Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಕಮೀಷನರ್ ಕಚೇರಿ ಎದುರಿಗಿರುವ ಬಡಾವಣೆಯಲ್ಲೇ ಕಳ್ಳತನ; ಮನೆ ಬೀಗ ಹೊಡೆದು ಲಕ್ಷಾಂತರ ದೋಚಿದ ಖದೀಮರು

ಹುಬ್ಬಳ್ಳಿಯ ಅಶ್ವಮೇಧ ಪಾರ್ಕ್ ಪ್ರದೇಶದಲ್ಲಿ ಕಳ್ಳತನ ನಡೆದಿದೆ. ಖದೀಮರು ಮನೆ ಬೀಗ ಮುರಿದು ಮನೆಯೊಳಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಮನೆ ಮಾಲೀಕ ಗಣಪತಿ ಧಾರವಾಡಕ್ಕೆ ಹೋಗಿ ವಾಪಸ್ ಬರುವುದರೊಳಗೆ ಕಳ್ಳರು ತಮ್ಮ ಕೈಚಳಕ ತೋರಿಸಿ ಎಸ್ಕೇಪ್ ಆಗಿದ್ದಾರೆ.

ಪೊಲೀಸ್ ಕಮೀಷನರ್ ಕಚೇರಿ ಎದುರಿಗಿರುವ ಬಡಾವಣೆಯಲ್ಲೇ ಕಳ್ಳತನ; ಮನೆ ಬೀಗ ಹೊಡೆದು ಲಕ್ಷಾಂತರ ದೋಚಿದ ಖದೀಮರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Feb 08, 2022 | 1:50 PM

ಹುಬ್ಬಳ್ಳಿ: ಪೊಲೀಸ್ ಕಮೀಷನರ್ ಕಚೇರಿ ಎದುರಿನ ಬಡಾವಣೆಯಲ್ಲಿಯೇ ಕಳ್ಳತನ‌ವೊಂದು ನಡೆದಿದೆ. ಹುಬ್ಬಳ್ಳಿಯ ಅಶ್ವಮೇಧ ಪಾರ್ಕ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ 1.50 ಲಕ್ಷ ರೂ ಕಳವು ಮಾಡಿ ಖದೀಮರು ಎಸ್ಕೇಪ್ ಆಗಿದ್ದಾರೆ. ಗಣಪತಿ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದ್ದು ಮಾಲೀಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹುಬ್ಬಳ್ಳಿಯ ಅಶ್ವಮೇಧ ಪಾರ್ಕ್ ಪ್ರದೇಶದಲ್ಲಿ ಕಳ್ಳತನ ನಡೆದಿದೆ. ಖದೀಮರು ಮನೆ ಬೀಗ ಮುರಿದು ಮನೆಯೊಳಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಮನೆ ಮಾಲೀಕ ಗಣಪತಿ ಧಾರವಾಡಕ್ಕೆ ಹೋಗಿ ವಾಪಸ್ ಬರುವುದರೊಳಗೆ ಕಳ್ಳರು ತಮ್ಮ ಕೈಚಳಕ ತೋರಿಸಿ ಎಸ್ಕೇಪ್ ಆಗಿದ್ದಾರೆ. ಮನೆಯಲ್ಲಿದ್ದ ಸುಮಾರು1.50 ಲಕ್ಷ ರೂ ಕಳ್ಳತನವಾಗಿದ್ದು ಮಾಲೀಕ ಗಣಪತಿ ಕಂಗಾಲಾಗಿದ್ದಾರೆ. ಅಲ್ಲದೆ ಗಣಪತಿ ಅವರ ಮನೆ ದೋಚುವ ಮುನ್ನ ಖದೀಮರು ಗಣಪತಿ ಅವರ ಪಕ್ಕದ ಮನೆಯಲ್ಲಿಯೂ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಆದರೆ ಮನೆಯಲ್ಲಿ ಏನೂ ಇಲ್ಲದೆ ಇರುವುದರಿಂದ ನಿರಾಶೆಗೊಂಡ ಕಳ್ಳರು ಖಾಲಿ ಕೈ ಹಿಂತಿರುಗಿದ್ದರು. ನಂತರ ಗಣಪತಿ ಅವರ ಮನೆ ಬೀಗ ಮುರಿದು ನಗದು ದೋಚಿ ಪರಾರಿಯಾಗಿದ್ದಾರೆ.

ಪೊಲೀಸ್ ಕಮಿಷನರ್ ಕಚೇರಿ ಕೂಗಳತೆ ದೂರದಲ್ಲಿಯೇ ಕಳ್ಳತನ ನಡೆದಿದೆ. ಕಳ್ಳರಿಗೆ ಪೊಲೀಸರ ಬಗ್ಗೆ ಭಯವೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸ್ ಕಮಿಷನರ್ ಕಚೇರಿ ಎದುರಿಗೆ ಈ ರೀತಿಯಾದರೆ ದೂರದ ಬಡಾವಣೆ ನಿವಾಸಿಗಳ ಗತಿಯೇನು ಎಂದು ಪ್ರಶ್ನೆ ಮಾಡಿದ್ದಾರೆ. ನವನಗರ ಪೊಲೀಸ್ ಠಾಣೆಗೆ ಖಾಯಂ ಸಿಪಿಐ ಇಲ್ಲದಿರುವುದು ಈ ಕೃತ್ಯಕ್ಕೆ ಕಾರಣ ಎಂದು ಜನತೆ ಅಸಮಾಧಾನ ಹೊರ ಹಾಕಿದೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಕಿಂಗ್ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ಐಫೋನ್ ಕಿತ್ಕೊಂಡು ಪರಾರಿಯಾದ ಖದೀಮರು, ಕೇಸ್ ದಾಖಲು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳರ(Theft) ಹಾವಳಿ ಹೆಚ್ಚಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ನಗರದಲ್ಲಿ ಶಾಸಕನ ಪತ್ನಿ ಮೊಬೈಲ್ ಕದ್ದು ಖದೀಮರು ಪರಾರಿಯಾಗಿರುವ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ 6:45ಕ್ಕೆ ಕಳ್ಳರು ಐಫೋನ್ 11 ಮೊಬೈಲ್ ಫೋನ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಪತ್ನಿ ಶೃತಿ ಖರ್ಗೆ(Shruthi Kharge) ಬೆಳಗ್ಗೆ ವಾಕಿಂಗ್ಎ ಹೋಗಿದ್ದಾಗ ಮೊಬೈಲ್ ಫೋನ್ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.

ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ಎಂದಿನಂತೆ ಭಾನುವಾರ ಕೂಡ ವಾಕಿಂಗ್ಗೆ ಹೋಗಿದ್ದರು. ಈ ವೇಳೆ ಒಬ್ಬರೇ ವಾಕಿಂಗ್ ಮಾಡುತ್ತಿದ್ದನ್ನು ಗಮನಿಸಿದ ಖದೀಮರು ಬೈಕ್ನಲ್ಲಿ ಫಾಲೋ ಮಾಡಿ ನಂತರ ಐಫೋನ್ 11 ಮೊಬೈಲ್ ಫೋನ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಿಯಾಂಕ್ ಖರ್ಗೆ ಪಿಎ ಪ್ರದೀಪ್ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ಇಂಥ ಭಾಷಣ ಶೋಭೆಯಲ್ಲ; ಅರವಿಂದ್ ಕೇಜ್ರಿವಾಲ್​, ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ