ಧಾರವಾಡ: ಕರ್ತ್ಯವ್ಯದಲ್ಲಿ ಇರುವಾಗಲೇ ಹುಬ್ಬಳ್ಳಿಯ (Hubli) ನಗರ ಸಾರಿಗೆ ಬಸ್ ಕಂಡಕ್ಟರ್ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕೊಪ್ಪಳ (Koppal) ಜಿಲ್ಲೆಯ ನಿವಾಸಿ ಬಸ್ ಕಂಡಕ್ಟರ್ ಮಹೇಶ್ವರ ಹೂಗಾರ್ ಮೃತ ವ್ಯಕ್ತಿ. ನಗರ ಸಾರಿಗೆ ಬಸ್ ಹುಬ್ಬಳ್ಳಿಯ ಸಿಬಿಟಿ ಇಂದ ಗಾಮನಗಟ್ಟಿಗೆ ಹೊರಟಿತ್ತು. ಈ ವೇಳೆ ಬಸ್ಗೆ ಟಿಕೆಟ್ ಚೆಕಿಂಗ್ ಮಾಡಲು ಇನ್ಸಪೆಕ್ಟರ್ ಮಂಗಳ ಬಸ್ ಹತ್ತಿದ್ದಾರೆ. ಆಗ ಬಸ್ ಕಂಡಕ್ಟರ್ ಮಹೇಶ್ವರ ಹೂಗಾರ್ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಕಂಡಕ್ಟರ್ಗೆ ಹೃದಯಾಘಾತವಾದ ತಕ್ಷಣ ಚೆಕಿಂಗ್ ಇನ್ಸಪೆಕ್ಟರ್ ಮಂಗಳ ಬಸ್ ಬಿಟ್ಟು ಓಡಿ ಹೋಗಿದ್ದಾರೆ. ಹೀಗಾಗಿ ಚೆಕಿಂಗ್ ಇನ್ಸಪೆಕ್ಟರ್ ಮಂಗಳ ಬಂದಿರೋ ಕಾರಣದಿಂದ ಹೃದಯಾಘಾತ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಪ್ರಕರಣವನ್ನು ಮುಚ್ಚಿ ಹಾಕಲು ನಗರ ಸಾರಿಗೆ ಇಲಾಖೆ ಡಿಪೋ ಮ್ಯಾನೇಜರ್ ಯತ್ನಿಸುತ್ತಿರುವ ಆರೋಪ ಕೇಳಿ ಬಂದಿದೆ.
ಸಾವಿನಲ್ಲಿ ಒಂದಾದ ದಂಪತಿ: ಹುಬ್ಬಳ್ಳಿ ತಾಲೂಕಿನ ಶಿರಗುಪ್ಪ ಗ್ರಾಮದಲ್ಲಿ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಶಿವಪುತ್ರಪ್ಪ ನೆಲಗುಡ್ಡ (90) ಬಸಮ್ಮ (86) ಮೃತ ದಂಪತಿಗಳು. ಶಿವಪುತ್ರಪ್ಪ ನೆಲಗುಡ್ಡ (90) ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ನಿಧನ ಹೊಂದಿದರು. ಇವರ ಅಂತ್ಯಕ್ರಿಯೆ ಸಮಯದಲ್ಲಿ ಪತ್ನಿ ಬಸಮ್ಮ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹೀಗೆ ಸಾವಿನಲ್ಲೂ ಒಂದಾದ ದಂಪತಿಗಳನ್ನು ಅಕ್ಕ ಪಕ್ಕವೇ ಅಂತ್ಯಕ್ರೀಯೆ ಮಾಡಿದರು.
ಲಿಫ್ಟ್ ಕುಸಿದು ಬಿದ್ದು ಕಾರ್ಮಿಕ ಸಾವು
ಕೋಲಾರ: ಲಿಫ್ಟ್ ಕುಸಿದು ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೋಲಾರ ನಗರದ ಹೊರವಲಯದಲ್ಲಿ ನಡೆದಿದೆ. ನಾರಾಯಣಸ್ವಾಮಿ(61) ಮೃತ ಕಾರ್ಮಿಕ. ನಿರ್ಮಾಣ ಹಂತದಲ್ಲಿದ್ದ, ರಾಯಲ್ ಎನ್ಫೀಲ್ಡ್ ಶೋ ರೂಂ ಕಟ್ಟಡದಲ್ಲಿನ ಲಿಫ್ಟ್ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಕಾರ್ಮಿಕರಾದ ಸುಮಿತ್ರಮ್ಮ, ರಂಗಪ್ಪ, ಅಮರಾವತಿ, ಆಂಜಿನಪ್ಪಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳುಗಳನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 5:43 pm, Tue, 1 November 22