ಕುಂದಗೋಳ ಕುರಿಗಾಹಿ ಹತ್ಯೆ; ಚಿನ್ನದಾಸೆಗೆ ಮಹಿಳೆ ಉಸಿರು ನಿಲ್ಲಿಸಿದ ಕಿರಾತಕ, ಮಹಿಳೆ ಮರ್ಡರ್ ಖಂಡಿಸಿ ಬೃಹತ್ ಪ್ರತಿಭಟನೆ
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಫೆಬ್ರವರಿ 18 ರಂದು ಮಹಿಳೆಯ ಹತ್ಯೆಯಾಗಿತ್ತು. ವಿಠ್ಠಲ್ ಅನ್ನೋ ಕುರಿಗಾಯಿ ಕುರಿ ಮೇಯಿಸೋಕೆ ಅಂತಾ ಹೋದ್ರೆ, ಆತನ ಪತ್ನಿ, ಕಟ್ಟಿಗೆ ತರೋಣ ಅಂತಾ ಜಮೀನಿಗೆ ಹೋಗಿದ್ಲು. ಹೀಗೆ ಜಮೀನಿಗೆ ಹೋದಾಗ ಆಕೆಯನ್ನ ಹತ್ಯೆ ಮಾಡಲಾಗಿತ್ತು.
ಹುಬ್ಬಳ್ಳಿ: ಅದು ಐದು ದಿನದ ಹಿಂದಿನ ಘಟನೆ. ಅಂದ್ರೆ ಫೆಬ್ರವರಿ 18 ರಂದು ಕಟ್ಟಿಗೆ ತರಲು ಅಂತಾ ಜಮೀನಿಗೆ ಹೋಗಿದ್ದ ಕುರಿಗಾಯಿ ಮಹಿಳೆಯನ್ನ ನಿರ್ಜನ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ(Murder) ಮಾಡಲಾಗಿತ್ತು. ಅದೇ ಹತ್ಯೆ ಪ್ರಕರಣ ಕುರುಬ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಹಂತಕನಿಗೆ ಕಠಿಣ ಶಿಕ್ಷೆ ಕೊಡಿ ಅಂತಾ ದೊಡ್ಡ ಹೋರಾಟ(Protest) ನಡೆಸಿದ್ದಾರೆ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಫೆಬ್ರವರಿ 18 ರಂದು ಮಹಿಳೆಯ ಹತ್ಯೆಯಾಗಿತ್ತು. ವಿಠ್ಠಲ್ ಅನ್ನೋ ಕುರಿಗಾಯಿ ಕುರಿ ಮೇಯಿಸೋಕೆ ಅಂತಾ ಹೋದ್ರೆ, ಆತನ ಪತ್ನಿ, ಕಟ್ಟಿಗೆ ತರೋಣ ಅಂತಾ ಜಮೀನಿಗೆ ಹೋಗಿದ್ಲು. ಹೀಗೆ ಜಮೀನಿಗೆ ಹೋದಾಗ ಆಕೆಯನ್ನ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಖಂಡಿಸಿ ಕುರುಬ ಸಮೂದಾಯ ನಿನ್ನೆ ಹುಬ್ಬಳ್ಳಿಯಯಲ್ಲಿ ಬೃಹತ್ ಹೋರಾಟ ನಡೆಸಿದೆ. ಹಂತಕನನ್ನ ಗಲ್ಲಿಗೇರಿಸಿ ಅಂತಾ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು. ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಬೃಹತ್ ಪ್ರತಿಭಟನಾ ಱಲಿ ನಗರದ ನಾನಾ ಬೀದಿಗಳಲ್ಲಿ ಸಂಚರಿಸಿ ತಹಶಿಲ್ದಾರ್ ಕಚೇರಿ ತಲುಪಿತ್ತು.
ಇನ್ನು ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಅಲರ್ಟ್ ಆಗಿರೋ ಪೊಲೀಸರು ತನಿಖೆ ಚುರುಕುಗೊಳಿಸಿದ್ರು. ಧಾರವಾಡ ಎಸ್‌ಪಿ ಕೃಷ್ಣಕಾಂತ ಕುಂದಗೋಳ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಎರಡು ತಂಡ ರಚಿಸಿದ್ರು. ಅದ್ರಂತೆ ಆರೋಪಿಯ ಮೊಬೈಲ್ ಟವರ್ ಲೋಕೆಷನ್ ಆಧಾರದಲ್ಲಿ ತನಿಖೆಗೆ ಇಳಿದ ಪೊಲೀಸರು ಕೋಲಾರದಲ್ಲಿ ಹಂತಕನನ್ನ ಬಂಧಿಸಿದ್ದಾರೆ. ಮಹಮ್ಮದ್ ಅಲಿ ಅನ್ನೋ ರಾಕ್ಷಸನನ್ನ ಅರೆಸ್ಟ್ ಮಾಡಿದ್ದಾರೆ. ಮಹಿಳೆ ಮೈಮೇಲಿನ ಚಿನ್ನಕ್ಕಾಗಿ ಕೊಲೆ ಮಾಡಿರೋದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ರೇಪ್ ಆಗಿದೆಯಾ ಅನ್ನೋ ಬಗ್ಗೆಯೂ ಪೋಸ್ಟ್ ಮಾರ್ಟ್‌ಂ ರಿಪೋರ್ಟ್‌ಗಾಗಿ ಪೊಲೀಸರು ಕಾಯುತ್ತಿದ್ದಾರೆ. ಸಧ್ಯ ಮಹಮದ್ ಅಲಿ ಅನ್ನೋ ಆರೋಪಿಯನ್ನ ಬಂಧಿಸಿರೋ ಪೊಲೀಸರು ಆತನಿಂದ 8 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಹುಬ್ಬಳ್ಳಿ.
ಇದನ್ನೂ ಓದಿ: Petrol Diesel Rate Today: ಪೆಟ್ರೋಲ್, ಡೀಸೆಲ್ ಬೆಲೆ ಈಗ ಎಷ್ಟಿದೆ? ಇಲ್ಲಿದೆ ನಿಮ್ಮೂರಿನ ಇಂಧನ ದರದ ಮಾಹಿತಿ