ಹುಬ್ಬಳ್ಳಿ: ಏಪ್ರಿಲ್ 5ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ (Nadrendra Modi) ಬರುವ ನಿರೀಕ್ಷೆ ಇದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಏಪ್ರಿಲ್ 1ರಂದು ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಸಹಕಾರಿ ಇಲಾಖೆಯ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಬಜೆಟ್ ಮಂಡನೆ ಮಾಡಿದ್ದೀವಿ. ಅದನ್ನ ತೀವ್ರ ಗತಿಯಲ್ಲಿ ಅನುಷ್ಠಾನ ಮಾಡಲು ಆದೇಶ ಮಾಡಿದ್ದೇವೆ. ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಮೀಟಿ ಮಾಡಿದ್ದೇನೆ ಎಂದರು.
ಎಲ್ಲಾ ಇಲಾಖೆ ಕೆಲಸಗಳು ಆಗಬೇಕು ಎನ್ನೋದು ಇದರ ಉದ್ದೇಶ. ಕಳೆದ ಮೂರು ತ್ರೈಮಾಸಿಕ ಅವಧಿಯಲ್ಲಿ ನಾವು ಎಫ್ಡಿಐನಲ್ಲಿ ದೇಶದಲ್ಲೆ ಮುಂದಿದ್ದೇವೆ. ಮುಂದಿನ ತಿಂಗಳು 1ಕ್ಕೆ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದಾರೆ. ಸಹಕಾರಿ ಇಲಾಖೆಯ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕ್ಷೀರ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನ ಮಾಡಲಿದ್ದೇವೆ ಎಂದು ಬೊಮ್ಮಾತಿ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಾಗಿ ಅಮಿತ್ ಶಾ ಬರುತ್ತಿಲ್ಲ. ಸರ್ಕಾರಿ ಕಾರ್ಯಕ್ರಮ ಹಿನ್ನೆಲೆ ಅಮಿತ್ ಶಾ ಬರುತ್ತಿದ್ದಾರೆ ಎಂದು ತಿಳಿಸಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಿಲ್ಲ. ವರಿಷ್ಠರು ಕರೆ ಕೊಟ್ಟರೆ ನಾನೇ ದೆಹಲಿಗೆ ಹೋಗುತ್ತೇನೆ ಎಂದರು.
ಹಾಲು ಉತ್ಪಾದಕರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆಗೆ ನಿರ್ಧಾರ:
ಹಾಲು ಉತ್ಪಾದಕರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆಗೆ ನಿರ್ಧಾರ ಮಾಡಲಾಗಿದ ಎಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಏಪ್ರಿಲ್ 1ರಂದು ಅಮಿತ್ ಶಾ ಬ್ಯಾಂಕ್ನ ಲೋಗೋ ಉದ್ಘಾಟಿಸುತ್ತಾರೆ. ಹಾಲು ಉತ್ಪಾದಕರ ಬ್ಯಾಂಕ್ಗೆ 100 ಕೋಟಿ ಬಿಡುಗಡೆ ಆಗಿದೆ. ಮೋದಿ, ಶಾ, ಬಿಎಸ್ವೈ ಆಶೀರ್ವಾದಿಂದ ಸಿಎಂ ಆಗಿದ್ದೇನೆ. ನಿಮ್ಮ ಆಶೀರ್ವಾದದಿಂದ ನಾನು ಶಾಸಕ, ಸಚಿವ, ಸಿಎಂ ಆಗಿದ್ದೇನೆ ಎಂದರು.
ಇದನ್ನೂ ಓದಿ
Published On - 12:07 pm, Sat, 26 March 22