ಐಷಾರಾಮಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದ ಕೇಂದ್ರ ಸರ್ಕಾರದ ಉದ್ಯೋಗಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 27, 2024 | 3:07 PM

ಹುಬ್ಬಳ್ಳಿ-ಧಾರವಾಡದ ಹಲವೆಡೆ ನಕಲಿ ಚಾವಿ ಬಳಸಿ ಬೈಕ್ ಎಗರಿಸುತ್ತಿದ್ದ ಖತರ್ನಾಕ್​​ ಕಳ್ಳರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರೇ ಈ ಕಳ್ಳತನದ ಮಾಸ್ಟರ್ ಮೈಂಡ್ ಆಗಿರುವುದು ಪೊಲೀಸರೇ ದಂಗಾಗುವಂತೆ ಮಾಡಿದೆ. ಸಧ್ಯ ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮಾಡಬೇಕಿದೆ ಎಂದು ಹು-ಧಾ ಕಮಿಷ್​ನರ್ ಎನ್ ಶಶಿಕುಮಾರ್ ಹೇಳಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಐಷಾರಾಮಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದ ಕೇಂದ್ರ ಸರ್ಕಾರದ ಉದ್ಯೋಗಿ
ಐಷಾರಾಮಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದ ಕೇಂದ್ರ ಸರ್ಕಾರದ ಉದ್ಯೋಗಿ ಅರೆಸ್ಟ್​
Follow us on

ಹುಬ್ಬಳ್ಳಿ, ಸೆ.27: ರೈಲ್ವೆಯಲ್ಲಿ ನೌಕರಿ ಇದ್ದರೂ ಐಷಾರಾಮಿ ಜೀವನ ನಡೆಸಲು ಕಳ್ಳತನದ ದಾರಿ ಹಿಡಿದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಮೂಲದ ನಿವಾಸಿಗಳಾದ ರೇಷ್ಮಾ, ರವಿ, ಆಸ್ಮಾ ಭಾನು, ಮುಬಾರಕ್, ದಸ್ತಗಿರ್ ಬಂಧಿತರು. ಇನ್ನು ಪ್ರಮುಖವಾಗಿ ಮಹಿಳೆಯರೇ ಕಳ್ಳತನದಲ್ಲಿ ಮಾಸ್ಟರ್ ಮೈಂಡ್ ಆಗಿದ್ದಾರೆ. ಇವರು ನಕಲಿ ಚಾವಿ ಬಳಸಿ ಹುಬ್ಬಳ್ಳಿ-ಧಾರವಾಡದ ಹಲವೆಡೆ ಬೈಕ್ ಎಗರಿಸುತ್ತಿದ್ದರು.​ ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿತ್ತು. ಹೆಂಗಸರ ಈ ಕಳ್ಳತನದ ಕೃತ್ಯಕ್ಕೆ ಪೊಲೀಸರೇ ದಂಗಾಗಿದ್ದು, ಸಧ್ಯ ಈ ಖತರ್ನಾಕ್ ಕಳ್ಳರು ಅವಳಿನಗರ ಪೋಲೀಸರ ಬಲೆಗೆ ಬಿದ್ದಿದ್ದಾರೆ.

ಘಟನೆ ಬಗ್ಗೆ ವಿವರಿಸಿದ ಹು-ಧಾ ಕಮಿಷ್​ನರ್ ಎನ್ ಶಶಿಕುಮಾರ್

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ‘ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೇಶ್ವಾಪುರ 3, ಹುಬ್ಬಳ್ಳಿ ಉಪನಗರದಲ್ಲಿ 1 ಹಾಗೂ ಧಾರವಾಡ ಶಹರದಲ್ಲಿ 1 ದ್ವಿಚಕ್ರ ವಾಹನಗಳು ಕಳ್ಳತನವಾಗಿದ್ದವು. ಈ ಕುರಿತು ಪ್ರಕರಣ ಕೂಡ ದಾಖಲಾಗಿತ್ತು. ಹೇಗಾದರೂ ಮಾಡಿ ಕಳ್ಳರನ್ನ ಹಡೆಮುರಿ ಕಟ್ಟಲು ಎಸಿಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಿ 12 ದ್ವಿಚಕ್ರ ವಾಹನಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದರು.

ಇದನ್ನೂ ಓದಿ:ಒಂದು ದಿನಕ್ಕೆ ನಾಲ್ಕರಿಂದ ಎಂಟು ಮನೆಕಳ್ಳತನ; ಪೊಲೀಸರಿಗೆ ತಲೆನೋವಾಗಿದ್ದ ಖತರ್ನಾಕ್​ ಖದೀಮರ ಬಂಧನ 

ಹೆಣ್ಣುಮಕ್ಕಳು ಈ ಕಳ್ಳತನದಲ್ಲಿ ಭಾಗಿ ಆಗಿರೋದು ಅಚ್ಚರಿ

ಇನ್ನು ಹೆಣ್ಣುಮಕ್ಕಳು ಈ ಕಳ್ಳತನದಲ್ಲಿ ಭಾಗಿ ಆಗಿರುವುದು ಅಚ್ಚರಿ ಮೂಡಿಸಿದೆ. ಕಿಮ್ಸ್, ಕೇಶ್ವಾಪುರ ಸೇರಿ ಜನದಟ್ಟಣೆ ಇರುವ ಕಡೆಗಳಲ್ಲಿ ನಕಲಿ ಚಾವಿಗಳನ್ನು ಬಳಸಿ ಕಳ್ಳತನ ಮಾಡುತ್ತಿದ್ದರು. ನಂತರ ಸಾರ್ವಜನಿಕರಿಗೆ ಅರ್ಜೆಂಟ್ ಮಾರಾಟ ಮಾಡುವುದಿದೆ ಎಂದು ಹೇಳಿ 15 ರಿಂದ  20 ಸಾವಿರಗಳಿಗೆ ಮಾರಾಟ ಮಾಡುತ್ತಿದ್ದರು. ಮೊದಲಿಗೆ 5ರಿಂದ 10 ಸಾವಿರ ತೆಗೆದುಕೊಳ್ಳುತ್ತಿದ್ದ ಖದೀಮರು, ದಾಖಲೆಗಳನ್ನು ತಂದು ಕೊಟ್ಟ ನಂತರ ಉಳಿದ ಮೊತ್ತ ನೀಡುವಂತೆ ಹೇಳುತ್ತಿದ್ದರು.

ಬೈಕ್ ಕದ್ದ ಕೂಡಲೇ ನಂಬರ್ ಪ್ಲೇಟ್ ಬದಲಾಯಿಸ್ತಿದ್ದ ಖತರ್ನಾಕ್​ಗಳು

ಕಳ್ಳತನದ ರೂವಾರಿಗಳಾದ ರೇಷ್ಮಾ ಮತ್ತು ರವಿ ಖದ್ದ ಬೈಕ್​ಗಳನ್ನು ಆಸ್ಮಾ ಭಾನು, ಮುಬಾರಕ್, ದಸ್ತಗಿರ್ ಎಂಬುವವರು ಮಾರಾಟ ಮಾಡುತ್ತಿದ್ದರು. ಬೈಕ್ ಕದ್ದ ಕೂಡಲೇ ನಂಬರ್ ಪ್ಲೇಟ್ ಬದಲಾಯಿಸುತ್ತಿದ್ದ ಇವರು, ಬೈಕ್ ಅನ್ನು ಸಂಪೂರ್ಣ ಬದಲಾವಣೆ ಮಾಡಲಾಗುತ್ತಿತ್ತು. ಇನ್ನು ಈ ಕುರಿತು ಮುಬಾರಕ್ ಮೇಲೆ ಸವಣೂರ ಪೊಲೀಸ್ ಠಾಣೆಯಲ್ಲಿ 2023ರಲ್ಲಿ ಪ್ರಕರಣ ದಾಖಲಾಗಿತ್ತು. ಉಳಿದವರ ಮೇಲೆ ಪ್ರಕರಣ ಇರುವುದು ಕಂಡು ಬಂದಿಲ್ಲ.

ನೌಕರಿ ಇದ್ದರೂ ಐಷಾರಾಮಿ ಜೀವನ ನಡೆಸಲು ಕಳ್ಳತನದ ದಾರಿ

ಅಚ್ಚರಿ ಅಂದರೆ ಆಸ್ಮಾ ಭಾನು ಮತ್ತು ಮುಬಾರಕ್ ಎಂಬುವವರು ರೈಲ್ವೆ ನೌಕರರಾಗಿದ್ದಾರೆ. ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೆಣ್ಣುಮಕ್ಕಳು ಇಂತಹ ಕೆಲಸದಲ್ಲಿ ಭಾಗಿಯಾಗಿರೋದು ನಾವು ನೋಡಿರಲಿಲ್ಲ. ಇನ್ನು ಹೆಚ್ಚಿನ ತನಿಖೆ ಮಾಡಬೇಕಿದೆ ಎಂದರು.

ಶೋಕಿ ಮಾಡಲು ಬೈಕ್​ ಕದಿಯುತ್ತಿದ್ದ ಮೂವರು ಕಳ್ಳರ ಬಂಧನ

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ, ಶೋಕಿ ಮಾಡಲು ಬೈಕ್​ಗಳನ್ನ ಕದಿಯುತ್ತಿದ್ದ ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಹೊಸಕೋಟೆ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮನೆ ಮುಂದೆ‌ ನಿಲ್ಲಿಸಿದ್ದ ಬೈಕ್​ಗಳನ್ನ ಕದ್ದು ಎಸ್ಕೇಪ್ ಆಗುತ್ತಿದ್ದರು. ಬೈಕ್ ಕಳ್ಳತನಗಳು ಹೆಚ್ಚಾದ ಹಿನ್ನೆಲೆ ವಿಶೇಷ ಕಾರ್ಯಾಚರಣೆ ನಡೆಸಿ ಕೋಲಾರ ಮೂಲದ ಮಂಜುನಾಥ್ ಬಾಲು ಮತ್ತು ರಾಮು ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ 25 ಕ್ಕೂ ಅಧಿಕ ಕದ್ದ ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Fri, 27 September 24