ರಾಷ್ಟ್ರಪತಿ ಕಚೇರಿ ತಲುಪಿದ 40 ಪರ್ಸಂಟೇಜ್ ರಗಳೆ; ಸೂಕ್ತ ಕ್ರಮಕ್ಕೆ ರಾಷ್ಟ್ರಪತಿ ಕಾರ್ಯಾಲಯದಿಂದ ರಾಜ್ಯ ಮುಖ್ಯಕಾರ್ಯದರ್ಶಿಗೆ ನಿರ್ದೇಶನ ಪತ್ರ
ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ್ ಅಮರಗೋಳ ಎಂಬುವವರು ಕಮಿಷನ್ ದಬ್ಬಾಳಿಕೆಗೆ ಬೇಸತ್ತು ಅಕ್ಟೋಬರ್ 20ರಂದು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದರು.
ಹುಬ್ಬಳ್ಳಿ: 40 ಪರ್ಸಂಟೇಜ್ ರಗಳೆ ರಾಷ್ಟ್ರಪತಿ ಕಚೇರಿ ತಲುಪಿದೆ. ಹುಬ್ಬಳ್ಳಿ ಗುತ್ತಿಗೆದಾರರೊಬ್ಬರು ಕಮಿಷನ್ ದಬ್ಬಾಳಿಕೆಗೆ ಬೇಸತ್ತು ರಾಷ್ಟ್ರಪತಿ ಅವರಿಗೆ ದಯಾಮರಣ ಕುರಿತು ಪತ್ರ ಬರೆದಿದ್ದರು. ಸದ್ಯ ಪ್ರಕರಣ ಕುರಿತು ವಿಚಾರಣೆ ನಡೆಸಿ ಕ್ರಮ ಕೈಗೊಂಡ ಬಗ್ಗೆ ಅರ್ಜಿದಾರನೀಗೆ ಮಾಹಿತಿ ನೀಡಲು ರಾಷ್ಟ್ರಪತಿ ಕಚೇರಿ ಸೂಚನೆ ನೀಡಿದೆ.
ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ್ ಅಮರಗೋಳ ಎಂಬುವವರು ಕಮಿಷನ್ ದಬ್ಬಾಳಿಕೆಗೆ ಬೇಸತ್ತು ಅಕ್ಟೋಬರ್ 20ರಂದು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದರು. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ ಕಾರ್ಯಾಲಯದಿಂದ ರಾಜ್ಯ ಮುಖ್ಯಕಾರ್ಯದರ್ಶಿಗೆ ನಿರ್ದೇಶನ ನೀಡಿ ಪತ್ರ ಬಂದಿದೆ. ಇತ್ತೀಚೆಗೆ ಈ ಕುರಿತು ಮಾಧ್ಯಮ ವರದಿ ಹಿನ್ನೆಲೆ ಬಿಲ್ ಮಾಡದ ಕಡೂರು ತಾಲೂಕು ಪಂಚಾಯತ್ ಇಒ ದೇವರಾಜ್ ನಾಯಕ್ ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ: ತಮಿಳುನಾಡಿನ ದೇವಸ್ಥಾನಗಳಲ್ಲಿ ಇನ್ನುಮುಂದೆ ಭಕ್ತರು ಮೊಬೈಲ್ ಫೋನ್ ಬಳಸುವಂತಿಲ್ಲ
ಚಿಕ್ಕಮಗಳೂರು ಜಿಲ್ಲಾಡಳಿತದಿಂದ ನಾಯಕ್ ಸಸ್ಪೆಂಡ್ ಮಾಡಿ ಇಲಾಖಾ ವಿಚಾರಣೆ ಆದೇಶ ನೀಡಿತ್ತು. ಗುತ್ತಿಗೆದಾರ ಬಸವರಾಜ್ ಕೊರೊನಾ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲೂಕಿಗೆ ಕೋವಿಡ್ ಪರಿಕರ ಪೂರೈಕೆ ಮಾಡಿದ್ದರು. ಪರಿಕರ ಪೂರೈಕೆ ಮಾಡಿ ಎರಡು ವರ್ಷ ಕಳೆದರೂ ಅಧಿಕಾರಿಗಳು ಕಮಿಷನ್ ಆಸೆಗೆ ಬಿಲ್ ಮಾಡಲು ಸತಾಯಿಸಿದ್ದರು. ಈಗ ನಾಯಕ್ ಅಮಾನತು ಆಗಿದ್ರೂ, ಇನ್ನೂ ಬಿಲ್ ಮಾಡದೇ ಕೆಲ ಪಿಡಿಓಗಳು ಮೊಂಡುತನ ತೋರುತ್ತಿದ್ದಾರೆ. ಚಿಕ್ಕಮಗಳೂರು ಕೆಲ ಅಧಿಕಾರಿಗಳ ಕರ್ತವ್ಯ ಲೋಪದ ಪರಿಣಾಮ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜು ಆಗುತ್ತಿದೆ. ಜಿಲ್ಲಾಡಳಿತದಿಂದ ಈ ಬಗ್ಗೆ ಎರಡು ಬಾರಿ ಎರಡು ತಾಲೂಕಿನ ಪಿಡಿಓ ಗಳ ಜೊತೆ ಸಭೆ ನಡೆದಿದೆ. ಜಿಲ್ಲಾಡಳಿತ ಬಿಲ್ ಪಾವತಿ ಮಾಡಲು ಸೂಚಿಸಿದ್ರು, ತಾಲೂಕು ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:02 am, Sat, 3 December 22