ಹುಬ್ಬಳ್ಳಿ: ದೂರು ನೀಡಲು ಹೋಗಿದ್ದವರ ಮೇಲೆ ಪಿಎಸ್ಐ ಧಮ್ಕಿ; ಮನನೊಂದು ಒಂದೇ ಕುಟುಂಬ ಮೂವರು ಆತ್ಮಹತ್ಯೆಗೆ ಯತ್ನ

| Updated By: sandhya thejappa

Updated on: Jan 24, 2022 | 8:50 AM

ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ ಅಂತ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸಿದ್ದಪ್ಪ ಕಳಸಣ್ಣ, ಮಾಜಿ ಅಧ್ಯಕ್ಷ ನಾಗನಗೌಡ ಕೋಟಿಗೌಡರ ವಿರುದ್ಧ ದೂರು ನೀಡಿದ್ದರು. ಸಿದ್ದಪ್ಪ ನೀಡಿದ ದೂರಿನಿಂದ ಹಲವು ಬಾರಿ ನೋಟಿಸ್ ಬಂದಿತ್ತು.

ಹುಬ್ಬಳ್ಳಿ: ದೂರು ನೀಡಲು ಹೋಗಿದ್ದವರ ಮೇಲೆ ಪಿಎಸ್ಐ ಧಮ್ಕಿ; ಮನನೊಂದು ಒಂದೇ ಕುಟುಂಬ ಮೂವರು ಆತ್ಮಹತ್ಯೆಗೆ ಯತ್ನ
ಪಿಎಸ್ಐ
Follow us on

ಹುಬ್ಬಳ್ಳಿ: ದೂರು ನೀಡಲು ಪೊಲೀಸ್ ಠಾಣೆಗೆ (Police Station) ಹೋಗಿದ್ದವರ ಮೇಲೆ ಪಿಎಸ್ಐ (PSI) ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದ್ದು, ಮನನೊಂದ ಒಂದೇ ಕುಟುಂಬ ಮೂವರು ಆತ್ಮಹತ್ಯೆಗೆ (Suicide) ಯತ್ನಿಸಿದ್ದಾರೆ. ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಕುಟುಂಬಸ್ಥರು ಆತ್ಮಹತ್ಯೆಗೆ ಯತ್ನಿಸಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಮೂವರಿಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಜಿ ಅಧ್ಯಕ್ಷ ನಾಗನಗೌಡ ಕೋಟಿಗೌಡರ ವಿರುದ್ಧ ಮಾಜಿ ಸದಸ್ಯ ಸಿದ್ದಪ್ಪ ಕಳಸಣ್ಣ ದೂರು ನೀಡಲು ಠಾಣೆಗೆ ಹೋದಾಗ ಪಿಎಸ್ಐ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ ಅಂತ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸಿದ್ದಪ್ಪ ಕಳಸಣ್ಣ, ಮಾಜಿ ಅಧ್ಯಕ್ಷ ನಾಗನಗೌಡ ಕೋಟಿಗೌಡರ ವಿರುದ್ಧ ದೂರು ನೀಡಿದ್ದರು. ಸಿದ್ದಪ್ಪ ನೀಡಿದ ದೂರಿನಿಂದ ಹಲವು ಬಾರಿ ನೋಟಿಸ್ ಬಂದಿತ್ತು. ಈ ವಿಚಾರಕ್ಕೆ ಸಿದ್ದಪ್ಪ ಮತ್ತು ನಾಗನಗೌಡ ಗುಂಪುಗಳ ನಡುವೆ ಪರಸ್ಪರ ಜಗಳ ನಡೆದಿತ್ತು. ಗಲಾಟೆ ಸಂಬಂಧ ಸಿದ್ದಪ್ಪ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು. 4 ಬಾರಿ ಠಾಣೆಗೆ ಹೋದರೂ ದೂರು ದಾಖಲಿಸದೆ ಸಿದ್ದಪ್ಪ ಮೇಲೆ ಪಿಎಸ್ಐ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ಸಿದ್ದಪ್ಪ ಕಳಸಣ್ಣ, ಅವರ ಪುತ್ರ ಬಸವರಾಜ, ಯಲ್ಲಪ್ಪ ಕಳಸಣ್ಣನವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಕಬ್ಬಿನ ಹೊಲಕ್ಕೆ ಬೆಂಕಿ
ಕೊಪ್ಪಳ: ಆಕಸ್ಮಿಕ ಬೆಂಕಿ ತಗುಲಿ ಸುಮಾರು 5.50 ಲಕ್ಷ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದೆ. ಕೊಪ್ಪಳ ತಾಲೂಕಿನ ಭಾಗ್ಯನಗರದ ರೈತ ಈರಣ್ಣ ಬುಲ್ಟಿ ಎಂಬುವವರಿಗೆ ಸೇರಿದ ಕಬ್ಬು ಬೆಂಕಿಗಾಹುತಿಯಾಗಿದೆ. ಸುಮಾರು 6 ಎಕೆರೆ ಪ್ರದೆಶದಲ್ಲಿ ರೈತ ಈರಣ್ಣ ಕಬ್ಬು ಬೆಳೆದಿದ್ದರು. ಬೆಳೆ ಕಟಾವುವಿಗೆ ಬಂದಿತ್ತು. ಆದರೆ ಆಕಸ್ಮಿಕ ಬೆಂಕಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಇದನ್ನೂ ಓದಿ

Coriander Water Benefits: ಪ್ರತಿದಿನ ಬೆಳಿಗ್ಗೆ ಕೊತ್ತಂಬರಿ ಕಾಳಿನ ನೀರನ್ನು ಕುಡಿಯಿರಿ; ನಿಮ್ಮಲ್ಲಿನ ಅನೇಕ ಸಮಸ್ಯೆಗಳಿಗೆ ಇದೇ ಮದ್ದು

ದಾವಣಗೆರೆ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ಟೆಂಡರ್‌ನಲ್ಲಿಯೂ ನಡೆದಿದ್ಯಾ ಬ್ರಹ್ಮಾಂಡ ಭ್ರಷ್ಟಾಚಾರ

Published On - 8:47 am, Mon, 24 January 22