ಜೈನ ಮುನಿಗಳ ದೇಹ ಕತ್ತರಿಸಿ ಬೋರ್ವೆಲ್ಗೆ ಹಾಕಿದ್ರು, ಮುಂದೆ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ತೀವಿ -ಗೃಹ ಸಚಿವ ಡಾ.ಜಿ.ಪರಮೇಶ್ವರ್
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಡಾ. ಜಿ ಪರಮೇಶ್ವರ, ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸಿದಂತೆ ನೋಡಿಕೊಳ್ತೀವಿ ಎಂದು ಭರವಸೆ ಕೊಟ್ಟಿದ್ದಾರೆ.

ಹುಬ್ಬಳ್ಳಿ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ(Acharya Sri Kamakumara Nandi Maharaj) ಬರ್ಬರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣ ಸಂಬಂಧ ಹುಬ್ಬಳ್ಳಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್(Dr G Parameshwar) ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಲ್ಲ, ತಾರತಮ್ಯ ಮಾಡಲ್ಲ. ಕೊಲೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ತೀವಿ ಎಂದು ಭರವಸೆ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಡಾ. ಜಿ ಪರಮೇಶ್ವರ, ಅಪರಾಧಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಇದು ಸ್ವಾಭಾವಿಕ ಪದ್ದತಿ, ಇದರಲ್ಲಿ ತಾರತಮ್ಯ ಪ್ರಶ್ನೆ ಇಲ್ಲ. ಘಟನೆ ಆದ ಮೇಲೆ ಅರೆಸ್ಟ್ ಮಾಡಿದ್ದಾರೆ. ದೇಹ ಕತ್ತರಿಸಿ ಬೋರ್ವೆಲ್ಗೆ ಹಾಕಿದ್ರು. ನಾನು ನಮ್ಮ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ವರೂರಲ್ಲಿ ಜೈನ ಮುನಿಗಳು ಉಪವಾಸ ಕೂತಿದ್ದಾರೆ. ಅವರ ಬೇಡಿಕೆ ಕೇಳುತ್ತೇನೆ. ಮುಂದಿನ ದಿನದಲ್ಲಿ ಈ ರೀತಿ ಆಗದಂತೆ ನೋಡಿಕೊಳ್ತೀವಿ. ನಮ್ಮ ಇಲಾಖೆ ಸಮರ್ಥವಾಗಿದೆ. ಅರೆಸ್ಟ್ ಮಾಡಿದ್ದಾರೆ, ತನಿಖೆ ಶುರುವಾಗಿದೆ. ಸಿಬಿಐಗೆ ಕೊಡೋ ಅಗತ್ಯ ಕಾಣಲ್ಲ. ನಮ್ಮ ಇಲಾಖೆಯ ತನಿಖೆ ಮುಗಿದ ಮೇಲೆ ಸತ್ಯಾಸತ್ಯತೆ ಗೊತ್ತಾಗಲಿದೆ. ಕಾನೂನು ಕ್ರಮ ಆಗತ್ತೆ, ಸುಮ್ನೆ ಅಪವಾದ ಮಾಡಬಾರದು. ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗ್ತಿಲ್ಲ. ಅವರಲ್ಲಿ ಆಂತರಿಕ ಒಳಜಗಳ ಇದೆ. ಅವರಿಗೆ ಎಷ್ಟರ ಮಟ್ಟಿಗೆ ಜವಾಬ್ದಾರಿ ಇದೆ ಅನ್ನೋದನ್ನು ರಾಜ್ಯದ ಜನ ಗಮನಿಸ್ತಿದಾರೆ ಎಂದರು.
ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡಿ, ನಮ್ಮ ಬೇಡಿಕೆ ಈಡೇರಿಸದಿದ್ದರೆ ದೇಹತ್ಯಾಗಕ್ಕೂ ಸಿದ್ಧ -ಗುಣಧರನಂದಿಶ್ರೀ
ಜೈನಮುನಿಗಳ ಚಿತಾಭಸ್ಮಕ್ಕೆ ನಮಿಸಿ ಶ್ರದ್ಧಾಂಜಲಿ ಅರ್ಪಿಸಿದ ಪ್ರಮೋದ್ ಮುತಾಲಿಕ್
ಇನ್ನು ಮತ್ತೊಂದೆಡೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ತಾಲೂಕಿನ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಜೈನಮುನಿಗಳ ಚಿತಾಭಸ್ಮಕ್ಕೆ ನಮಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೇವಲ ದುಡ್ಡಿಗೋಸ್ಕರ ಕೊಲೆ ಮಾಡಿದ್ದಾರೆಂದು ನನಗೇನು ಅನಿಸಲ್ಲ. ಈ ಕೊಲೆ ಪ್ರಕರಣದ ಹಿಂದೆ ಷಡ್ಯಂತ್ರ ಇದೆ, ಅದನ್ನು ಬೇಧಿಸಬೇಕು. ಕೊಲೆ ಆರೋಪಿಗಳ ಮನೆಗಳಿಗೂ ಬಹಿಷ್ಕಾರ ಹಾಕಬೇಕು. ಆ ಮನೆಯ ತಂದೆ, ತಾಯಿ, ಅಣ್ಣ, ತಮ್ಮ ಎಲ್ಲರಿಗೂ ಗೊತ್ತಾಗಬೇಕು.
ನನ್ನ ಮನೆಯವರು ಹೀಗೆ ಮಾಡಿದ್ರೆ ನಮಗೂ ಶಿಕ್ಷೆ ಆಗುತ್ತೆ ಅಂತಾ ಆ ಮನೆಯವರಿಗೂ ಗೊತ್ತಾಗಬೇಕು. ತಂದೆ, ತಾಯಿ ಮಗನಿಗೆ ಇದೇ ರೀತಿ ಶಿಕ್ಷಣ ಕೊಟ್ಟಿದ್ದೀರಾ? ಸಾಲ ಎಲ್ಲರೂ ಕೊಡ್ತಾರೆ, ವಾಪಸ್ ಕೇಳುವಂತದ್ದು ಧರ್ಮ ಎಲ್ಲರೂ ಕೇಳ್ತಾರೆ. ಪೂಜ್ಯ ಸಂತರಿಗೆ ಶ್ರದ್ಧಾಂಜಲಿ ಅರ್ಪಣೆ ಮಾಡಲು ಬಂದಿದ್ದೇವೆ. ಇದೊಂದು ಅತ್ಯಂತ ದುರದೃಷ್ಟಕರವಾದಂತಹ ಘಟನೆ. ಮಾನವೀಯತೆ, ಮನುಷ್ಯತ್ವ ಎಲ್ಲಿವರೆಗೆ ತಲುಪಿದೆ. ಯಾರನ್ನು ಹೊಡೀತಿದ್ದಾರೆ, ನಡೆಯಬೇಕಾದರೆ ಇರುವೆ ತುಳಿಯಲಾರದಂತ ಸಂತ. ಜೈನಮುನಿ ಅಹಿಂಸಾ ಪರಮೋ ಧರ್ಮ ಅಂತಾ ಹೇಳಿದವರು. ಅವರನ್ನೇ ಪ್ರಾಣಿಗಳನ್ನು ಕತ್ತರಿಸುವ ಮಾದರಿಯಲ್ಲಿ ಸಂತನ ಹತ್ಯೆಗೈದಿದ್ದಾರೆ. ಅಂತಹ ಮಾನಸಿಕತೆ ವಿರುದ್ಧ ನಾವೆಲ್ಲ ಹೋರಾಟ ಮಾಡಬೇಕಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಆಕ್ರೋಶ ಹೊರ ಹಾಕಿದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:26 am, Mon, 10 July 23



