ಜಗದೀಶ್ ಶೆಟ್ಟರ್​ಗೆ ಲೋಕಸಭಾ ಟಿಕೆಟ್ ಕನ್ಫರ್ಮ್: ಖಚಿತಪಡಿಸಿದ ಸಹೋದರ ಪ್ರದೀಪ್ ಶೆಟ್ಟರ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 21, 2024 | 6:02 PM

ಧಾರವಾಡ ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನಲೆ ಜಗದೀಶ್ ಶೆಟ್ಟರ್ (Jagadish Shettar) ಗೊಂದಲಕ್ಕೀಡಾಗಿದ್ದರು. ಬಳಿಕ ಅವರಿಗೆ ಬೆಳಗಾವಿ (Belagavi) ಕ್ಷೇತ್ರದ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿತ್ತು. ಇದೀಗ ಜಗದೀಶ್​ ಶೆಟ್ಟರ್​ ಸಹೋದರ ಪ್ರದೀಪ್​ ಶೆಟ್ಟರ್​ ಟಿಕೆಟ್​ ಸಿಕ್ಕಿರುವುದನ್ನ ಖಚಿತಪಡಿಸಿದ್ದಾರೆ.

ಜಗದೀಶ್ ಶೆಟ್ಟರ್​ಗೆ ಲೋಕಸಭಾ ಟಿಕೆಟ್ ಕನ್ಫರ್ಮ್: ಖಚಿತಪಡಿಸಿದ ಸಹೋದರ ಪ್ರದೀಪ್ ಶೆಟ್ಟರ್
ಜಗದೀಶ್ ಶೆಟ್ಟರ್​ ಲೋಕಸಭಾ ಟಿಕೆಟ್ ಖಚಿತಪಡಿಸಿದ ಸಹೋದರ ಪ್ರದೀಪ್ ಶೆಟ್ಟರ್
Follow us on

ಹುಬ್ಬಳ್ಳಿ,ಮಾ.21: ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish Shettar)​ಗೆ ಟಿಕೆಟ್ ಕನ್ಫರ್ಮ್ ಆಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೇ ಟಿಕೆಟ್ ಫೈನಲ್​ ಆಗಿದೆ ಎಂದು ನಮಗೆ ಸಿಹಿ ಕೊಟ್ಟಿದ್ದಾರೆ ಎಂದು ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್(Pradeep Shettar) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ನಾನು ಸಹೋದರ ಜೊತೆ ದೆಹಲಿಗೆ ಹೋಗಿದ್ದೆ. ನಡ್ಡಾ ಅವರನ್ನು ಭೇಟಿ ಮಾಡಿದ್ದೇವೆ. ಟಿಕೆಟ್ ನಿಮಗೆ ಸಿಕ್ಕಿದ್ದು, ನೀವು ಕ್ಷೇತ್ರದಲ್ಲಿ ಪ್ರಚಾರ ಮಾಡಿ ಎಂದು ಸಿಹಿಯನ್ನು ಸಹ ಕೊಟ್ಟಿದ್ದಾರೆ ಎಂದು ಪ್ರದೀಪ್ ಶೆಟ್ಟರ್ ಹೇಳಿದರು.

ಬೆಳಗಾವಿ ಜಗದೀಶ್ ಶೆಟ್ಟರ್​ಗೆ ಹೊಸದಲ್ಲ

ದೆಹಲಿಯಲ್ಲಿ ನಮಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, ಮೈತ್ರಿ ವಿಚಾರವಾಗಿ ಟಿಕೆಟ್ ಘೋಷಣೆ ವಿಳಂಬವಾಗಿದೆ. ಇನ್ನು ಜಗದೀಶ್ ಶೆಟ್ಟರ್ ಬೆಳಗಾವಿ ನಾಯಕರ ನೊತೆ ಮಾತಾಡಿದ್ದಾರೆ. ಮೋದಿ ಸೇರಿ ಕೆಲ ನಾಯಕರು‌, ಕ್ಷೇತ್ರ ಬದಲಾವಣೆ ಮಾಡಿದ್ದಾರೆ. ಸೋಮಣ್ಣ, ಶೋಭಾ ಕರಂದ್ಲಾಜೆ ಕೂಡ ಕ್ಷೇತ್ರ ಬದಲಾಯಿಸಿದ್ದಾರೆ. ಬೆಳಗಾವಿ ಜಗದೀಶ್ ಶೆಟ್ಟರ್​ಗೆ ಹೊಸದಲ್ಲ, ಮಂಗಳಾ ಅಂಗಡಿ ಕೂಡ ನಮ್ಮ ಬೀಗರು. ಹೀಗಾಗಿ ಯಾವುದೇ ಸಮಸ್ಯೆ ಆಗಲ್ಲ. ಜಗದೀಶ್ ಶೆಟ್ಟರ್ ಆರಾಮವಾಗಿ ಗೆಲ್ಲುತ್ತಾರೆ ಎಂದರು.

ಇದನ್ನೂ ಓದಿ:ಬೆಳಗಾವಿ ಕ್ಷೇತ್ರದಲ್ಲಿ ನಾನು ನೂರಕ್ಕೆ ನೂರಷ್ಟು ಗೆಲ್ಲುತ್ತೇನೆ: ಜಗದೀಶ್ ಶೆಟ್ಟರ್

ಮೋದಿ ಅವರಿಗಾಗಿ ಎಲ್ಲರೂ ಒಂದಾಗ್ತಾರೆ

ಇನ್ನು ಶೆಟ್ಟರ್​ಗೆ ಟಿಕೆಟ್ ತಪ್ಪಿಸುವ ಕೆಲಸ ಆಗುತಿಲ್ಲ, ಬಂಡಾಯ ಪ್ರತಿ ಸಲ ಚುನಾವಣೆಯಲ್ಲಿ ಇರುತ್ತದೆ. ಎಲ್ಲವನ್ನೂ ಕೂಡ ಹೈಕಮಾಂಡ್ ನಾಯಕರು ಸರಿ ಮಾಡುತ್ತಾರೆ. ಪ್ರಧಾನಿ ಮೋದಿ ಅವರಿಗಾಗಿ ಎಲ್ಲರೂ ಒಂದಾಗ್ತಾರೆ. ಇದೀಗ ಬೆಳಗಾವಿ ಟಿಕೆಟ್ ಕೊಡುತ್ತಿರುವುದೇ ಜಗದೀಶ್ ಶೆಟ್ಟರ್​​ಗೆ ಸೂಕ್ತ ಸ್ಥಾನ‌ ಮಾನ‌ಕೊಟ್ಟಂತೆ ಎಂದು ಸಹೋದರ ಪ್ರದೀಪ್ ಶೆಟ್ಟರ್​ ಸ್ಪಷ್ಟಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ