AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hubli Land Mafia: ಹುಬ್ಬಳ್ಳಿಯ ಗುಳುಂ ಗ್ಯಾಂಗ್ ಪಾಲಿಕೆಯ ಭೂ ಆಸ್ತಿಯನ್ನೇ ಗುಳುಂ ಮಾಡಿಬಿಟ್ಟಿದೆ, ಸ್ಥಳೀಯರು ಹೇಳೋದೇನು?

ಹುಬ್ಬಳ್ಳಿ ಗುಳುಂ ಗ್ಯಾಂಗ್: ಭೂ‌‌ಗಳ್ಳರು (Land Mafia) ಈ ಜಾಗವನ್ನು ಕಬಳಿಸಿ ತಮ್ಮದೇ ಸ್ವಂತ ಆಸ್ತಿ‌ ಎಂಬಂತೆ ಕಾಂಪೌಂಡ್ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಿ ಜಾಗದಲ್ಲಿ ಬೋರ್​ ವೆಲ್ ಕೊರೆದು ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದಾರೆ.

Hubli Land Mafia: ಹುಬ್ಬಳ್ಳಿಯ ಗುಳುಂ ಗ್ಯಾಂಗ್ ಪಾಲಿಕೆಯ ಭೂ ಆಸ್ತಿಯನ್ನೇ ಗುಳುಂ ಮಾಡಿಬಿಟ್ಟಿದೆ, ಸ್ಥಳೀಯರು ಹೇಳೋದೇನು?
ಹುಬ್ಬಳ್ಳಿಯ ಗುಳುಂ ಗ್ಯಾಂಗ್ ಪಾಲಿಕೆಯ ಭೂ ಆಸ್ತಿಯನ್ನೇ ಗುಳುಂ ಮಾಡಿಬಿಟ್ಟಿದೆ, ಸ್ಥಳೀಯರು ಹೇಳೋದೇನು?
TV9 Web
| Edited By: |

Updated on:Dec 07, 2022 | 11:33 AM

Share

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಗುಳುಂ ಗ್ಯಾಂಗ್ ತಲೆ ಎತ್ತಿದೆ.. ಖಾಲಿ ಜಾಗ (property) ಕಂಡ್ರೆ ಸಾಕು ಬೇಲಿ ಹಾಕಿ ಖಬ್ಜ ಮಾಡೋರೇ ಹೆಚ್ಚಾಗಿದ್ದಾರೆ.. ವಿಚಿತ್ರ ಅಂದ್ರೆ ಈ ವಿಚಾರ ರಾಜಕಾರಣಿ, ಅಧಿಕಾರಿಗಳಿಗೆ (Hubli-Dharwad Municipal Corporation) ಗೊತ್ತಿದ್ರೂ ಏನೂ ಮಾಡದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗ್ಯಾಕೆ? ಎಂಬುದು ಸದ್ಯದ ಪ್ರಶ್ನೆ.

ದಿನಾಲೂ ಹುಬ್ಬಳ್ಳಿಯಲ್ಲಿ ಒಂದಿಲ್ಲೊಂದು ಅಪರಾಧ.. ಸುಲಿಗೆ, ದರೋಡೆ ಇಲ್ಲ ಕೊಲೆಗಳು ಇತ್ತೀಚಿಗೆ ಕಾಮನ್ ಅನ್ನೋ ತರಹ ಆಗೋಗಿದೆ. ಯಪ್ಪಾ ಹುಬ್ಬಳ್ಳಿ ಕ್ರೈಂ ಸಿಟಿನಾ ಅನ್ನೋ ರೆಂಜಿಗೆ ಅಪರಾಧಗಳು ಎಲ್ಲೆ ಮೀರಿ ಜನರಲ್ಲಿ ಪೊಲೀಸ್ ಮೇಲೆ ವಿಶ್ವಾಸ ಕಡಿಮೆ ಮಾಡುವಂತಾಗಿದೆ. ಈ ಮಧ್ಯೆ ಹುಬ್ಬಳ್ಳಿಯಲ್ಲಿ ಮತ್ತೊಂದು ಗ್ಯಾಂಗ್ ಸಖತ್ ಆಕ್ಟಿವ್ ಆಗಿ ಡೇ ಆಂಡ್ ನೈಟ್ ಆನ್ ಡ್ಯೂಟಿಯಲ್ಲಿದೆ (Hubli Land Mafia).

ಹೌದು, ಅವಳಿ ನಗರದಲ್ಲಿ ಎಲ್ಲಿಯೇ ಖಾಲಿ ಜಾಗ ಕಂಡರೂ ಸಾಕು ಬೇಲಿ ಹಾಕಿ ಜಾಗವನ್ನೇ ನುಂಗಿ ನೀರು ಕುಡಿಯುವ ಭೂ ಮಾಫಿಯಾ ಎದ್ದು ನಿಂತಿದೆ. ಸರ್ಕಾರಿ ಅಧಿಕಾರಿಗಳ ಗಮನಕ್ಕೆ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗುತ್ತಿದೆ ಅನ್ನೋ ಮಾಹಿತಿ ಇದ್ದರೂ ಜಾಣಗುರುಡು ಪ್ರದರ್ಶಿಸುತ್ತಿದ್ದಾರೆ. ತಡೆದು, ಪಾಲಿಕೆ ಆಸ್ತಿ ಉಳಿಸಿಕೊಳ್ಳಿ ಅಂದ್ರು ಕೇಳೋರಿಲ್ಲ. ಒಮ್ಮೆ ಈ ಕೆಳಗಿನ ಚಿತ್ರದಲ್ಲಿರುವ ಜಾಗವನ್ನು ನೋಡಿಬಿಡಿ. ಸುತ್ತಲ ಭದ್ರಕೋಟೆಯಂತೆ ಕಾಂಪೌಂಡ್ ಹಾಕಿರುವ ಈ ಜಾಗ ಇರೋದು ಹುಬ್ಬಳ್ಳಿ ವಿದ್ಯಾನಗರದ ಪ್ರಗತಿ ಕಾಲೋನಿಯಲ್ಲಿ.. ಬೇಲಿ ಹಾಕಿದವರು ಯಾರು ನೀವೇ ಕೇಳಿ!?

Land Mafia takes over Hubli-Dharwad Municipal Corporation prime property

1961 ರಲ್ಲಿ ಹುಬ್ಬಳ್ಳಿಯ ಪ್ರಗತಿ ಕಾಲೋನಿ ಬಡಾವಣೆ ಅಭಿವೃದ್ಧಿ ಪಡಿಸಲಾಗಿತ್ತು. ನಿವೇಶನಗಳನ್ನು ಹೊರತುಪಡಿಸಿ ಉಳಿದ 31 ಗುಂಟೆ ಜಾಗೆಯನ್ನು ಪಾಲಿಕೆ‌ ತನ್ನ ಆಸ್ತಿ ಎಂದು ಘೋಷಿಸಿದೆ. ಅಷ್ಟೇ ಅಲ್ಲ ಸರ್ಕಾರಿ ದಾಖಲೆಗಳ ಪ್ರಕಾರ ಇದು ಶಾಶ್ವತ ಗ್ರೀನ್ ಬೆಲ್ಟ್ ಜಾಗ ಎಂದೂ ಗುರುತಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಈ ಜಾಗ ಪಾಲಿಕೆ‌ ಒಡೆತನದಲ್ಲಿದೆ.

ಆದರೆ ಈ ಜಾಗದ ಮೇಲೆ ಕಣ್ಣುಹಾಕಿರುವ ಕೆಲ‌ ಭೂಮಾಫಿಯಾ ದುರುಳರು ರಾತ್ರೋರಾತ್ರಿ ಕಬಳಿಸಿಲು ಮುಂದಾಗಿದ್ದು, 31 ಗುಂಟೆ ಜಾಗದ ಸುತ್ತಲು ತಡೆಗೋಡೆ ನಿರ್ಮಿಸಿ‌ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಇದು ಬಡಾವಣೆ ನಿವಾಸಿಗಳನ್ನು ಕೆರಳುವಂತೆ ಮಾಡಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಇದು ಪಾಲಿಕೆಯ ಆಸ್ತಿ. ಅಷ್ಟೇ ಅಲ್ಲದೇ ಶಾಶ್ವತವಾದ ಗ್ರೀನ್ ಬೆಲ್ಟ್ ಪ್ರದೇಶ. ಈ‌ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಕೆ ‌ಮಾಡುವಂತಿಲ್ಲ.

ಶಾಸಕ‌ ಜಗದೀಶ್ ಶೆಟ್ಟರಿಗೂ ಬಡಾವಣೆ ಜನ ದೂರು ನೀಡಿದ್ದಾರೆ:

ಆದರೆ ಭೂ‌‌ಗಳ್ಳರು ಈ ಜಾಗವನ್ನು ಕಬಳಿಸಿ ತಮ್ಮದೇ ಸ್ವಂತ ಆಸ್ತಿ‌ ಎಂಬಂತೆ ಕಾಂಪೌಂಡ್ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಿ ಜಾಗದಲ್ಲಿ ಬೋರ್​ ವೆಲ್ ಕೊರೆದು ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಈ ಜಾಗ ಭೂಗಳ್ಳರ ಕೈಸೇರಲು ಬಿಡುವುದಿಲ್ಲ. ನಮ್ಮ ಬಡಾವಣೆ ಜನರಿಗಾಗಿ ಇಲ್ಲಿ ಉದ್ಯಾನವನ ನಿರ್ಮಿಸಿ ಅಂತಿದಾರೆ ಇಲ್ಲಿನ ಜನರು.

ಕೋಟ್ಯಾಂತರ ರೂಪಾಯಿ ಬೆಲೆ‌ ಬಾಳುವ ಪಾಲಿಕೆ ಭೂಮಿ ಕಬಳಿಸಿದ್ದು, ಅಧಿಕಾರಿಗಳು ಮೌನವಾಗಿದ್ದಾರೆ. ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಾಗಿದ್ದಾರೆ. ಸ್ವತಃ ಪಾಲಿಕೆ ಕಮಿಷನರ್ ಡಾ. ಗೋಪಾಲಕೃಷ್ಣ ಸ್ಥಳ‌ ಪರಿಶೀಲನೆ ಮಾಡಿ, ತೆರವು ಮಾಡುವ ಭರವಸೆ ನೀಡಿದ್ದರು. ಆದರೆ ಆರು‌ ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಶಾಸಕ‌ ಜಗದೀಶ್ ಶೆಟ್ಟರ್ ಗೂ (Jagadish Shettar) ಬಡಾವಣೆ ಜನ ದೂರು ನೀಡಿದ್ದಾರೆ.‌ ಅವರ ಬಳಿಯೂ ಅಷ್ಟೇ ಯಾವುದೇ ಕ್ರಮ ಆಗಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರಿಗೂ ವಿಚಾರ ಗೊತ್ತಿದ್ದರೂ ಯಾಕೆ ಮೌನವಹಿಸಿದ್ದಾರೆ ಅಂತ ಅನುಮಾನ ಮೂಡುವಂತೆ ಮಾಡಿದೆ. (ವರದಿ: ರಹಮತ್ ಕಂಚಗಾರ್, ಟಿವಿ 9, ಹುಬ್ಬಳ್ಳಿ) Also Read: ಹೊನ್ನಾಳಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮತ್ತು ಉಪನ್ಯಾಸಕರಿಗೆ ‘ಕ್ಲಾಸ್’ ತೆಗೆದುಕೊಂಡ ಶಾಸಕ ಎಮ್ ಪಿ ರೇಣುಕಾಚಾರ್ಯ!

Published On - 11:24 am, Wed, 7 December 22

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?