ಹುಬ್ಬಳ್ಳಿ, (ಜೂನ್ 19): ಮುಂಬೈ- ಹುಬ್ಬಳ್ಳಿ (Mumbai To Hubballi) ಮಧ್ಯೆ ಇಂಡಿಗೋ 6ಇ (Indigo 6e) ವಿಮಾನಯಾನ ಸೇವೆ ಜುಲೈ 15ರಿಂದ ಪುನಾರಂಭಗೊಳ್ಳಲಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ (pralhad joshi) ಅವರ ಮನವಿ ಮೇರೆಗೆ ಇಂಡಿಗೋ 6 ಇ ವಿಮಾನ ಸಂಚಾರವನ್ನು ಮತ್ತೆ ಶುರು ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ವಿಮಾನಯಾನ ಸಚಿವಾಲಯಕ್ಕೆ ಸಚಿವ ಜೋಶಿ ಧನ್ಯವಾದ ತಿಳಿಸಿದ್ದಾರೆ.
ಇಂಡಿಗೋ 6E ನಿರ್ವಹಣೆಗೆ ಸಚಿವ ಜೋಶಿ ಅವರು ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಚಿವಾಲಯ ಇದೀಗ ವಿಮಾನ ಸಂಚಾರ ಪುನರಾರಂಭಕ್ಕೆ ಕ್ರಮ ಕೈಗೊಂಡಿದ್ದು, ವಿಮಾನ ಸಂಚಾರದ ಸಮಯ ಮಾಹಿತಿಯನ್ನು ಹಂಚಿಕೊಂಡಿದೆ. ಇಂಡಿಗೋ 6ಇ ವಿಮಾನ ಮಧ್ಯಾಹ್ನ 3ಕ್ಕೆ ಮುಂಬೈ ಬಿಟ್ಟು ಸಂಜೆ 4.10ಕ್ಕೆ ಹುಬ್ಬಳ್ಳಿಗೆ ಬಂದಿಳಿಯಲಿದೆ. ನಂತರ ಸಂಜೆ 4.40ಕ್ಕೆ ಹುಬ್ಬಳ್ಳಿಯಿಂದ ನಿರ್ಗಮಿಸಿ ಸಂಜೆ 5.50ಕ್ಕೆ ಮುಂಬೈ ತಲುಪಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.
As proposed, flights on the Mumbai-Hubli-Mumbai route will operate continuously starting 15th July.
Heartfelt thanks to the Civil Aviation Ministry @MoCA_GoI and @IndiGo6E management for their cooperation in implementing this proposal. Daily flights will operate commencing on… pic.twitter.com/Y5vh9eEWqf
— Pralhad Joshi (@JoshiPralhad) June 19, 2024
ಇದನ್ನೂ ಓದಿ: ಸುರಕ್ಷತೆ ಮತ್ತು ಅನುಕೂಲತೆ ಹೊಂದಿರುವ ಇಂತಹ ಕಾರುಗಳನ್ನೇ ಖರೀದಿಸಿ..
ಜುಲೈ 15ರಿಂದ ಪ್ರಾರಂಭ ಆಗಲಿರುವ ವಿಮಾನದ ಟಿಕೆಟ್ ಗಳು ಇಂಟರ್ನೆಟ್ನಲ್ಲಿ ಲಭ್ಯ ಇರುವ ಮಾಹಿತಿಯ ಪ್ರಕಾರ ಸದ್ಯ ಸೇವರ್ ಟಿಕೆಟ್ ಗೆ 6112 ರೂ., ಫ್ಲೆಕ್ಸಿ ಪ್ಲಸ್ ಗೆ 6672 ರೂ. ಮತ್ತು ಸೂಪರ್ ಆರ್ ಇ ಗೆ 17407 ರೂಪಾಯಿ ಇದೆ. ಇದು ಪ್ರತಿದಿನ ಬದಲಾಗುತ್ತಿರುತ್ತದೆ. ಪ್ರಯಾಣದ ದಿನ ಹತ್ತಿರ ಬಂದಂತೆಲ್ಲ ಹೆಚ್ಚಾಗುತ್ತಾ ಹೋಗುತ್ತದೆ.
ದೇಶದ ಪ್ರಮುಖ ಖಾಸಗಿ ವಿಮಾನಯಾನ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಗೋ ಏರ್‌ಲೈನ್ಸ್ ಫೆಬ್ರವರಿ 15 ರಿಂದ ಹುಬ್ಬಳ್ಳಿ-ಮುಂಬೈ ಏರ್‌ಬಸ್ ಎ 320 ಕ್ರಾಫ್ಟ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರೀ ಏರ್ ಟ್ರಾಫಿಕ್( Air traffic controllers- ATC) ದಟ್ಟಣೆಯಿಂದಾಗಿ ಹುಬ್ಬಳ್ಳಿಯ ವಿಮಾನ ಸೇವೆಯನ್ನು ಅಮಾನತುಗೊಳಿಸಲಾಗಿತ್ತು.
ಎಟಿಸಿ ದಟ್ಟಣೆಯಿಂದಾಗಿ ಹಲವು ವಿಮಾನಗಳು ತಡವಾಗುತ್ತಿದ್ದುದರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಬಹಳ ಹೊತ್ತು ಕಾಯಬೇಕಾದ ಪರಿಸ್ಥಿತಿ ಇತ್ತು. ಆದ್ದರಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ತಮ್ಮ ವಿಮಾನಗಳನ್ನು ಕಡಿಮೆ ಮಾಡಲು ಕೇಳಿತ್ತು. ಹೀಗಾಗಿ ಇಂಡಿಗೋ ತನ್ನ ಮುಂಬೈ-ಹುಬ್ಬಳ್ಳಿ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಮಾರ್ಚ್ ಮೊದಲ ವಾರದಿಂದ ಸೇವೆಯನ್ನು ಪುನರಾರಂಭಿಸುವ ನಿರೀಕ್ಷೆಯಿತ್ತು. ಆದರೆ ಮತ್ತೂ 3 ತಿಂಗಳು ತಡವಾಗಿ ಮುಂದಿನ ತಿಂಗಳು ಪ್ರಾರಂಭ ಆಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:20 pm, Wed, 19 June 24