ಪತ್ನಿಗೆ ಜೀವ ಬೆದರಿಕೆ ಹಾಕಿದ್ದ ‘ಕೈ’ ಮುಖಂಡನ ವಿರುದ್ಧ ಕೇಸ್; ಗಿರೀಶ ಗದಿಗೆಪ್ಪಗೌಡರ್ ಸೇರಿದಂತೆ 6 ಜನರ ವಿರುದ್ಧ ಎಫ್‌ಐಆರ್ ದಾಖಲು

ಪತ್ನಿಗೆ ಜೀವ ಬೆದರಿಕೆ ಹಾಕಿದ್ದ ‘ಕೈ’ ಮುಖಂಡನ ವಿರುದ್ಧ ಕೇಸ್; ಗಿರೀಶ ಗದಿಗೆಪ್ಪಗೌಡರ್ ಸೇರಿದಂತೆ 6 ಜನರ ವಿರುದ್ಧ ಎಫ್‌ಐಆರ್ ದಾಖಲು
ಪ್ರಾತಿನಿಧಿಕ ಚಿತ್ರ

ಛೋಟಾ ಮುಂಬಯಿ ಹುಬ್ಬಳ್ಳಿಯಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರೋ ಕ್ಯಾಶಿನೋ ವಿಚಾರವಾಗಿ ಗಲಾಟೆ ನಡೆಯುತ್ತಲೇ ಇದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿರೋ ಗಿರೀಶ್ ಗದಿಗೆಪ್ಪಗೌಡರ್‌ ಮತ್ತು ಇನ್ನಿತರ ಕೈ ಮುಖಂಡರ ಮಧ್ಯೆ ಆರೋಪ ಪ್ರತ್ಯಾರೋಪ‌ ನಡೆಯುತ್ತಲೇ ಇತ್ತು.

TV9kannada Web Team

| Edited By: Ayesha Banu

Jan 23, 2022 | 11:24 AM

ಹುಬ್ಬಳ್ಳಿ: ಕಳೆದೊಂದು ವಾರದಿಂದ ಹುಬ್ಬಳ್ಳಿಯ ಕೈ ಮುಖಂಡರ ಮಧ್ಯೆ ನಡೆಯುತ್ತಿದ್ದ ಕ್ಯಾಶಿನೋ ಕಿರಿಕ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸದ್ಯ ಪತಿಯ ವಿರುದ್ಧವೇ ಪತ್ನಿ ದೂರು ನೀಡಿದ್ದ ದೂರನ್ನ ಪೊಲೀಸರೇ ಎಫ್ಐಆರ್ ದಾಖಲಿಸಿದ್ದರು. ಹೀಗಾಗೇ ಕೈ ಮುಖಂಡ ಗಿರೀಶ್ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.

ಛೋಟಾ ಮುಂಬಯಿ ಹುಬ್ಬಳ್ಳಿಯಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರೋ ಕ್ಯಾಶಿನೋ ವಿಚಾರವಾಗಿ ಗಲಾಟೆ ನಡೆಯುತ್ತಲೇ ಇದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿರೋ ಗಿರೀಶ್ ಗದಿಗೆಪ್ಪಗೌಡರ್‌ ಮತ್ತು ಇನ್ನಿತರ ಕೈ ಮುಖಂಡರ ಮಧ್ಯೆ ಆರೋಪ ಪ್ರತ್ಯಾರೋಪ‌ ನಡೆಯುತ್ತಲೇ ಇತ್ತು. ಆದ್ರೆ ಅದಕ್ಕೆ ಇಂದು ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಗಿರೀಶ್ ವಿರುದ್ಧ ಆತನ ಪತ್ನಿಯ ಗಂಭೀರ ಆರೋಪ ಮಾಡಿದ್ದಾ. ತನ್ನ ಪತಿ ಹಾಗೂ ಕುಟುಂಬಸ್ಥರು ತನ್ನ ಹತ್ಯೆಗೆ ಯತ್ನಿಸಿದ್ದಾರೆ ಎನ್ನೋ ಅರೋಪ‌ ಮಾಡಿದ್ದಾರೆ. ಅದು ಗಂಡನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಗಿರೀಶ್ ಗದಿಗೆಪ್ಪ ಗೌಡರ್‌ ಈ ರೀತಿ ಮಾಡ್ತಿದ್ದು, ಆತನಿಗೆ ಕ್ಯಾಶಿನೋ ವ್ಯವಹಾರ, ಡ್ರಗ್ಸ್ ಪೆಡ್ಲರ್ ಗಳ ನಂಟಿದೆ ಅಂತ ಪತ್ನಿಯೇ ಪತಿಯ ವಿರುದ್ದ ಆರೋಪಿಸುತ್ತಿದ್ದರು. ಅಲ್ದೆ ಕೆಲ ಕೊಲೆ ಯತ್ನದ ವಿಡಿಯೋವನ್ನ ಕೂಡಾ ಬಿಡುಗಡೆ ಮಾಡಿ ಪತಿಯ ಮುಖವಾಡವನ್ನೆ ಬಯಲು ಮಾಡಿದ್ದರು. ತಮ್ಮ ಹಣಕಾಸಿನ ವಿಚಾರದಲ್ಲಿ ನನ್ನನ್ನ ಎಳೆದು ತಂದಿದ್ದಾರೆ, ಅಲ್ಲದೆ ನಂಗೆ ಡಿವೋಸ್ ನೋಟಿಸ್ ಸಹಿತ ನೀಡಿದ್ದಾರೆ. ನಾನು ನನ್ನ ತಾಯಿ ಮನೆಯಲ್ಲಿದ್ದು ನಂಗೆ ರಕ್ಷಣೆ ನೀಡಬೇಕು ಎಂದು ಅಂತ ಮನವಿ ಮಾಡಿದ್ದರು. ಈ ಬಗ್ಗೆ ಟಿರ್ವಿ ಕೂಡಾ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಸದ್ಯ ಪೊಲೀಸ್ ಇಲಾಖೆ ಕೈ ಮುಂಖಡ ಸೇರಿದಂತೆ ಆರು ಜನರ ವಿರುದ್ಧ ದೂರು ದಾಖಲಿಸಿಕೊಂಡಿದೆ.

ಇನ್ನು ಒಂದು ವಾರದಿಂದ ಛೋಟಾ ಮುಂಬಯಿ ಹುಬ್ಬಳ್ಳಿಯಲ್ಲಿ ಗೀರಿಶ್ ಹಾಗೂ ಕೆಲ ಕಾಂಗ್ರೆಸ್ ಮುಖಂಡರ ಮಧ್ಯೆ ಕ್ಯಾಶಿನೋ ವಿಚಾರವಾಗಿ ಗಲಾಟೆ ನಡೆಯತ್ತಲೇ ಇತ್ತು. ಅಲ್ಲದೆ ರಾಮತೀರ್ಥ ಎನ್ನೋರಿಗೆ 50 ಲಕ್ಷ ಹಣ ಹೂಡಿಕೆ ಮಾಡಿಸಿ ವಾಪಸ್ ಕೇಳಿದ್ದಕ್ಕೆ ಇದೇ ಗಿರೀಶ್ ಹಲ್ಲೆ ಮಾಡಿದ್ದ ಆರೋಪ ಎದುರಿಸಿದ್ದ, ಅಷ್ಟೆ ಏಕೆ ಇಬ್ಬರು ಹುಬ್ಬಳ್ಳಿಯ ಉಪನಗರ ಹಾಗೂ ವಿಧ್ಯಾನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿದ್ದರು. ಸ್ವಲ್ಪ ರಾಜಕೀಯವಾಗಿ ಚಿಗುರುತ್ತಿದ್ದವ ಗಿರೀಶ್ ಗನ್ ಲೈಸನ್ಸ್ ಕೂಡಾ ಹೊಂದಿದ್ದ ಅದೇ ಗನ್ ನಿಂದ ತನ್ನನ್ನೂ ಹಿಡಿದು ಎಲ್ಲರನ್ನ ಬೆದರಿಸುತ್ತಿದ್ದ ಅಂತ ಪತ್ನಿಯೇ ಆರೋಪಿಸಿದ್ದಾರೆ. ಅಲ್ಲದೆ ಗದಗ ಮೂಲದ ಯುವತಿಯ ಜೊತೆ ಅನೈತಿಕ ಸಂಬಂಧ ಹೊಂದಿರೋ ಗಿರೀಶ್, ಆಕೆಯನ್ನ ಮದುವೆಯಾಗೋಕೆ ಮತ್ತು ನನ್ನ ಆಸ್ತಿ ಹೊಡೆಯೋಕೆ ಮಸಲತ್ತು ನಡೆಸಿದ್ದಾನೆ ಎಂದು ಪತ್ನಿಯೇ ಆರೋಪಿಸುತ್ತಿದ್ದಾರೆ.ಅಲ್ಲದೆ ಇತ್ತ ರಾಮತೀರ್ಥ ಕೂಡಾ ನನ್ನ ಹಣ ಕೊಡಿಸಿ ನಂಗೆ ರಕ್ಷಣೆ ನೀಡಿ ಎನ್ನುತ್ತಿದ್ದಾನೆ.

ಒಟ್ನಲ್ಲಿ ಸಿದ್ದರಾಮಯ್ಯ, ಸೇರಿದಂತೆ ಇನ್ನಿತರ ಮುಖಂಡರ ಜೊತೆ ಓಡನಾಡವಿದೆ ಅಂತ ಬಿಂಬಿಸಿಕೊಳ್ಳುತ್ತಿದ್ದ ಗಿರೀಶ್ ಮುಖವಾಡ ಬಯಲಾಗಿದೆ. ಇತ್ತ ಪತ್ನಿಯೇ ಆರೋಪ ಮಾಡ್ತಿದ್ದ ಗಿರೀಶ್ ಕಾಲ್ಕಿತ್ತಿದ್ದಾನೆ. ಸದ್ಯ ಪ್ರಕರಣ ತನಿಖೆ ನಡೆಸುತ್ತಿರೋ ಖಾಕಿ ಪಡೆ ಗಿರೀಶ್ ನ ಅಸಲಿಯತ್ತನ್ನ ಅದ್ಯಾವ ರೀತಿಯಲ್ಲಿ ಬಿಚ್ಚಿಡ್ತಾರೆ ಎನ್ನೋದನ್ನ ಕಾದು ನೋಡಬೇಕು.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಹುಬ್ಬಳ್ಳಿ

ಇದನ್ನೂ ಓದಿ: Crime News: ನೆಲಮಂಗಲದ ಎರಡು ಕಡೆ ಬೀಗ ಒಡೆದು ಕಳ್ಳತನ, ವಿಜಯಪುರ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನ

ಶಾಖ ಉತ್ಪತ್ತಿ ಮಾಡುವ ದಿನಬಳಕೆಯ ವಸ್ತುಗಳಿಂದ ಚರ್ಮ ಸುಡಬಹುದು; ಎಚ್ಚರಿಕೆಯಿಂದಿರಿ

Follow us on

Related Stories

Most Read Stories

Click on your DTH Provider to Add TV9 Kannada