National Youth Fest: ಧಾರವಾಡ ಕೆ.ಸಿ.ಡಿ ಕ್ರೀಡಾಂಗಣದಲ್ಲಿ ಆಹಾರ ಮೇಳ, ಒಂದೇ ಸೂರಿನಡಿ ದೇಶದ ಎಲ್ಲಾ ರಾಜ್ಯಗಳ ತಿಂಡಿ ತಿನಿಸು

ಅವಳಿ ನಗರದ ಜನರ ನಾಲಿಗೆಗೆ ದೇಶದ ಹಲವು ಖಾದ್ಯಗಳ ರುಚಿ ತಲುಪಿಸಲು ರಾಷ್ಟ್ರೀಯ ಯುವ ಜನೋತ್ಸವ ಸಜ್ಜಾಗಿದ್ದು, ವಿವಿಧ ರಾಜ್ಯಗಳ ಆಹಾರೋತ್ಸವ ಕೈ ಬೀಸಿ ಸ್ವಾಗತಿಸುತ್ತಿವೆ. ಬಗೆ ಬಗೆಯ ಖಾದ್ಯಗಳು, ನಾನಾ ಬಗೆಯ ಸ್ವಾದ, ಸಿಹಿ, ಖಾರ, ಉಪ್ಪು, ಹುಳಿ, ಶಾಖಾಹಾರ, ಮಾಂಸಾಹಾರ ಹೀಗೆ ಬಹುದೊಡ್ಡ ಆಹಾರ ಸಂತೆ ಇಲ್ಲಿ ಅನಾವರಣಗೊಂಡಿದೆ.

National Youth Fest: ಧಾರವಾಡ ಕೆ.ಸಿ.ಡಿ ಕ್ರೀಡಾಂಗಣದಲ್ಲಿ ಆಹಾರ ಮೇಳ, ಒಂದೇ ಸೂರಿನಡಿ ದೇಶದ ಎಲ್ಲಾ ರಾಜ್ಯಗಳ ತಿಂಡಿ ತಿನಿಸು
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 14, 2023 | 2:34 PM

ಧಾರವಾಡ: ಜೀವಮಾನದಲ್ಲಿ ಕಂಡರಿಯದ ಆಹಾರಗಳನ್ನು ನೋಡಲು, ಸವಿಯಲು, ಖರೀದಿಸಿ ಮನೆಗೆ ಕೊಂಡೊಯ್ಯಲು ಸಿದ್ಧವಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಹೊಸ ಆಹಾರದ ರುಚಿ ನೋಡಲು ಬಯಸುವವರಿಗೆ ಇದು ಸುವರ್ಣಾವಕಾಶವಾಗಿದೆ. ಒಟ್ಟು 50 ಆಹಾರ ಮಳಿಗೆಗಳನ್ನು ಇಲ್ಲಿ ತೆರೆಯಲಾಗಿದ್ದು, ಎಲ್ಲವೂ ವಿಶೇಷ, ಎಲ್ಲವೂ ವಿನೂತನ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲ ಬಗೆಯ ವೈಶಿಷ್ಟ್ಯಗಳು ಇಲ್ಲಿವೆ. ಪೂರ್ವಾಂಚಲ, ಪಶ್ಚಿಮ ರಾಜ್ಯಗಳ ತಿಂಡಿಗಳನ್ನು ಕಣ್ಣಾರೆ ನೋಡಿ ತಿಳಿದು ಸೇವಿಸಲು ಇದು ಸದಾವಕಾಶವಾಗಿದೆ.

ಧಾರವಾಡ ಕೆ.ಸಿ.ಡಿ ಕ್ರೀಡಾಂಗಣದಲ್ಲಿ ಒಟ್ಟಾರೆ 150 ಮಳಿಗೆಗಳನ್ನು ತೆರೆಯಲಾಗಿದೆ. ಇದರಲ್ಲಿ 50 ಆಹಾರ ಮಳಿಗೆಗಳಿದ್ದು, ಇದೇ 16 ರ ವರೆಗೆ ಮಳಿಗೆಗಳಲ್ಲಿ ಆಹಾರ ಲಭ್ಯವಿರಲಿದೆ. ಸ್ಥಳದಲ್ಲೇ ಸವಿದು, ಮನೆಗೂ ಕೊಂಡೊಯ್ಯಬಹುದಾಗಿದೆ.

ಆಂಧ‍್ರಪ್ರದೇಶದ ಅನಂತಪುರ ಜಿಲ್ಲೆಯ ವಿಶೇಷತೆಯಾದ ಒಲಿಗಾಲು, ಸಿಹಿ ಪೊಂಗಲ್, ಪಾಯಸ, ರವಾ ಲಡ್ಡು, ಫ್ರೆಂಚ್ ಫ್ರೈಸ್, ನಗ್ಗೆಟ್ಸ್, ಪಾನಿಪುರಿ, ಹೈದರಾಬಾದ್​ನ ತೆಲಂಗಾಣದ ಹೈದರಾಬಾದಿ ಚಿಕನ್ ಬಿರಿಯಾನಿ, ಅಸ್ಸಾಂನ ಖಾಮ್ರೂಪ್ ಮೆಟ್ರೋದ ಪಿಥ, ಟೇಕ್ಲಿ ಪಿಥ, ಸ್ಟ್ರೀಮ್ ರೈಸ್, ಬಿಹಾರದ ಲಟ್ಟಿ ಚೋಕಾ ಮತ್ತು ಸತ್ತು, ಚಂಡಿಘಡದ ಆಲೂಪುರಿ, ಪ್ರಂತಾ ಆಲೂ, ಕಥಿ ರೋಲ್, ವೆಜ್ ಕಟ್ಲೇಟ್, ಲಸ್ಸಿ, ಚತ್ತೀಸ್​ಘಡದ ಧಮ್ತಾರಿಯ ಚೌಸ್ಲೆ, ಗುಗುಲಾ, ಅಂಗಾಕರ್ ರೋಟಿ, ಮೆಗುಡಿ ಕುರ್ಮಿ, ನಮಕ್ ಪಾರ, ಪೂರ್ವ ದೆಹಲಿ ಮತ್ತು ನವದೆಹಲಿ ಜಾಲ್ ಮೂರಿ, ಗೋಲ್ಗಪ್ಪ, ಚಾತ್ ಮತ್ತು ಕಾಫಿ ಸ್ವಾದ ಸವಿಯಬಹುದಾಗಿದೆ.

ಗುಜರಾತ್​ನ ವಲ್ಸದ್​ನ ಖಾಮನ್, ಧೋಕ್ಲಾ, ಹಂದ್ವಾ, ಖಾಕ್ರಾ, ಸಿಂಗ್, ಹರಿಯಾಣದ ಜಿಂದ್​ನ ಬೆಜ್ರೆಕಿ ರೋಟಿ, ಸರ್ಸೋಂಕಾ ಸಗ್, ಸುಹಾಲಿ, ಮಾಲ್​ಪುರೆ ಮತ್ತು ಗುಲ್ ಗುಲೆ, ಲಡ್ಡು ಬಜ್ರೆಕಿ ಖಿಚೇರಿ, ಹಿಮಾಚಲ ಪ್ರದೇಶದ ಧರ್ಮಶಾಲಾದ ಕಂಗ್ರಿಧಾಮ್, ಮದ್ರಾ, ಮಹ್​ದಾಲ್, ಮಿತಾ ಭಟ್, ತೆಲಿಯಾ ಮೆಹ್, ಹಾರಾ ಕಾಟ್, ದಕ್ಷಿಣ ಗೋವಾದ ಡ್ರೈ ಫಿಶ್, ಗಾವ್ ಫಿಶ್ ಕರಿ, ಫಿಶ್ ಫ್ರೈ, ಜಮ್ಮು ಕಾಶ್ಮಿರದ ಉದಂಪುರ್​ನ ರಾಜ್ಮಾ ಚಾವ್ಲಾ, ಬ್ರೆಡ್ ಕಲಾಡಿ, ಜಾರ್ಖಂಡ್​ನ ಕೌಂತಿ ಮತ್ತು ರಾಂಚಿಯ ದುಷ್ಕಾ, ಚಿಲ್ಕಾ ರೋಟಿ, ಮಾಲ್ಪುವ, ಇಟ್ಟಿ ಚೊಕ್ಕಾದ ರುಚಿ ನೋಡಬಹುದಾಗಿದೆ.

ಕರ್ನಾಟಕದ ಮಂಡ್ಯದ ರಾಸಾಯನಿಕ ಮುಕ್ತ ಬೆಲ್ಲ, ಬೆಲ್ಲದ ಪುಡಿ, ಬಗೆ ಬಗೆಯ ಬೆಲ್ಲ, ಉಡುಪಿಯ ಕುಂದಾಪುರದ ಚಿಕನ್ ಡ್ರೈ, ಚಿಕನ್ ಜಿಂಜರ್, ಚಿಕನ್ ಬಿರಿಯಾನಿ, ಚಿಕನ್ ಘೀ ರೈಸ್ ಕುರ್ಮಾ, ಖೋರಿ ರೋಟಿ, ಚಿಕ್ಕನ್ ಚಿಲ್ಲಿ, ವಿವಿಧ ಬಗೆಯ ಮೀನು ಖಾದ್ಯ, ಕೇರಳದ ಪಾಕ್ಕಾಡ್​ನ ಪುಟ್ಟು, ಕದಲಾ ಕರಿ, ಅಪ್ಪಂ, ಇಡಿಯಪ್ಪಂ, ವೆಜ್ ಬಿರಿಯಾನಿ, ಕಾಂಜಿ, ದೋಸಾ, ಮಲ್ಲಪುರಂನ ಅಪ್ಪಂ, ಕೇರಳ ಪರೋಟ, ತಾಪಿಯೋಕ, ಮಲಬಾರಿ ಚಿಕನ್ ಕರಿ, ಮರಬಾರಿ ಧಂ ಬಿರಿಯಾನಿ, ಮಲಬಾರಿ ಚಿಕನ್ ಫ್ರೈ, ಇರಾಚಿ ಪತ್ತೀರಿ, ಫಿಶ್ ಕರಿ, ಡ್ರೈ ಜಿಂಜರ್ ಕಾಫಿ.

ಮಧ್ಯಪ್ರದೇಶದ ಉಜ್ಜೈನ್ ನ ದಾಲ್ ಬಪ್ಲೆ, ಲಡ್ಡು, ರತ್ಲಾಮಿ ಸೇವ್, ಪುದುಚೇರಿಯ ಪೊಂಗಲ್, ದೋಸಾ, ಫ್ರೆಂಚ್ ಬ್ರೌನೀಸ್, ರಾಜಸ್ಥಾನದ ಚುರು ಪ್ರದೇಶದ ಕಚೋರಿ, ಸಮೋಸ, ಸಂಗ್ರಿಕಿ ಸಬ್ಜಿ, ಗುಲಾಂ ಜಾಮೂನ್, ತಮಿಳುನಾಡಿನ ಕಾಂಚಿಪುರಂ ನ ಕಾಂಚಿಪುರಂ ಕೋಯಿಲ್ ಇಡ್ಲಿ, ತಂಜಾವೂರಿ ವಿಶೇಷತೆಗಳಿವೆ.

ತೆಲಂಗಾಣದ ಮಹಾಬೂಬ್ ನಗರ್​ನ ಪಾಕೋಡಿ, ಮಿರ್ಚಿ ಭುಜ್ಜಿ, ತ್ರಿಪುರಾದ ಮೊಮ್ಮಾಟಿಯ ಖಚುರಿ, ಫಿಠಾ, ಪಯೇಶ್, ಉತ್ತರ ಪ್ರದೇಶದ ಲಖನೌ ನ ಕಬಾಬ್, ಗಾಜಿಪುರದ ಭಾಟಿ ಚೋಕ, ಪಶ್ಚಿಮ ಬಂಗಾಳದ ಹೌರಾದ ರಸಗುಲ್ಲಾ, ಪಾತಿಸಪ್ತಾ, ವೆಜ್ ಚಾಕ್, ಆಲೂ ಚೆಕ್, ಮಟರ್ ಪುರಿ, ಉತ್ತರ ಕೊಲ್ಕತ್ತಾದ ಚಿಕನ್ ರೋಲ್, ಮಟನ್ ರೋಲ್, ಪನ್ನೀರ್ ರೋಲ್ ಎಗ್ ರೋಲ್, ಮುಘುಲೈ ಪರೋಟ, ಉತ್ತರಾಖಂಡದ ಪೌರಿ ಗರ್ವಾಲ್ ನ ಜಾಂಗೂರಿಕಿ ಖೀರ್, ಗೇಯತ್ ಕಿ ದಾಲ್, ಕೆ ಪರಾಟೆ, ಪಹಡಿ ಚಾಯ್ ಸಿಗಲಿದೆ.

ಮಹಾರಾಷ್ಟ್ರದ ಕೊಲ್ಲಾಪುರದ ತಾಲಿ, ತಂಬಡ, ಪಂದಾರ ರಸ, ಬಿರಿಯಾನಿ, ಮಣಿಪುರದ ಭಿಷ್ಣುಪುರ್​ನ ಚಿಕನ್ ಕರಿ, ಸ್ಟೀಮ್ ರೈಸ್, ಡ್ರೈ ಸ್ಮೋಕ್ ಫಿಶ್, ಇರೊಂಬ, ಮೇಘಾಲಯದ ವೆಸ್ಟ್ ಕಾಸಿ ಹಿಲ್ಸ್​ನ ಪುತಾರೋ, ಪೂಸೆಪ, ಪೂಮಾಲೋರಿ, ತುಮ್ ರೆಂಬಾಯಿ ಟುಮ್ ತಂಗ್, ಫಿಶ್ ಮಲಾಯಿ, ಚಿಕನ್ ಬಿರಿಯಾನಿ, ಒಡಿಶಾದ ಖೋರ್ದಾ, ಮಟ್ಕಿ ಮಟನ್, ಮುರ್ ಮುರೆ ಮಟನ್, ಮಸ್ಟರ್ಡ್ ಫಿಶ್ ಕರಿ, ಸಿಕ್ಕಿಂನ ನಾಂಗ್ಚಿಯ ಚಿಕನ್ ಮಟನ್ ಮೊಮೊ, ಚಾಮ್ಮಿನ್ ಫಲಾಯಿ ದೊರೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Sat, 14 January 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ