ಧಾರವಾಡ, ಫೆ.24: ಮಹದಾಯಿ ಯೋಜನೆಗೆ ಸಿಎಂ ಸಿದ್ದರಾಮಯ್ಯ(Siddaramaiah) ಬದ್ಧರಾಗಿದ್ದಾರೆ ಎಂದು ಶಾಸಕ ಕೋನರೆಡ್ಡಿ(Konareddy) ಹೇಳಿದರು. ಧಾರವಾಡ ಜಿಲ್ಲೆಯ ನವಲಗುಂದದ ಮಾಡಲ್ ಹೈಸ್ಕೂಲ್ನಲ್ಲಿ ಆಯೋಜಿಸಿದ್ದ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಹಕ್ಕುಪತ್ರ ವಿತರಣೆ, ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ನವಲಗುಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ದತ್ತ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೆ ನಿನ್ನೆ ಹುಷಾರ ಇರಲಿಲ್ಲ. ಆದರೂ ಬಡವರಿಗಾಗಿ ಅವರು ನವಲಗುಂದಕ್ಕೆ ಬಂದಿದ್ದಾರೆ. ಸುಮಾರು 200 ಕೋಟಿಗೂ ಅಧಿಕ ಕಾಮಗಾರಿಗೆ ಚಾಲನೆ ಕೊಡಲಿದ್ದಾರೆ ಎಂದರು. ಈಗಾಗಲೇ ಬೇಸಿಗೆ ಶುರುವಾಗಿದೆ, ನೀರಿನ ಕೊರತೆ ಇದ್ದು, ನಾವು ಗ್ಯಾರಂಟಿ ಯೋಜನೆ ಮೂಲಕ ಹಣ ಕೊಡುತ್ತಿದ್ದೇವೆ. ಆದರೆ, ಗ್ಯಾರಂಟಿಗಳನ್ನು ಕೆಲವರು ಟೀಕೆ ಮಾಡುತ್ತಿದ್ದಾರೆ. ನಾವು ಗ್ಯಾರಂಟಿ ಕೊಟ್ಟರೂ ಕೂಡ ಅಭಿವೃದ್ಧಿ ಮಾಡಿದ್ದೇವೆ. ಇಡೀ ಕ್ಷೇತ್ರದಲ್ಲಿ ರಸ್ತೆ ಸುಧಾರಣೆ ಮಾಡಲು ಎರಡು ವರ್ಷ ಬೇಕು. ಅದನ್ನು ನಾವು ಅಭಿವೃದ್ಧಿ ಮಾಡ್ತೀವಿ ಎಂದಿದ್ದಾರೆ.
ಇದನ್ನೂ ಓದಿ:ಲೂಟಿ ಹೊಡೆದಿದ್ದಕ್ಕೇ ಅವರನ್ನು ಜನರು ತಿರಸ್ಕರಿಸಿದ್ದು: ಪ್ರಲ್ಹಾದ್ ಜೋಶಿ ಹೇಳಿಕೆಗೆ ಸಿದ್ದರಾಮಯ್ಯ ಕೌಂಟರ್
ಇನ್ನು ಸಿಎಂ ನವಲಗುಂದ ಪಟ್ಟಣದಲ್ಲಿ ಮಹದಾಯಿ ಹೋರಾಟಗಾರರ ಮನವಿ ಸ್ವೀಕಾರ ಮಾಡಿದರು. ಈ ವೇಳೆ ಹೋರಾಟಗಾರ ಸುಭಾಸಗೌಡ ಮಾತನಾಡಿ, ‘ಶಾಸಕ ಕೊನರಡ್ಡಿ ಹಾಗೂ ಕೇಂದ್ರ ಸಚಿವ ಜೋಶಿ ಮಹದಾಯಿ ಸಮಸ್ಯೆ ಇತ್ಯರ್ಥ ಮಾಡುವ ಮಾತನ್ನ ಹೇಳಿದ್ದರು. ಆದರೆ, ಆಗಿಲ್ಲ. ನಾವು ಹೀಗೆಯೇ ಹೋರಾಟ ಮಾಡುತ್ತಲೇ ಇರಬೇಕಾ ಎಂದು ಸಿಎಂ ಬಳಿ ಹೇಳಿದರು. ಬಳಿಕ ಸಿದ್ದರಾಮಯ್ಯ,‘ಮಹದಾಯಿ ಇತ್ಯರ್ಥ ಮಾಡುವುದು ಕೇಂದ್ರದ ಕೈಯಲ್ಲಿ ಇದೆ. ನಾನು ನಿಮ್ಮ ಹೋರಾಟಕ್ಕೆ ಬೆಂಬಲ ನೀಡ್ತೆನೆ ಎಂದು ಹೇಳಿದರು.
ನಂತರ ಸಾಂಕೇತಿಕವಾಗಿ ನೂತನ 50 ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಗೆ ಚಾಲನೆ ನೀಡಿದರು. ಈ ವೇಳೆ ಸಚಿವರಾದ ರಾಮಲಿಂಗಾರೆಡ್ಡಿ, ಸಂತೋಷ್ ಲಾಡ್, ಕೆ.ಜೆ.ಜಾರ್ಜ್, ಹೆಚ್.ಕೆ.ಪಾಟೀಲ್, ಶಾಸಕ ಎನ್.ಹೆಚ್.ಕೋನರೆಡ್ಡಿ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ