ಹುಬ್ಬಳ್ಳಿ: ಇವತ್ತು ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. 500 ವರ್ಷಗಳ ಕಳಂಕ ದೂರವಾಗಿ, ನನ್ನ ರಾಮ ಮನೆಗೆ ಬಂದ ಅನ್ನೋ ಸಂಭ್ರಮ ಇದೆ. ಇತಿಹಾಸದಲ್ಲಿ ಕಂಡು ಕೇಳರಿಯದ ಸಂಭ್ರಮ, ಪೂಜೆ ಕಾಣಿಸ್ತಿದೆ ಎಂದು ಅಯೋಧ್ಯೆಯಲ್ಲಿ ಬಾಲ ರಾಮ ಪ್ರಾಣ ಪ್ರತಿಷ್ಠಾಪನೆ ಬಳಿಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.
ಶ್ರೇಷ್ಠರೊಬ್ಬರು ಬಂದು ಇದನ್ನು (ಪ್ರಾಣ ಪ್ರತಿಷ್ಠಾಪನೆ) ಮಾಡಲಿ ಅಂತಾ 500 ವರ್ಷಗಳ ಕಾಲ ರಾಮ ಕಾಯ್ದಿದ್ದು, ಇವತ್ತು ಸತ್ ಶ್ರೇಷ್ಠ ಸಂತ ಮೋದಿ ಅವರಿಂದ ಈ ಕೆಲಸ ನೆರವೇರಿದೆ. ಒಬ್ಬ ಕಳಂಕರಹಿತ, ಉತ್ತಮ ಸಮಾಜಕ್ಕಾಗಿ ತನ್ನ ಬದುಕನ್ನೇ ಮುಡಿಪಿಟ್ಟು ಕೆಲಸ ಮಾಡ್ತಿದಾರೆ. ರಾಮನ ಆದರ್ಶವನ್ನೇ ಪಾಲಿಸುತ್ತಾ ದೇಶ ಮುನ್ನಡೆಸುತ್ತಿದ್ದಾರೆ ಎಂದು ಸಚಿವ ಜೋಶಿ ಸಂತಸ ಪಟ್ಟರು.
ಎಲ್ಲೋ ದೂರ ಹೋದ ರಾಮ ಇಂದು ನನ್ನ ಮನೆಗೆ ಬಂದಿದ್ದಾನೆ ಅನ್ನೋ ಭಾವನೆ ಇದೆ. ದೇಶದ ಬಹುತೇಕ ಕಡೆ ಭಕ್ತಿ ಭಾವದಿಂದ ಕೆಲಸ ಮಾಡ್ತೀದಾರೆ. ರಾಮನ ಪ್ರಾಣ ಪ್ರತಿಷ್ಠಾಪನೆಯಿಂದ ಬರೋ ಐದು ವರ್ಷದಲ್ಲಿ ರಾಮ ರಾಜ್ಯದತ್ತ ದಾಪುಗಾಲು ಹಾಕ್ತೀವಿ ಎಂದು ಸಚಿವ ಜೋಶಿ ಹೇಳಿದರು.
ವೇದಾಂತವೇದ್ಯೋ ಯಜ್ಞೇಶಃ ಪುರಾಣಪುರುಷೋತ್ತಮಃ |
ಜಾನಕೀವಲ್ಲಭಃ ಶ್ರೀಮಾನ್ ಅಪ್ರಮೇಯ ಪರಾಕ್ರಮಃ ||ಶತಮಾನಗಳ ತಪಸ್ಸು, ಲಕ್ಷಾಂತರ ಕರಸೇವರಕರ ಬಲಿದಾನ ಮತ್ತು ಕೋಟ್ಯಂತರ ಹಿಂದೂ ಮನಗಳ ಪ್ರಾರ್ಥನೆಯ ಫಲವಾಗಿ ಪ್ರಧಾನಮಂತ್ರಿ ಶ್ರೀ @narendramodi ಅವರ ಅಮೃತ ಹಸ್ತದಿಂದ ಇಂದು ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಯಶಸ್ವಿಯಾಗಿ… pic.twitter.com/FvuuPBLzji
— Pralhad Joshi (@JoshiPralhad) January 22, 2024
ಕಾಂಗ್ರೆಸ್ ಪಕ್ಷದವರು ಯಾವಾಗಲೂ ಹಿಂದೂ ವಿಚಾರ ಬಂದಾಗ ವಿರೋಧ ಮಾಡ್ತಾರೆ. ಅವರ ಪಾರ್ಟಿ ಲೀಡರ್ ಕನ್ಪೂಶನ್ ನಲ್ಲಿದಾರೆ. ಅವರ ಮಾರ್ಗದರ್ಶನವನ್ನು ಸಿದ್ದರಾಮಯ್ಯ ತಗೋತಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ರಜೆ ಕೊಡದೆ ಟೀಕೆ ಮಾಡಿದರು, ಮೊದಲು ಹೋಗಲ್ಲ ಅಂದ್ರು, ಇವಾಗ ಹೋಗ್ತೀವಿ ಅಂತಾರೆ. ಎಲ್ಲವೂ ವೋಟ್ ಗಾಗಿ ಎಂದು ಸಚಿವ ಜೋಶಿ ಆಕ್ಷೇಪಿಸಿದರು. ಮುನಿಯಪ್ಪನವರು ರಾಮ ಜಪ ಮಾಡಿರೋದು ಖುಷಿ ವಿಚಾರ. ಈ ವಿಚಾರದಲ್ಲಿ ಅವರು ಮುಖ್ಯಮಂತ್ರಿಗಳಿಗೆ ತಿಳಿಯ ಹೇಳಲಿ ಎಂದೂ ಜೋಶಿ ಕಿವಿಮಾತು ಹೇಳಿದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಲಿಂ ಮಹಿಳೆ ಮಾನಸಿಕ ಅಸ್ವಸ್ಥೆ: ಎಸ್ಪಿ ಮಿಥುನ್ ಕುಮಾರ್
ಇನ್ನು ಹುಬ್ಬಳ್ಳಿಯ MTS ಕಾಲೋನಿ ಟೆಂಡರ್ ರದ್ದು ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಯಾರೂ ಸಹ ಟೆಂಡರ್ ಹಾಕದೆ ಇರೋದಕ್ಕೆ ರದ್ದಾಗಿದೆ. ನನಗೆ ಟೆಂಡರ್ ಕರದಿರೋದು ಗೊತ್ತಿಲ್ಲ. ರದ್ದಾಗಿರೋದು ಪತ್ರಿಕೆ ಮೂಲ ಗೊತ್ತಾಗಿದೆ. ಇದು ಆಡಳಿತಾತ್ಮಕ ವಿಚಾರವಷ್ಟೇ. ಕಾಂಗ್ರೆಸ್ ನವರು ಬೇಕಿದ್ರೆ ಟೆಂಡರ್ ಹಾಕಬೇಕಿತ್ತು. 80 ಕೋಟಿ ರೂಪಾಯಿಗೆ ನೀವೇ ಟೆಂಡರ್ ಹಾಕಿ ಎಂದು ಜೋಶಿ ಕ್ಲುಪ್ತವಾಗಿ ಹೇಳಿದರು.
ಇಲ್ಲಿಯವರೆಗೂ ಮೋದಿ ಅವರ ಮೇಲೆ ಮತ್ತು ನನ್ನ ಮೇಲೆ ಆರೋಪ ಮಾಡೋಕೆ ಏನೂ ಇರಲಿಲ್ಲ. ಇದೀಗ ಸುಮ್ಮಸುಮ್ನೆ ಮೋದಿ ಸರ್ಕಾರದ ಮೇಲೆ ಆರೋಪ ಮಾಡಿದರು. ಐದು ಸಲ ಟೆಂಡರ್ ಕರೆದರೂ ಯಾರೂ ಹಾಕಿಲ್ಲ, ಈ ಬಾರಿಯೂ ಯಾರೂ ಹಾಕಿಲ್ಲ. ಹಾಗಾಗಿ ರದ್ದಾಗಿದೆ. ಸಾವಿರ ಕೋಟಿ ಭ್ರಷ್ಟಾಚಾರ ಅಂತಾ ಸುಮ್ನೆ ಹುಚ್ಚಹುಚ್ಚರಾಗಿ ಮಾತಾಡಿದರು ಎಂದು ಜೋಶಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ