ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ರಣದಮ್ಮ ಕಾಲೋನಿಯಲ್ಲಿ ದೊಡ್ಡಮ್ಮನನ್ನೇ ಕೊಂದಿದ್ದ(Murder) ಆರೋಪಿ ಮಹಾಂತೇಶನನ್ನು ಕಸಬಾಪೇಟೆ ಠಾಣೆ ಪೊಲೀಸರು(Kasabapete Police Station) ಬಂಧಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಚಿನ್ನದ ಆಸೆಗೆ ಕಮಲಮ್ಮ(72)ನನ್ನು ಕೊಂದು ಕಿವಿಯೋಲೆ ಕದ್ದು ಪರಾರಿಯಾಗಿದ್ದ ಆರೋಪಿ ಮಹಾಂತೇಶ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಮಹಾಂತೇಶನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಅಕ್ಟೋಬರ್ 24ರಂದು ದೊಡ್ಡಮ್ಮ ಕಮಲಮ್ಮ ಮಲಗಿದಾಗ ಕೊಲೆ ಮಾಡಿ ಕಿವಿಯೋಲೆ, ಬಂಗಾರದ ಸರ ಕದ್ದು ಮಹಾಂತೇಶ್ ಪರಾರಿಯಾಗಿದ್ದ. ದೊಡ್ಡಮ್ಮನ ಮನೆಯಲ್ಲಿ ಎರಡು ದಿನ ವಾಸವಿದ್ದು, ಬಂಗಾರಕ್ಕಾಗಿ ಕೊಲೆ ಮಾಡಿದ್ದ. ಕಮಲಮ್ಮನ ಮಗ ಪ್ರಭಯ್ಯ ತಾಯಿ ಕೊಲೆಯಾದ ಬಗ್ಗೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಎರಡು ತಿಂಗಳ ಬಳಿಕ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸರು ಬೆಳಗಾವಿಯಲ್ಲಿ ಪಾಪಿ ಮಹಾಂತೇಶ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅಲರ್ಜಿ ಎಂದು ಆಸ್ಪತ್ರೆ ಸೇರಿದ ನಾಲ್ಕು ತಿಂಗಳ ಮಗು ಸಾವು; ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ಆಸ್ತಿ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟವಾಗಿದ್ದು ಯುವಕನ ಮೇಲೆ ಗುಂಡು ಹಾರಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೊಡೆದಾಟದಲ್ಲಿ ನಿಶ್ಚಲ್(30) ಎಂಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು ತಲೆ, ಕೈಗೆ ಗಂಭೀರ ಪೆಟ್ಟು ಬಿದ್ದಿದೆ. ಇದಕ್ಕೂ ಮೊದಲು ತೀರ್ಥ (28) ಎಂಬಾತನ ಮೇಲೆ ನಿಶ್ಚಲ್ ಶೂಟ್ ಮಾಡಿದ ಆರೋಪ ಕೇಳಿ ಬಂದಿದೆ.
ಗುಂಡು ತಾಗದೆ ತೀರ್ಥ ಪಾರಾಗಿದ್ದು ತೀರ್ಥ ಚಲಾಯಿಸುತ್ತಿದ್ದ ಜೀಪಿಗೆ ಗುಂಡು ತಗುಲಿದೆ. ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಬ್ಬರು ಯುವಕರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:52 am, Thu, 29 December 22