ಹುಬ್ಬಳ್ಳಿ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್; ಮೆಮು ರೈಲು ಸಂಚಾರ ಪ್ರಾರಂಭಿಸಲು ಚಿಂತನೆ

| Updated By: sandhya thejappa

Updated on: Dec 16, 2021 | 5:06 PM

ಮುಂದಿನ 10 ವರ್ಷಗಳಲ್ಲಿ 536 ಮೆಮು ಮೇನ್ ಲೈನ್ ಇಲೆಕ್ಟಿಕ್ ಮಲ್ಟಿಪಲ್ ಯುನಿಟ್ ಬೋಗಿಗಳಿರುವ ರೈಲುಗಳನ್ನು ನೀಡುವಂತೆ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 134 ಡೈವರ್ ಮೋಟರ್ ಕ್ಯಾಬ್​ಗಳು ಸಹ ಈ ಪ್ರಸ್ತಾವನೆಯಲ್ಲಿ ಸೇರಿವೆ.

ಹುಬ್ಬಳ್ಳಿ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್; ಮೆಮು ರೈಲು ಸಂಚಾರ ಪ್ರಾರಂಭಿಸಲು ಚಿಂತನೆ
ಮೆಮು ರೈಲು (ಸಾಂದರ್ಭಿಕ ಚಿತ್ರ)
Follow us on

ಹುಬ್ಬಳ್ಳಿ: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲು ತಯಾರಿ ನಡೆದಿದೆ. ಈ ಭಾಗದಲ್ಲಿ ವಿಶಿಷ್ಟವಾದ ರೈಲಿನಲ್ಲಿ ಪ್ರಯಾಣಿಸುವ ಭಾಗ್ಯ ದೊರೆಯಲಿದೆ. ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಮಾರ್ಗ ಸಂಪೂರ್ಣ ವಿದ್ಯುದ್ದೀಕರಣ ಗೊಳ್ಳುತ್ತಿದ್ದಂತೆಯೇ ಮೆಮು ಬೋಗಿಗಳಿರುವ ರೈಲುಗಳ ಸಂಚಾರ ಪ್ರಾರಂಭಿಸಲು ಚಿಂತನೆ ನಡೆದಿದೆ. ವಿದ್ಯುದ್ದೀಕರಣ ಕಾಮಗಾರಿ 2023ರ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ರೈಲು ಮಾರ್ಗ ವಿದ್ಯುದ್ದೀಕರಣಗೊಂಡ ಮಾರ್ಗಗಳಲ್ಲಿ ಮೆಮು ಬೋಗಿಗಳು ಇರುವ ರೈಲು ಹಂತ ಹಂತವಾಗಿ ಸಂಚಾರ ಪ್ರಾರಂಭಿಸಲಿವೆ.

ಮುಂದಿನ 10 ವರ್ಷಗಳಲ್ಲಿ 536 ಮೆಮು ಮೇನ್ ಲೈನ್ ಇಲೆಕ್ಟಿಕ್ ಮಲ್ಟಿಪಲ್ ಯುನಿಟ್ ಬೋಗಿಗಳಿರುವ ರೈಲುಗಳನ್ನು ನೀಡುವಂತೆ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 134 ಡೈವರ್ ಮೋಟರ್ ಕ್ಯಾಬ್​ಗಳು ಸಹ ಈ ಪ್ರಸ್ತಾವನೆಯಲ್ಲಿ ಸೇರಿವೆ. ಸದ್ಯಕ್ಕೆ ನೈಋತ್ಯ ವಲಯ ವ್ಯಾಪ್ತಿಯಲ್ಲಿ ರೈಲು ಮಾರ್ಗ ವಿದ್ಯುದ್ದೀಕರಣಗೊಂಡ ಬೆಂಗಳೂರು- ಮೈಸೂರು ಸೇರಿ ಇನ್ನೂ ಕೆಲ ಮಾರ್ಗಗಳಲ್ಲಿ ಮಾತ್ರ ಮೆಮು ರೈಲುಗಳು ಸಂಚರಿಸುತ್ತಿವೆ.

ಮೆಮು ರೈಲು ಹೇಗಿರುತ್ತೆ, ವೈಶಿಷ್ಟ್ಯಗಳೇನು?
ಪ್ರತಿ ಸಾಮಾನ್ಯ ಬೋಗಿಗಳಲ್ಲಿ 76 ಆಸನಗಳು ಇದ್ದರೆ, ಮೆಮು ರೈಲಿನಲ್ಲಿ 100 ಸೀಟ್ಗಳ ವ್ಯವಸ್ಥೆ ಇರುತ್ತದೆ. ಮೆಮು ರೈಲಿನಲ್ಲಿ ಕನಿಷ್ಠ 16 ಬೋಗಿಗಳನ್ನು ಅಳವಡಿಸಲಾಗುತ್ತದೆ. ಅಲ್ಲದೇ ಮೆಮು ರೈಲಿಗೆ ಡಬಲ್ ಇಂಜಿನ್ ಜೋಡಿಸಲಾಗುತ್ತದೆ. ಇದರಿಂದ ರೈಲ್ವೆ ಇಲಾಖೆಗೆ ಹೆಚ್ಚುವರಿ ಖರ್ಚಾಗುವ ಇಂಧನ ಉಳಿತಾಯವಾಗುತ್ತದೆ. ಈ ರೈಲಿನಲ್ಲಿ ಮಲಗುವ ವ್ಯವಸ್ಥೆ ಇರುವುದಿಲ್ಲ. ಎಲ್ಲಾ ಪ್ರಯಾಣಿಕರು ಕುಳಿತುಕೊಂಡೆ ನಿಗದಿತ ಗುರಿ ತಲುಪಬಹುದು.

ವಿದ್ಯುತ್ತಿಕರಣ ಹೊಂದಿರುವ ರೈಲ್ವೆ ಮಾರ್ಗದಲ್ಲಿ ಮೆಮು ರೈಲು ಸಂಚಾರ ಮಾಡಬಹುದಾಗಿದೆ. ಈ ರೈಲಿನ ವೇಗ ಪ್ರತಿ ಗಂಟೆಗೆ 100 ಕಿಲೋಮೀಟರ್ ಇರಲಿದೆ. ನೈರುತ್ಯ ರೈಲ್ವೆ 2022ಕ್ಕೆ 44 ಮೆಮು ರೈಲುಗಳ ಪ್ರಸ್ತಾವನೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. 2022-23ರಲ್ಲಿ 120 ಮೆಮು ರೈಲುಗಳು, 2024-25 ರಲ್ಲಿ ಬರೋಬ್ಬರಿ 184 ರೈಲುಗಳು ಹಳಿಯ ಮೇಲೆ ಇಳಿಯಲಿವೆ. ಹೀಗೆ 2021 ರಿಂದ 31ರ ವರೆಗೆ 10 ವರ್ಷಗಳ ಕಾಲವಧಿಯಲ್ಲಿ ಬರೋಬ್ಬರಿ 536 ಮೆಮು ರೈಲುಗಳು ನೈರುತ್ಯ ರೈಲ್ವೆಗೆ ಸೇರಲಿವೆ.

ಈಗಾಗಲೇ ಕೆಂದ್ರ ಸರಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಭಾಗಕ್ಕೆ ಮಂಜೂರಾದ ಮೆಮು ರೈಲುಗಳನ್ನು ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗುವುದು. ನೈರುತ್ಯ ರೈಲ್ವೆಯ ವಿದ್ಯುತ್ತಿಕರಣಗೊಂಡ ಭಾಗದ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭ ಮಾಡಲಾಗುತ್ತದೆ ಅಂತ ನೈರುತ್ಯ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಅನಿಸ್ ಹೆಗಡೆ ತಿಳಿಸಿದ್ದಾರೆ.

ಇದನ್ನೂ ಓದಿ

ಕನ್ನಡ ಸಿನಿಮಾಗೆ ‘ಎನ್​ಟಿಆರ್​’ ಶೀರ್ಷಿಕೆ; ಈ ಚಿತ್ರಕ್ಕೆ ಹಾಸ್ಯನಟ ಕೆಂಪೇಗೌಡ ಹೀರೋ

ಅತಿವೃಷ್ಟಿ, ಬೆಳೆಹಾನಿ ವಿಷಯ ಪ್ರಸ್ತಾಪಿಸದ ಕರಾವಳಿ ಶಾಸಕರು: ಯುಟಿ ಖಾದರ್ ಬೇಸರ