ಧಾರವಾಡ: ತುರ್ತು ಕಾಮಗಾರಿ, ಈ ಎಲ್ಲಾ ಭಾಗದಲ್ಲಿ ನವೆಂಬರ್ 26 ರಂದು ವಿದ್ಯುತ್ ವ್ಯತ್ಯಯ

ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ನವೆಂಬರ್ 26 ರಂದು 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೆತ್ತಕೊಳ್ಳುತ್ತಿದೆ. ಅಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹಾಗಿದ್ದರೆ ಯಾವೆಲ್ಲ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಲಿದೆ? ಇಲ್ಲಿದೆ ಮಾಹಿತಿ.

ಧಾರವಾಡ: ತುರ್ತು ಕಾಮಗಾರಿ, ಈ ಎಲ್ಲಾ ಭಾಗದಲ್ಲಿ ನವೆಂಬರ್ 26 ರಂದು ವಿದ್ಯುತ್ ವ್ಯತ್ಯಯ
ಧಾರವಾಡದ ಈ ಎಲ್ಲಾ ಭಾಗಗಳಲ್ಲಿ ನವೆಂಬರ್ 26 ರಂದು ವಿದ್ಯುತ್ ವ್ಯತ್ಯಯ (ಸಾಂದರ್ಭಿಕ ಚಿತ್ರ)
Image Credit source: AFP Photo
Updated By: Rakesh Nayak Manchi

Updated on: Nov 24, 2023 | 6:31 PM

ಧಾರವಾಡ, ನ.24: ವ್ಯಾಪ್ತಿಯಲ್ಲಿ ಬರುವ 110 ಕೆ.ವಿ. ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನವೆಂಬರ್ 26 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಇವರು 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ. ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ನವೆಂಬರ್ 26 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಪ್ರದೇಶಗಳು

ಹೆಸ್ಕಾಂ ಹೊರಡಿಸಿದ ಪ್ರಕರಣಯಲ್ಲಿರುವಂತೆ, ಟೋಲ್-ನಾಕಾ, ಮಾಳಮಡ್ಡಿ, ನಗರಕರ ಕಾಲೋನಿ, ಬಾಗಲಕೋಟ ಪೆಟ್ರೋಲ ಪಂಪ್, ಲಕ್ಷ್ಮೀನಗರ, ಗಾಂಧಿ ನಗರ, ಕಲಘಟಗಿ ರಸ್ತೆ, ರಾಜೀವಗಾಂಧಿ ನಗರ, ಸರಸ್ವತಿನಗರ, ತೇಜಸ್ವಿನಗರ, ಸಂಗೊಳ್ಳಿ ರಾಯಣ್ಣ ನಗರ, ಗಿರಿನಗರ, ಕಕ್ಕಯ್ಯಾ ನಗರ, ಗುರುದೇವ ನಗರ, ವಿದ್ಯಾಗಿರಿ, ರಜತಗಿರಿ, ಸಪ್ತಗಿರಿ, ವೈ.ಎಸ್. ಕಾಲೋನಿ, ಲಕ್ಕಮ್ಮನಹಳ್ಳಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಲಿದೆ.

ಗೋಪಾಲಪುರ, ದಾನೇಶ್ವರಿ ನಗರ, ಸನ್ಮತಿ ಮಾರ್ಗ, ಸ್ಟೇಶನ್ ರೋಡ್, ನುಗ್ಗಿಕೇರಿ, ವಿವೇಕಾನಂದ ನಗರ, ಕೆ.ಎಮ್.ಪಿ, ವೆಂಕಟೇಶ್ವರ, ಸೋಮೇಶ್ವರ,ಗಾರ್ಡನ ಪಾಲಿಮರ, ಜೆ.ಎಸ್.ಎಸ್, ಮಾದರಮಡ್ಡಿ, ನವಲೂರ, ಲಕ್ಕಮ್ಮನಹಳ್ಳಿ ಕೈಗಾರಿಕಾ ಪ್ರದೇಶ, ರಾಯಾಪುರ ಕೈಗಾರಿಕಾ ಪ್ರದೇಶ, ಜನ್ನತ ನಗರ, ಲಕ್ಷ್ಮೀಸಿಂಗನಕೇರಿ, ಪಿ.ಬಿ ರಸ್ತೆ, ಮೂಗಬಸವೇಶ್ವರದಲ್ಲಿ ಪವರ್ ಕಟ್ ಆಲಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: 10 ಕೋಟಿ ಜನರಿಗೆ ಆಹ್ವಾನ, ಸಚಿವ ಜೋಶಿ ಸಾರಥ್ಯದಲ್ಲಿ ಧಾರವಾಡದಿಂದ ವಿಶೇಷ ರೈಲು

ಹೊಸಯೆಲ್ಲಾಪುರ, ಜೈ ಕೆಫೆ ಸರ್ಕಲ್, ನುಚ್ಚಂಬ್ಲಿ ಭಾವಿ, ದುಂಡಿ ಓಣಿ, ಯಲಿಗಾರ ಓಣಿ, ಭೂಸಪ್ಪ ಚೌಕ್, ಶಿವಾನಂದ ನಗರ, ಚಪ್ಪರ್‍ಬಂದ್ ಕಾಲೋನಿ, ರಾಮನಗರ, ಸಂಗಮ ಸರ್ಕಲ್, ಲೈನ್ ಬಜಾರ್, ದರೋಗಾ ಓಣಿ, ತುಪ್ಪದ ಓಣಿ, ಸೌದಾಗರ ಗಲ್ಲಿ, ಟಿಕಾರೆ ರೋಡ್, ಮಾರ್ಕೆಟ್ ಪೋಲಿಸ್ ಸ್ಟೇಶನ್, ಸಿಬಿಟಿ, ಓಲ್ಡ್ ಬಸ್ಟ್ಯಾಂಡ್, ರಿಗಲ್ ಸರ್ಕಲ್, ಟಿಪ್ಪು ಸರ್ಕಲ್, ಭಾರತ ಸ್ಕೂಲ್, ಗ್ರಾಸ್ ಮಾರ್ಕೆಟ್, ಕಾಮತ ಹೊಟೆಲ್, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಸೋಮಾಪುರ, ಗೋವನಕೊಪ್ಪದಲ್ಲಿ ವಿದ್ಯುತ್ ಕಡಿತವಾಗಲಿದೆ.

ದೊಂಗಡಿಕೊಪ್ಪ ಗ್ರಾಮ, ನಿಗದಿ, ದೇವರ ಹುಬ್ಬಳ್ಳಿ, ಕಲಕೇರಿ, ಹಳ್ಳಿಗೇರಿ, ಮನಸೂರು ಮತ್ತು ಮನಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳು, ರಾಯಾಪುರ ಗ್ರಾಮ, ರಾಯಾಪುರ ಆಶ್ರಯ ಕಾಲೋನಿ, ವಿಠ್ಠಲ ನಗರ, ಮಯೂರ ಆದಿತ್ಯ ರೆಸಾರ್ಟ, ರೇಷ್ಮೆ ಇಲಾಖೆ, ಇಸ್ಕಾನ್, ರಾಯಾಪುರ ಮತ್ತು 110ಕೆವಿ. ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ