Mallikarjun Kharge: ಖರ್ಗೆ ನೆಹರು ಕುಟುಂಬದ ರಿಮೋಟ್ ಕಂಟ್ರೋಲ್ ಪ್ರೆಸಿಡೆಂಟ್ ಆಗ್ತಾರೆ ಅಷ್ಟೇ – ಪ್ರಲ್ಹಾದ್ ಜೋಶಿ

| Updated By: ಸಾಧು ಶ್ರೀನಾಥ್​

Updated on: Oct 01, 2022 | 5:56 PM

Pralhad Joshi: ಮಲ್ಲಿಕಾರ್ಜುನ್ ಖರ್ಗೆ ಅವರು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಪ್ರಾಯೋಜಿತ ಅಭ್ಯರ್ಥಿ ಅಂತಾ ಸ್ವತಃ ಖರ್ಗೆ ಅವರ ಪ್ರತಿಸ್ಪರ್ಧಿ ಶಶಿ ತರೂರ್ ಅವರೇ ಹೇಳಿದ್ದಾರೆ. ಹೀಗಿರುವಾಗ ಖರ್ಗೆ ಅವರು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾಗಿ ಪಕ್ಷದಲ್ಲಿ ಏನು ಬದಲಾವಣೆ ತರಲು ಸಾಧ್ಯ ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.‌

Mallikarjun Kharge: ಖರ್ಗೆ ನೆಹರು ಕುಟುಂಬದ ರಿಮೋಟ್ ಕಂಟ್ರೋಲ್ ಪ್ರೆಸಿಡೆಂಟ್ ಆಗ್ತಾರೆ ಅಷ್ಟೇ - ಪ್ರಲ್ಹಾದ್ ಜೋಶಿ
ಖರ್ಗೆ ನೆಹರು ಕುಟುಂಬದ ರಿಮೋಟ್ ಕಂಟ್ರೋಲ್ ಪ್ರೆಸಿಡೆಂಟ್ ಆಗ್ತಾರೆ ಅಷ್ಟೇ - ಪ್ರಲ್ಹಾದ್ ಜೋಶಿ
Follow us on

ಧಾರವಾಡ: ನೆಹರು ಕುಟುಂಬದ ಹೊರತಾಗಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಎಐಸಿಸಿಯಲ್ಲಿ ಇದೊಂದು ನಾಟಕ ನಡೆಯುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಕುರಿತು ಧಾರವಾಡದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜೋಶಿ (Pralhad Joshi), ಯಾರೇ ಅಧ್ಯಕ್ಷರಾದರೂ, ಅವರೂ ನೆಹರು ಕುಟುಂಬದ ರಿಮೋಟ್ ಕಂಟ್ರೋಲ್ ಅಧ್ಯಕ್ಷರು ಅಷ್ಟೇ ಎಂದರು (Remote Controlled AICC President).

ಮಲ್ಲಿಕಾರ್ಜುನ್ ಖರ್ಗೆ ಅವರು (Mallikarjun Kharge) ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಪ್ರಾಯೋಜಿತ ಅಭ್ಯರ್ಥಿ ಅಂತಾ ಸ್ವತಃ ಖರ್ಗೆ ಅವರ ಪ್ರತಿಸ್ಪರ್ಧಿ ಶಶಿ ತರೂರ್ ಅವರೇ ಹೇಳಿದ್ದಾರೆ. ಹೀಗಿರುವಾಗ ಖರ್ಗೆ ಅವರು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾಗಿ ಪಕ್ಷದಲ್ಲಿ ಏನು ಬದಲಾವಣೆ ತರಲು ಸಾಧ್ಯ ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.‌

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಏನು ಬದಲಾವಣೆ ಮಾಡಿದ್ರು.‌ ಸೋನಿಯಾ ಗಾಂಧಿ ಅವರ ರಿಮೋಟ್ ಕಂಟ್ರೋಲ್ ಪ್ರಧಾನಿ ಅನಿಸಿಕೊಂಡ್ರು. ಈಗ ಖರ್ಗೆ ಅವರು ರಿಮೋಟ್ ಕಂಟ್ರೋಲ್ ಅಧ್ಯಕ್ಷರಾಗುತ್ತಾರೆ ಅಷ್ಟೇ. ಯಾವುದೇ ಸಹಿ ಹಾಕುವುದಿರಲಿ, ಮನೆಯಿಂದ ಒಂದು ಹೆಜ್ಜೆ ಹೊರ ಹಾಕಬೇಕಂದ್ರೂ, ನೆಹರು ಕುಟುಂಬದವರನ್ನ ಕೇಳಿ ನಿರ್ಧಾರ ಮಾಡಬೇಕಾಗುತ್ತದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ, ನೆಹರೂ ಕುಟುಂಬದ ಹೊರಗಿನವವರು ಪಕ್ಷದ ರಾಷ್ಟ್ರಾಧ್ಯಕ್ಷರು ಎನ್ನುವುದೆಲ್ಲ ಒಂದು ನಾಟಕ ಅಷ್ಟೇ. ಈ ನಾಟಕ ಎಲ್ಲಿಯವರೆಗೆ ನಡೆಯುತ್ತೆ ನಡೆಯಲಿ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ಇದೇ ವೇಳೆ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಲ್ಹಾದ್ ಜೋಶಿ, ರಾಹುಲ್ ಗಾಂಧಿ ಎಲ್ಲಿ ಬೇಕಾದ್ರು ಯಾತ್ರೆ ಮಾಡಲಿ. ಅವರು ಎಲ್ಲೆಲ್ಲಿ ಹೋಗ್ತಾರೋ ಅಲ್ಲೆಲ್ಲಾ ಬಿಜೆಪಿ ಗೆಲ್ಲುತ್ತದೆ. ಹೀಗಾಗಿ ಕಾಂಗ್ರೆಸ್ ನವರಿಗೆ ನಾನು ಮನವಿ ಮಾಡ್ತೇನೆ. ರಾಹುಲ್ ಗಾಂಧಿಯವರನ್ನ ರಾಜ್ಯಕ್ಕೆ ಹೆಚ್ಚು ಹೆಚ್ಚು ಕರೆಸಲಿ, ಅದರಿಂದ ಬಿಜೆಪಿಗೆ ಒಳ್ಳೆಯದು ಎಂದು ಸಚಿವ ಪ್ರಲ್ಹಾದ್ ಜೋಶಿಯವರು ಭಾರತ್ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದರು.