ಎಚ್ಚೆತ್ತ ಅಧಿಕಾರಿಗಳು, ಟೋಲ್ ಬಳಿ ಕಾಮಗಾರಿ ಆರಂಭ: ಜನತೆಗೆ ಇನ್ನಾದರೂ ಸಿಗುತ್ತಾ ನೆಮ್ಮದಿ
ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಜಾರಿಯಾಗಿರುವ ಬಿ.ಆರ್.ಟಿ.ಎಸ್. ಯೋಜನೆಯಿಂದ ಎಷ್ಟು ಜನರಿಗೆ ಅನುಕೂಲವಾಗಿದೆಯೋ ಗೊತ್ತಿಲ್ಲ. ಆದರೆ ಅದರಿಂದ ಸಾವಿರಾರು ಜನರಿಗೆ ಅನಾನುಕೂಲ ಆಗಿದ್ದಂತೂ ನಿಜ. ಯಾಕಂದ್ರೆ ಈ ಯೋಜನೆಯ ಕಾಮಗಾರಿ ನಡೆದ ಐದು ವರ್ಷಗಳ ಕಾಲ ಜನತೆ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ. ಈ ಯೋಜನೆಯ ಕಾಮಾಗಾರಿ ನಡೆಯುವ ವೇಳೆ ಅವಳಿ ನಗರಗಳ ನಡುವೆ ಸಂಚರಿಸೋದೇ ದೊಡ್ಡ ತಲೆ ನೋವಾಗಿತ್ತು. ಐದು ವರ್ಷಗಳ ಸುದೀರ್ಘ ಸಮಯದ ಬಳಿಕ ಬಿ.ಆರ್.ಟಿ.ಎಸ್. ಯೋಜನೆ ಏನೋ ಜಾರಿಯಾಯಿತು. ಆದರೆ ಇದರ ಬೆನ್ನಲ್ಲೇ […]
ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಜಾರಿಯಾಗಿರುವ ಬಿ.ಆರ್.ಟಿ.ಎಸ್. ಯೋಜನೆಯಿಂದ ಎಷ್ಟು ಜನರಿಗೆ ಅನುಕೂಲವಾಗಿದೆಯೋ ಗೊತ್ತಿಲ್ಲ. ಆದರೆ ಅದರಿಂದ ಸಾವಿರಾರು ಜನರಿಗೆ ಅನಾನುಕೂಲ ಆಗಿದ್ದಂತೂ ನಿಜ. ಯಾಕಂದ್ರೆ ಈ ಯೋಜನೆಯ ಕಾಮಗಾರಿ ನಡೆದ ಐದು ವರ್ಷಗಳ ಕಾಲ ಜನತೆ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ.
ಈ ಯೋಜನೆಯ ಕಾಮಾಗಾರಿ ನಡೆಯುವ ವೇಳೆ ಅವಳಿ ನಗರಗಳ ನಡುವೆ ಸಂಚರಿಸೋದೇ ದೊಡ್ಡ ತಲೆ ನೋವಾಗಿತ್ತು. ಐದು ವರ್ಷಗಳ ಸುದೀರ್ಘ ಸಮಯದ ಬಳಿಕ ಬಿ.ಆರ್.ಟಿ.ಎಸ್. ಯೋಜನೆ ಏನೋ ಜಾರಿಯಾಯಿತು. ಆದರೆ ಇದರ ಬೆನ್ನಲ್ಲೇ ಯೋಜನೆ ವೈಜಾನಿಕವಾಗಿಲ್ಲ ಅನ್ನೋ ಆರೋಪಗಳೂ ಕೇಳಿ ಬಂದಿದ್ದವು. ಅವೆಲ್ಲಾ ಈಗ ಒಂದೊಂದಾಗಿ ನಿಜವಾಗತೊಡಗಿವೆ. ಮಳೆ ಬಂದ್ರೆ ಕೆರೆಯಾಗುವ ಧಾರವಾಡ ಟೋಲ್ ನಾಕಾ ಅದರಲ್ಲೂ ಧಾರವಾಡ ನಗರದ ಟೋಲ್ ನಾಕಾ ಬಳಿಯ ಜನರಂತೂ ಈ ಯೋಜನೆಯಿಂದಾಗಿ ಕಂಗೆಟ್ಟು ಹೋಗಿದ್ದಾರೆ. ಚಿಕ್ಕ ಮಳೆ ಬಂದರೂ ಸಾಕು ಟೋಲ್ ನಾಕಾ ಕೆರೆಯಾಗಿ ಮಾರ್ಪಡುತ್ತೆ. ಮಾಳಮಡ್ಡಿ, ಲಕ್ಷ್ಮೀಸಿಂಗನಕೆರೆ ಬಡಾವಣೆಗಳ ನೀರು ಇದೇ ಟೋಲ್ ನಾಕಾ ಮೂಲಕ ಜನ್ನತ್ ನಗರದಲ್ಲಿ ಹಾಯ್ದು ಮುಂದೆ ಹೋಗಬೇಕು. ಆದರೆ ಬಿ.ಆರ್.ಟಿೆ.ಸ್ ಜಾರಿಯಾದ ನಂತರ ನೀರು ಇಲ್ಲೇ ನಿಲ್ಲತೊಡಗಿದೆ. ಕಾರಣ ನೀರು ಸಾಗಲು ದಾರಿಯೇ ಇಲ್ಲ.
ಜನರ ಆಕ್ರೋಶಕ್ಕೆ ಎಚ್ಚೆತ್ತ ಅಧಿಕಾರಿಗಳು ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಶಾಸಕ ಅರವಿಂದ ಬೆಲ್ಲದ್ ಕೂಡಾ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದೆಲ್ಲಕ್ಕೂ ಹೆಚ್ಚಾಗಿ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಬಿ.ಆರ್.ಟಿ.ಎಸ್. ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಟೋಲ್ ನಾಕಾ ಬಳಿ ನೀರು ಸರಾಗವಾಗಿ ಹರಿದು ಮುಂದಕ್ಕೆ ಸಾಗುವಂತೆ ಅನುವು ಮಾಡಿಕೊಡಲು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ.
ಮುಂಗಾರು ಈಗಷ್ಟೇ ಆರಂಭವಾಗಿದ್ದು, ಮಳೆ ಹೆಚ್ಚಾಗೋ ಮುನ್ನವೇ ಕಾಮಗಾರಿ ಮುಗಿಸೋ ಲೆಕ್ಕಾಚಾರ ಅಧಿಕಾರಿಗಳದ್ದು. ಆರಂಭವಾಗಿರುವ ಈ ಕಾಮಗಾರಿ ಎಷ್ಟರಮಟ್ಟಿಗೆ ಸಮಸ್ಯೆಗೆ ಪರಿಹಾರ ವಾಗಲಿದೆ ಎನ್ನೋುದು ಕಾಮಗಾರಿ ಮುಗಿದ ಬಳಿಕ ಮಳೆ ಬಂದಾಗಲೇ ಗೊತ್ತಾಗೋದು -ನರಸಿಂಹಮೂರ್ತಿ ಪ್ಯಾಟಿ
Published On - 3:55 pm, Thu, 18 June 20