AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್ ಜೋಡೋ ಅಲ್ಲ-ಭಾರತ್ ತೋಡೋ ಯಾತ್ರೆ :ರಾಹುಲ್ ಗಾಂಧಿ ಯಾತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯ

ಆರ್‌ಎಸ್‌ಎಸ್‌ ವಿರುದ್ಧ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ. ನಿಮ್ಮ ಮುತ್ತಜ್ಜ ಮತ್ತು ಅಂದಿನ ಪ್ರಧಾನಿ ನೆಹರು ಆಹ್ವಾನಿಸಿದ ಆರ್‌ಎಸ್‌ಎಸ್ ವಿರುದ್ಧ ಮಾತನಾಡುವ ಮೂಲಕ ನೀವು ನೆಹರು ಅವರನ್ನು ಅವಮಾನಿಸುತ್ತಿಲ್ಲವೇ? ನೀವು ಯಾರನ್ನಾದರೂ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದೀರಾ? ಇದು ನಿಮ್ಮ ಡಬಲ್ ಸ್ಟಾಂಡರ್ಡ್ ಅಲ್ಲವೇ..? ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಭಾರತ್ ಜೋಡೋ ಅಲ್ಲ-ಭಾರತ್ ತೋಡೋ ಯಾತ್ರೆ :ರಾಹುಲ್ ಗಾಂಧಿ ಯಾತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯ
ಭಾರತ್ ಜೋಡೋ ಅಲ್ಲ-ಭಾರತ್ ತೋಡೋ ಯಾತ್ರೆ :ರಾಹುಲ್ ಯಾತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯ
TV9 Web
| Updated By: ಸಾಧು ಶ್ರೀನಾಥ್​|

Updated on: Sep 30, 2022 | 3:42 PM

Share

ಆರ್.ಎಸ್.ಎಸ್ (RSS) ವಿರುದ್ಧ ನಮ್ಮ ಹೋರಾಟ ಎಂದಿರುವ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಯಾತ್ರೆ ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಯಾತ್ರೆಯಾಗಿದೆ ಎಂದು ಜೋಶಿ ಲೇವಡಿ ಮಾಡಿದ್ದಾರೆ.

ಆರ್.ಎಸ್ ಎಸ್ ಕುರಿತು ರಾಹುಲ್ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಜೋಶಿ, ಆರ್.ಎಸ್ ಎಸ್ ಬಗ್ಗೆ ನೆಹರು ಪ್ರಸಂಶೆ ವ್ಯಕ್ತಪಡಿಸಿದ ವಿಚಾರವನ್ನ ರಾಹುಲ್ ಗಾಂಧಿ ಮೊದಲು ತಿಳಿದುಕೊಳ್ಳಲಿ. ದೇಶದ ರಕ್ಷಣೆ ಮತ್ತು ಏಕತೆಯ ವಿಷಯ ಬಂದಾಗ ಆರ್‌ಎಸ್‌ಎಸ್‌ ಸದಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತದೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‌

ಚೀನಾ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರ ನಿಸ್ವಾರ್ಥ ಸೇವೆ ಮೆಚ್ಚಿಕೊಂಡು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು 1963ರ ಗಣರಾಜ್ಯ ಪರೇಡ್‌ನಲ್ಲಿ ಭಾಗವಹಿಸಲು ಆರ್‌ಎಸ್‌ಎಸ್‌ನ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದ್ದರು.

ಇದೀಗ ಇಂಥಹ ಆರ್‌ಎಸ್‌ಎಸ್‌ ವಿರುದ್ಧ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ. ನಿಮ್ಮ ಮುತ್ತಜ್ಜ ಮತ್ತು ಅಂದಿನ ಪ್ರಧಾನಿ ನೆಹರು ಆಹ್ವಾನಿಸಿದ ಆರ್‌ಎಸ್‌ಎಸ್ ವಿರುದ್ಧ ಮಾತನಾಡುವ ಮೂಲಕ ನೀವು ನೆಹರು ಅವರನ್ನು ಅವಮಾನಿಸುತ್ತಿಲ್ಲವೇ? ನೀವು ಯಾರನ್ನಾದರೂ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದೀರಾ? ಇದು ನಿಮ್ಮ ಡಬಲ್ ಸ್ಟಾಂಡರ್ಡ್ ಅಲ್ಲವೇ..? ನಿಮ್ಮ ಪಕ್ಷದ ಹಿರಿಯ ಮುಖಂಡರು ಹಾಗೂ ದೇಶದ ಮೊದಲ ಪ್ರಧಾನಿಗೆ ನೀವು ಕೊಡುವ ಗೌರವ ಇದೇನಾ? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.