ಹುಬ್ಬಳ್ಳಿ: ಅವಳಿನಗರ ಹುಬ್ಬಳ್ಳಿ-ಧಾರವಾಡದದಲ್ಲಿ (Hubli-Dharwad) ನಡೆಯುವ 26ನೇ ರಾಷ್ಟ್ರೀಯ ಯುಜನೋತ್ಸವನ್ನು (National Youth Fest) ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ (ಜ.12) ರಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಎಲ್ಲ ಸಿದ್ದತೆಗಳು ಆಗಿವೆ. ಏರಪೋರ್ಟ್ನಿಂದ ರೈಲ್ವೆ ಮೈದಾನದವರೆಗೆ 8 ಕಿಲೋ ಮೀಟರ್ ಮಾರ್ಗವನ್ನು ವಾಹನದಲ್ಲಿ ತೆರಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ (Mahesh Tenginkai) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈದಾನದಲ್ಲಿ ರಿಜಿಸ್ಟರ್ ಮಾಡಿದ ಯವಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 40 ರಿಂದ 45 ಸಾವಿರ ಯುವಕರು ರಿಜಿಸ್ಟ್ರೇಶನ್ ಮಾಡಿಸಿದ್ದಾರೆ. ಅವರು 8 ಕಿ.ಮೀ ಎರಡು ಕಡೆ ಜನರು ನಿಲ್ಲೋಕೆ ಅವಕಾಶ ಇದೆ. ಇದು ರೋಡ್ ಶೋ ಅಲ್ಲ, ತೆರೆದ ವಾಹನದಲ್ಲಿ ಮೋದಿ ಬರಲ್ಲ. ಅವರದೇ ಆದ ವಾಹನದಲ್ಲಿ ಬರುತ್ತಾರೆ. 2 ರಿಂದ 3 ಕಡೆ ಮೋದಿ ವಾಹನದಿಂದ ಇಳಿದು ಜನರನ್ನು ಮಾತಾಡಸಬಹುದು. ಇದು ಯಾವದೂ ಅಧಿಕೃತ ಅಲ್ಲ, ಮೋದಿ ಕಾರ್ಯಾಲಯದ ನಿರ್ಧಾರದ ಮೇಲೆ ಅಂತಿಮವಾಗುತ್ತದೆ ಎಂದರು.
ಇದನ್ನೂ ಓದಿ: ಪ್ರಧಾನಿ ಮೋದಿ ಆಗಮನದ ಹಿನ್ನೆಲೆ ಮಾರ್ಗ ಬದಲಾವಣೆ, ಇಲ್ಲಿದೆ ಕಂಪ್ಲಿಟ್ ರೂಟ್ ಡೀಟೇಲ್ಸ್
ಈ ಕಾರ್ಯಕ್ರಮ ಬಿಜೆಪಿಯದ್ದಲ್ಲ, ವೇದಿಕೆ ಮೇಲೆ ಜಗದೀಶ್ ಶೆಟ್ಟರ್ ಇರುತ್ತಾರೆ. ಅಹ್ವಾನ ಪತ್ರಿಕೆಯಲ್ಲಿ ಜಗದೀಶ್ ಶೆಟ್ಟರ್ ಹೆಸರು ಬಿಟ್ಟಿರೋದು ಕೇಂದ್ರ ಸಚಿವರ ಗಮನಕ್ಕೆ ಬಂದಿದೆ. ಅದನ್ನು ಕೇಂದ್ರ ಸಚಿವರು ಸರಿ ಮಾಡುತ್ತಾರೆ. ಅದು ಜಿಲ್ಲಾಡಳಿತ ಮಾಡಿರೋ ಅಹ್ವಾನ ಪತ್ರಿಕೆ, ಸರಿ ಆಗತ್ತೆ. ಜಗದೀಶ್ ಶೆಟ್ಟರ್ ನಮ್ಮ ಸರ್ವೋಚ್ಚ ನಾಯಕರು. ಮೂಲೆಗುಂಪು ಮಾಡಲ್ಲ. ಕಾರ್ಯಕ್ರಮದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು ಇರುತ್ತಾರೆ. ಇವಾಗ ಆಗಿರೋ ಯಡವಟ್ಟು ನಾವು ಯಾರ ಗಮನಕ್ಕೆ ತರಬೇಕು ತಂದಿದ್ದೇವೆ, ಸರಿ ಮಾಡದ್ದಾರೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಪ್ರಧಾನಿ ಮೋದಿ ಜತೆ 21 ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅನುರಾಗ್ ಠಾಕೂರ್, ನಿಶಿತ್ ಪ್ರಮಾಣಿಕ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಕೆ.ಸಿ.ನಾರಾಯಣಗೌಡ, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ್, ಸಿ.ಎಂ.ನಿಂಬಣ್ಣವರ್, ಅಬ್ಬಯ್ಯ ಪ್ರಸಾದ್, ಅಮೃತ್ ದೇಸಾಯಿ, ಕುಸುಮಾ ಶಿವಳ್ಳಿ, MLC ಎಸ್.ವಿ.ಸಂಕನೂರ್, ಪ್ರದೀಪ್ ಶೆಟ್ಟರ್, ಹು-ಧಾ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಂಗಲ್ ಲಾಡ್ಜಸ್ ರೆಸಾರ್ಟ್ಸ್ ಅಧ್ಯಕ್ಷ ರಾಜೇಶ್ ಕೋಟೆನ್ನವರ್ಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ರಾಷ್ಟ್ರೀಯ ಯುವಜನೋತ್ಸದಲ್ಲಿ ಶಿಲಾರೋಹಣ, ವೈಮಾನಿಕ ತರಬೇತಿ, ಸಾಹಸ ಕ್ರೀಡೆ ಪ್ರದರ್ಶನ ; ಸಾರ್ವಜನಿಕರಿಗೂ ಅವಕಾಶ
ರಾಷ್ಟ್ರೀಯ ಯುವಜನೋತ್ಸಕ್ಕೆ ಚಾಲನೆ ಹಿನ್ನೆಲೆ ನಾಳೆ ಒಂದು ದಿನ ಹುಬ್ಬಳ್ಳಿ ನಗರದ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಪ್ರಧಾನಮಂತ್ರಿಗಳು ಆಗಮನದ ಹಿನ್ನೆಲೆ, ಸಾರಿಗೆ ಬಸ್ಗಳ ಓಡಾಟಕ್ಕೆ ಅನಾನುಕೂಲವಾಗುತ್ತದೆ. ಇದರಿಂದ ಗ್ರಾಮೀಣ ಭಾಗದಿಂದ ಬದುವ ಶಾಲಾ ವಿದ್ಯಾರ್ಥಿಗಳಿಗೆ ಅಡಚಣೆಯಾಗಲಿದೆ. ಈ ಕಾರಣಕ್ಕಾಗಿ ಒಂದು ದಿನದ ರಜೆ ಘೋಷಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Wed, 11 January 23