಧ ತಳಿಯ ಮೆಣಸಿನಕಾಯಿ ಮಾರಾಟ ಮಾಡಲಾಗ್ತಿದೆ. ಇನ್ನು ಕೆಜಿಗೆ 500-600 ರೂಪಾಯಿ ವರೆಗೂ ದರವಿದೆ. ಈ ಬಾರಿ ಮೆಣಸಿನಕಾಯಿ ದರ ಹೆಚ್ಚಾಗಿರೋದು ಗ್ರಾಹಕರಿಗೆ ಹೊರೆಯಾಗಿದ್ದರೆ, ಇತ್ತ ಮೇಳದಲ್ಲಿ ಭಾಗಿಯಾದ ರೈತರು ಖುಷಿಯಾಗಿದ್ದಾರೆ.

ಇನ್ನು ಮೆಣಸಿನಕಾಯಿ ಉತ್ತರ ಕರ್ನಾಟಕದಲ್ಲಿ ಬಹಳ ಫೇಮಸ್. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲೂ ಒಣ ಮೆನಸಿನಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಬ್ಯಾಡಗಿ ಮೆಣಸಿನಕಾಯಿ ಬಹಳ ಫೇಮಸ್ ಆಗಿದ್ದು, ಈ ಬಾರಿ ಕೆಂಪು ಸುಂದರಿ ಮೆಣಸಿನಕಾಯಿ ಬೆಲೆ ಗಗನಕ್ಕೇರಿದೆ. ಒಂದು‌ ಕ್ವಿಂಟಾಲ್ ಗೆ ಹೆಚ್ಚು ಕಡಿಮೆ 8 ಸಾವಿರ ಇದೆ. ಮಾರುಕಟ್ಟೆಯಲ್ಲಿ ಕೆಂಪು ಬೆಡಗಿಗೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ವರ್ಷ ಹುಬ್ಬಳ್ಳಿಯಲ್ಲಿ ಒಣ ಮೆಣಸಿನಕಾಯಿ ಮೇಳ ಆಯೋಜನೆ ಮಾಡಲಾಗ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಮೇಳಕ್ಕೆ ಬ್ರೇಕ್ ಬಿದ್ದಿತ್ತು.ಆಯೋಜಕರಿಗೆ ಪ್ರತಿ ವರ್ಷ ಮೇಳ ಆದಾಯ ನೀಡಿದೆ. ಹೀಗಾಗಿ ಆಯೋಜಕರು ಇಂದಿನಿಂದ ಮೂರು ದಿನಗಳ ಕಾಲ ಹುಬ್ಬಳ್ಳಿ ಯಲ್ಲಿ ಒಣ ಮೆಣಸಿನಕಾಯಿ ಮೇಳ ಆಯೋಜನೆ ಮಾಡಿದ್ದಾರೆ. ಮೇಳದಲ್ಲಿ ವಿವಿಧ ತಳಿಯ ಮೆಣಸಿನಕಾಯಿ ಮಾರಾಟಕ್ಕಿದ್ದು, ಹುಬ್ಬಳ್ಳಿಗೆ ಬಂದ ಜನ ಸಹಜವಾಗಿ ಮೇಳದತ್ತ ಧಾವಿಸುತ್ತಿದ್ದಾರೆ. ಎಲ್ಲರೂ ರೇಟ್ ಬಹಳ ಜಾಸ್ತಿ ಆಗಿದೆ ಎಂದು ಮಾತಾಡ್ತಿದ್ದರೂ ಮೆಣಸಿನಕಾಯಿ ಖರೀದಿ ಮಾಡಿಕೊಂಡೇ ಹೋಗ್ತೀದಾರೆ.

ಮಾರುಕಟ್ಟೆಯಲ್ಲಿ ಕೆಲ ಕಡೆ ಕಲಬೆರಕೆ ಮೆಣಸಿನಕಾಯಿ ಸಿಗತ್ತೆ ಅನ್ನೋ ಮಾತುಗಳು ಕೇಳಿ ಬರ್ತಿದೆ. ಹೀಗಾಗಿ ನೇರವಾಗಿ ರೈತರಿಂದ ಮೆಣಸಿನಕಾಯಿ ಖರೀದಿ ಮಾಡಲು ಒಣ ಮೆಣಸಿನಕಾಯಿ ಮೇಳ ಆಯೋಜನೆ‌ ಮಾಡಲಾಗಿದೆ. ಗ್ರಾಹಕರೂ ಕೂಡಾ ಮೇಳದತ್ತ ನಿಧಾನವಾಗಿ ಆಗಮಿಸುತ್ತಿದ್ದಾರೆ.

ವರದಿ: ಶಿವಕುಮಾರ್ ಪತ್ತಾರ್, ಟಿವಿ9, ಹುಬ್ಬಳ್ಳಿ 

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ