Belagavi Jain Muni Murder: ಆರೋಪಿಯನ್ನು ರಕ್ಷಿಸಲು ಪ್ರಯತ್ನ ಪಡ್ತಾರೆ ಅಂದ್ರೆ ಇದು ಆಘಾತಕಾರಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

|

Updated on: Jul 09, 2023 | 7:11 PM

ಸರ್ವಸಂಗ ಪರಿತ್ಯಾಗ ಮಾಡಿದಂತ ಸ್ವಾಮಿಗಳ ಹತ್ಯೆ ಇದು. ಇದರ ಬಗ್ಗೆ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆರೋಪಿಯನ್ನು ರಕ್ಷಿಸಲು ಪ್ರಯತ್ನ ಪಡ್ತಾರೆ ಅಂದ್ರೆ ಇದು ಆಘಾತಕಾರಿ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Belagavi Jain Muni Murder: ಆರೋಪಿಯನ್ನು ರಕ್ಷಿಸಲು ಪ್ರಯತ್ನ ಪಡ್ತಾರೆ ಅಂದ್ರೆ ಇದು ಆಘಾತಕಾರಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Follow us on

ಧಾರವಾಡ (Dharwad) : ಹಿರೇಕೋಡಿಯ ಜೈನ ಮುನಿ ಹತ್ಯೆ (Belagavi Jain Muni Murder Case) ಅತ್ಯಂತ ಆಘಾತವನ್ನುಂಟು ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ಬೇಸರ ವ್ಯಕ್ತಪಡಿಸಿದ್ದಾರೆ‌. ಜೈನ ಮುನಿಗಳ ಹತ್ಯೆ ಊಹಿಸಿಕೊಳ್ಳಲು ಅಸಾಧ್ಯ, ಶಾಸಕ ಅಭಯ ಪಾಟೀಲ ಅವರು ಹೇಳಿದಂತೆ ಆರಂಭದಲ್ಲಿ ಅಲ್ಲಿ ಸಿಕ್ಕ ಆರೋಪಿಯ ರಕ್ಷಣೆ ಮಾಡಲು ಸರ್ಕಾರ ಪ್ರಯತ್ನ ಮಾಡಿತು ಎಂಬುದು ಆಘಾತಕಾರಿ ಸಂಗತಿ ಎಂದು ಅವರು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ಮಾಡಬೇಕು ಎಂದು ಒತ್ತಾಯಿಸಿರುವ ಅವರು, ಯಾವುದೇ ಕಾರಣಕ್ಕೂ ಸರ್ಕಾರ ಅಪರಾಧಿಗಳ ರಕ್ಷಿಸಲು ಪ್ರಯತ್ನ ಮಾಡಬಾರದು ಎಂದಿದ್ದಾರೆ‌.

ಸರ್ವಸಂಗ ಪರಿತ್ಯಾಗ ಮಾಡಿದಂತ ಸ್ವಾಮಿಗಳ ಹತ್ಯೆ ಇದು. ಇದರ ಬಗ್ಗೆ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆರೋಪಿಯನ್ನು ರಕ್ಷಿಸಲು ಪ್ರಯತ್ನ ಪಡ್ತಾರೆ ಅಂದ್ರೆ ಇದು ಆಘಾತಕಾರಿ. ವರೂರು ಸ್ವಾಮಿಗಳು ಈ ಅನ್ಯಾಯದ ವಿರುದ್ಧ ಸತ್ಯಾಗ್ರಹ ಮಾಡ್ತೇನೆ ಎಂದಿದ್ದಾರೆ ನಾನು ಅವರೊಂದಿಗೆ ಮಾತನಾಡುವೆ ಎಂದರು.

ಇದೇ ವೇಳೆ ಪ್ರಗತಿಪರರು ಎಂದು ಹೇಳಿಕೊಳ್ಳುವವರು ಯಾವಾಗಲೂ ಒಂದು ಸಮುದಾಯದ ಪರವಾಗಿ ತುಷ್ಟಿಕರಣದ ಮಾತಾಡ್ತಾರೆ. ಆದ್ದರಿಂದ ಅವರಿಗೆ ಈಗ ಮಾತನಾಡಲು ಧೈರ್ಯವಿಲ್ಲ. ನಾನು ಸ್ಪಷ್ಟವಾಗಿ ಹೇಳುತ್ತೇನೆ ಯಾವುದೇ ವ್ಯಕ್ತಿ ಹಾಗೂ ಧಾರ್ಮಿಕ ಮುಖಂಡರ ಕೊಲೆಯನ್ನು ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ಜೈನ ಮುನಿಗಳು ಸರ್ವಸಂಘ ಪರಿತ್ಯಾಗಿಗಳಾಗಿರುತ್ತಾರೆ, ಅವರನ್ನು ತುಂಡು ತುಂಡಾಗಿ ಮಾಡಿದ್ದಾರೆ.

ಇದು ಬಹಳಷ್ಟು ಜನರಿಗೆ ಆಘಾತವನ್ನು ತಂದಿದೆ. ಅದೇ ಕಾರಣಕ್ಕೆ ಗುಣ ಮಹಾರಾಜರು ಹೋರಾಟಕ್ಕೆ ಇಳಿಯುತ್ತೇನೆ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಆರೋಪಿಗಳ ರಕ್ಷಣೆಗೆ ಕೈ ಹಾಕದೇ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಒತ್ತಾಯಿಸಿದ್ದಾರೆ.

ಧಾರವಾಡ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:05 pm, Sun, 9 July 23