ಕಾಟಾಚಾರಕ್ಕೆ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ; ಸ್ವಾಮೀಜಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ತಾಲೂಕು ದಂಡಾಧಿಕಾರಿ

|

Updated on: Mar 07, 2023 | 10:28 AM

ಕಲಘಟಗಿ ತಹಶೀಲ್ದಾರ್​ ಯಲ್ಲಪ್ಪ ಎಂಬುವವರು ಜಯಂತಿ ಕುರಿತು ಪೂರ್ವಭಾವಿ ಸಭೆ ಕರೆಯದೆ ಕಾಟಾಚಾರದ ಜಯಂತಿ ಆಚರಣೆ ಮಾಡಿದ್ದಾರೆ ಎಂದು ತಹಶೀಲ್ದಾರ್ ಕಚೇರಿ ಮುಂದೆ ವೀರಶೈವ ಸಮಾಜದವರು ಪ್ರತಿಭಟನೆ ಮಾಡಿದ್ದಾರೆ.

ಕಾಟಾಚಾರಕ್ಕೆ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ; ಸ್ವಾಮೀಜಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ತಾಲೂಕು ದಂಡಾಧಿಕಾರಿ
ಕಾಟಾಚಾರಕ್ಕೆ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ; ಸ್ವಾಮೀಜಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ತಾಲೂಕು ದಂಡಾಧಿಕಾರಿ
Follow us on

ಧಾರವಾಡ: ತಹಶೀಲ್ದಾರರೊಬ್ಬರು ಕಾಟಾಚಾರಕ್ಕೆ ಜಗದ್ಗುರು ರೇಣುಕಾಚಾರ್ಯರ ಜಯಂತಿ(Jagadguru Renukacharya’s Jayanti) ಆಚರಣೆ ಮಾಡಿ, ಬಳಿಕ ಸ್ವಾಮೀಜಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ಕಲಘಟಗಿ ತಹಶೀಲ್ದಾರ್​ ಯಲ್ಲಪ್ಪ ಎಂಬುವವರು ಜಗದ್ಗುರು ರೇಣುಕಾಚಾರ್ಯರ ಜಯಂತಿ ಕುರಿತು ಪೂರ್ವಭಾವಿ ಸಭೆ ಕರೆಯದೆ ಕಾಟಾಚಾರದ ಜಯಂತಿ ಆಚರಣೆ ಮಾಡಿದ್ದಾರೆ ಎಂದು ತಹಶೀಲ್ದಾರ್ ಕಚೇರಿ ಮುಂದೆ ಹನ್ನೆರಡು ಎತ್ತಿನ ಮಠದ ಪೀಠಾಧಿಪತಿ ರೇವಣಶಿದ್ದ ಶಿವಾಚಾರ್ಯರ ನೇತೃತ್ವದಲ್ಲಿ ವೀರಶೈವ ಸಮಾಜದವರು ಪ್ರತಿಭಟನೆ ಮಾಡಿದ್ದಾರೆ.

ತಹಶೀಲ್ದಾರ್​ ಯಲ್ಲಪ್ಪ ಬರ್ಮುಡಾ ಧರಿಸಿ ರೇಣುಕಾಚಾರ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ ಮಾಡಿದ್ದು,
ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಿನ್ನೆಲೆ ಸಮಾಜದವರು ಆಕ್ರೋಶಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಸಮಾಜದ ಮುಖಂಡರು ತಹಶೀಲ್ದಾರ್​ ಯಲ್ಲಪ್ಪರನ್ನ ತರಾಟೆಗೆ ತೆಗೆದುಕೊಂಡಿದ್ದು, ಸಾರ್ವಜನಿಕವಾಗಿ ಹನ್ನೆರಡು ಎತ್ತಿನ ಮಠದ ಪೀಠಾಧಿಪತಿಯವರ ಕಾಲಿಗೆ ಬಿದ್ದು ತಹಶೀಲ್ದಾರ್ ಕ್ಷಮೆ ಕೇಳಿದ್ದಾರೆ. ಜೊತೆಗೆ ಮತ್ತೊಮ್ಮೆ ಜಯಂತಿಯನ್ನ ಅದ್ಧೂರಿಯಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:39 am, Tue, 7 March 23