ಪ್ರಮೋದ್ ಮುತಾಲಿಕ್ ಗಡಿಪಾರಿಗೆ ಮುಸ್ಲಿಂ ಮುಖಂಡರು ಮನವಿ: ಹುಬ್ಬಳ್ಳಿ ಪೊಲೀಸ್ ಆಯುಕ್ತೆ ರೇಣುಕಾ ಹೇಳಿದ್ದೇನು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 22, 2023 | 2:49 PM

ನಿನ್ನೆ(ಸೆ.21) ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶ ವಿಸರ್ಜನೆ ವೇಳೆ ಅಂಜುಮನ್ ಸಂಸ್ಥೆಯ ವಿರುದ್ಧ ಮುತಾಲಿಕ್ ಕಿಡಿಕಾರಿದ್ದರು. ಗಣೇಶ ಪ್ರತಿಷ್ಠಾಪನೆಗೆ ಅಡ್ಡಿಪಡಿಸಿದರೆ ಮಸೀದಿಗಳಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡ್ತೀವಿ ಎಂಬ ಹೇಳಿಕೆ ನೀಡಿದ್ದರು. ಮುತಾಲಿಕ್ ಹೇಳಿಕೆ ಬೆನ್ನಲ್ಲೇ ನಿನ್ನೆ ಮುತಾಲಿಕ್ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಮೋದ್ ಮುತಾಲಿಕ್ ಗಡಿಪಾರಿಗೆ ಮುಸ್ಲಿಂ ಮುಖಂಡರು ಮನವಿ: ಹುಬ್ಬಳ್ಳಿ ಪೊಲೀಸ್ ಆಯುಕ್ತೆ ರೇಣುಕಾ ಹೇಳಿದ್ದೇನು?
ಪ್ರಮೋದ್​ ಮುತಾಲಿಕ್​
Follow us on

ಹುಬ್ಬಳ್ಳಿ, ಸೆ.22: ಪ್ರಚೋದನಕಾರಿ ಹೇಳಿಕೆ ವಿಚಾರದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್(Pramod Muthalik) ಮೇಲೆ ಪ್ರಕರಣ ದಾಖಲು ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಹುಬ್ಬಳ್ಳಿ(Hubballi)ಯಲ್ಲಿ ಪ್ರಮೋದ್ ಮುತಾಲಿಕ್ ಗಡಿಪಾರಿಗೆ ಆಗ್ರಹಿಸಿ ಮುಸ್ಲಿಂ ಮುಖಂಡರು ಮನವಿ ಸಲ್ಲಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮುತಾಲಿಕ್ ಮಾಡಿದ್ದಾರೆ. ಈ ಹಿನ್ನೆಲೆ ಮುತಾಲಿಕ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಮುಸ್ಲಿಂ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಮುತಾಲಿಕ್ ಅವರ ಪ್ರಚೋದನಕಾರಿ ಹೇಳಿಕೆ ಖಂಡನೀಯ

ನಿನ್ನೆ(ಸೆ.21) ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶ ವಿಸರ್ಜನೆ ವೇಳೆ ಅಂಜುಮನ್ ಸಂಸ್ಥೆಯ ವಿರುದ್ಧ ಮುತಾಲಿಕ್ ಕಿಡಿಕಾರಿದ್ದರು. ಗಣೇಶ ಪ್ರತಿಷ್ಠಾಪನೆಗೆ ಅಡ್ಡಿಪಡಿಸಿದರೆ ಮಸೀದಿಗಳಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡ್ತೀವಿ ಎಂಬ ಹೇಳಿಕೆ ನೀಡಿದ್ದರು. ಮುತಾಲಿಕ್ ಹೇಳಿಕೆ ಬೆನ್ನಲ್ಲೇ ನಿನ್ನೆ ಮುತಾಲಿಕ್ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ, ಇದೀಗ ಆಯುಕ್ತರಿಗೆ ಮನವಿ ಸಲ್ಲಿದ್ದಾರೆ.

ಇದನ್ನೂ ಓದಿ:ಪ್ರಚೋದನಕಾರಿ ಹೇಳಿಕೆ ಆರೋಪ: ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​​ ವಿರುದ್ದ ಕೇಸ್​ ದಾಖಲು

ಇನ್ನು ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ‘ಮುತಾಲಿಕ್ ಹೇಳಿಕೆ ಕುರಿತಂತೆ ಅಂಜುಮನ್ ಹಾಗೂ ಮುಸ್ಲಿಂ ಬಾಂಧವರಿಂದ ದೂರು ನೀಡಲಾಗಿದೆ. ದೂರಿನನ್ವಯ ಕಾನೂನು ಕ್ರಮ ಜರುಗಿಸಲಾಗುವುದು. ಈ‌ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮ‌ ಕೈಗೊಳ್ಳಲಾಗುವುದು. ಮತ್ತು ಪ್ರಚೋದನಕಾರಿ ಹೇಳಿಕೆ ಹಿನ್ನೆಲೆ ನಿನ್ನೆಯೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಅಂಜುಮನ್ ಸಂಸ್ಥೆಯಿಂದಲೂ ಸಹ ದೂರು ನೀಡಲಾಗಿದೆ. ಮುತಾಲಿಕ್ ಅವರನ್ನ ಗಡಿಪಾರು ಮಾಡುವಂತೆ ಮನವಿ ಕೊಡಲಾಗಿದೆ. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಘಟನೆ ವಿವರ

ನಿನ್ನೆ ಈದ್ಗಾ ಮಸೀದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಭೇಟಿ ನೀಡಿದ್ದ ಮುತಾಲಿಕ್​, ಈ ವೇಳೆ ಮಸೀದಿಯಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ. ಅಂಜುಮನ್ ಸಂಸ್ಥೆಯವರ ದುರದ್ದೇಶ ಏನೆಂದು ಈಗ ಎಲ್ಲರಿಗೂ ಗೊತ್ತಾಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರು ದೇಶದ್ರೋಹಿಗಳು. ನಿಮ್ಮ ನಮಾಜ್‌ಗೂ ನಾವು ಅಡ್ಡಿಪಡಿಸಬೇಕಾಗುತ್ತದೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ನಮಾಜ್‌ಗೆ ಅವಕಾಶ ಕೊಡದಂತೆ ಕೋರ್ಟ್‌ಗೆ ಹೋಗುತ್ತೇವೆ. ಇದು ಪಾಕಿಸ್ತಾನವಲ್ಲ, ನಿಮ್ಮಪ್ಪನ ಆಸ್ತಿಯಲ್ಲ ಎಂದು ಕಿಡಿಕಾರಿದ್ದರು. ಈ ಹಿನ್ನಲೆ ಅವರ ಮೇಲೆ ದೂರು ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ