ಹುಬ್ಬಳ್ಳಿ: ರಾಮ ರಾಜ್ಯಕ್ಕೋಸ್ಕರ ರಾಮಮಂದಿರ (Ram Mandir) ನಿರ್ಮಾಣ ಆಗುತ್ತಿದೆ. ಮಂದಿರ ಕಟ್ಟುವ ಜೊತೆಗೆ ಬಡವರಿಗೆ ಮನೆ ಕಟ್ಟಿಸಿಕೊಡುವ ಸಂಕಲ್ಪ ಮಾಡೋಣ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು (Pejawar seer vishwesha teertha) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಮರಾಜ್ಯ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಹೊಸ ಸಂಕಲ್ಪ ಕೈಗೊಂಡಿದ್ದು, ರಾಷ್ಟ್ರಾದ್ಯಂತ ರಾಮಸೇವಾ ಸಂಕಲ್ಪ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಗೂ ಸಹ ಸೂಚನೆ ನೀಡಲಾಗಿದೆ. ನಮ್ಮಲ್ಲಿ 1 ವರ್ಷಕ್ಕೆ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡುವವರು ಇದ್ದಾರೆ. ಅದೇ 5 ಲಕ್ಷ ರೂ. ಖರ್ಚು ಮಾಡಿದ್ರೆ ಸುಂದರವಾದ ಸಣ್ಣ ಮನೆ ನಿರ್ಮಾಣವಾಗುತ್ತದೆ. ಹೀಗಾಗಿ ದಿನ ದಲಿತರಿಗೆ ಮನೆ ಕಟ್ಟಿಸಿಕೊಡೋಣ ಎಂದು ಕರೆ ನೀಡಿದರು.
ಇನ್ನು ಸಾರ್ವಜನಿಕರಿಗೆ ಕರೆ ನೀಡುವ ಮೂಲಕ ತಮ್ಮ 60ನೇ ವಯಸ್ಸಿನ ವೇಳೆಗೆ ಅಂದರೆ ಒಂದು ವರ್ಷದ ಅವಧಿಯಲ್ಲಿ ಬಡವರಿಗೆ ಆರು ಮನೆ ನಿರ್ಮಿಸಿ ಕೊಡುವ ಸಂಕಲ್ಪ ಮಾಡಿರುವುದಾಗಿ ಪೇಜಾವರ ಶ್ರೀ ತಿಳಿಸಿದರು. ಈ ಕಾರ್ಯಕ್ಕೆ ಉಡುಪಿಯಿಂದ ಚಾಲನೆ ಸಿಗಲಿದೆ. ಹಾಗಾಗಿ ರಾಮದೇವರ ಹೆಸರಿನಲ್ಲಿ ಮನೆಗಳನ್ನು ಕಟ್ಟಿಸಿ ದಾನ ಮಾಡುವುದರೊಂದಿಗೆ ರಾಮರಾಜ್ಯದ ಕಲ್ಪನೆ ಕೃಷ್ಣನ ಸನ್ನಿಧಾನದಿಂದ ಆಗಬೇಕು ಎಂದರು.
ಮಂದಿರದಿಂದ ದೇಶಕ್ಕೇನು ಲಾಭ ಅಂತ ಜನ ಪ್ರಶ್ನೆ ಕೇಳ್ತಾರೆ. ಮಂದಿರದ ಜೊತೆ ದೇಶದ ಮಂದಿಗೂ ಸಹಾಯ ಮಾಡೋಣ. ಪ್ರಧಾನಿ ಮೋದಿ ಒಂದು ದಿನವನ್ನು ಸಂಕಲ್ಪ ದಿನ ಎಂದು ಘೋಷಿಸಬೇಕು. ದೇಶದ ಭಗವದ್ಭಕ್ತರು, ದೇಶಪ್ರೇಮಿಗಳು ಯೋಜನೆಗೆ ಕೈಜೋಡಿಸಬೇಕು. ಈ ಸೇವಾ ಕಾರ್ಯಕ್ಕೆ ಒಂದು ಆ್ಯಪ್ ಸಿದ್ಧ ಮಾಡಬೇಕು. ಪ್ರತಿ ಜಿಲ್ಲೆ, ರಾಜ್ಯದಲ್ಲಿ ಕೈಗೊಂಡ ಕೆಲಸ ದಾಖಲಾಗಬೇಕು. ಒಂದು ವರ್ಷದ ಉತ್ತಮ ಕಾರ್ಯಗಳನ್ನು ಶ್ರೀರಾಮ ದೇವರಿಗೆ ಅರ್ಪಿಸೋಣ ಎಂದರು.
ಮನೆ ನಿರ್ಮಾಣದ ಜೊತೆ ಗೋವು, ವಿದ್ಯಾರ್ಥಿಗಳು, ರೋಗಿಗಳ ದತ್ತು ಸ್ವೀಕಾರ ಮಾಡೋಣ. ದೇಶದ ಉದ್ದಗಲದಲ್ಲಿ ಜನರಲ್ಲಿ ಈ ಪರಿವರ್ತನೆ ಆಗಬೇಕು. ದೇಶಾದ್ಯಂತ ಸೇವಾ ಕಾರ್ಯ ಐಚ್ಛಿಕವಾಗದೆ ಕಡ್ಡಾಯ ಆಗಬೇಕು. ಜೀವನದಲ್ಲಿ ವೈಭವದ ಆಚರಣೆಯ ಜೊತೆ ಬಡವರ ಬಗ್ಗೆ ಕನಿಕರ ತೋರೋಣ. ದೇವಭಕ್ತಿ ಮತ್ತು ದೇಶಭಕ್ತಿ ಬೇರೆಬೇರೆಯಲ್ಲ. ಈ ಯೋಜನೆಯ ಕುರಿತು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದು ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: Ayodhya Ram Mandir: 2024ರ ಸಂಕ್ರಾಂತಿ ವೇಳೆಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಇನ್ನು ಮುಂದಿನ ಸಂಕ್ರಾಂತಿಯೊಳಗೆ ರಾಮಮಂದಿರದ ಒಂದು ಹಂತದ ಕಾಮಗಾರಿ ಮುಕ್ತಾಯವಾಗಿರುತ್ತದೆ. ಒಂದು ಕಾಲಕ್ಕೆ ರಾಮಮಂದಿರ ನಿರ್ಮಾಣ ಅನ್ನೋದು ಕನಸಾಗಿತ್ತು. ಆದ್ರೆ ಇನ್ನೊಂದು ವರ್ಷದಲ್ಲಿ ಕಾಮಗಾರಿ ಮುಗಿದು ಹೋಗತ್ತೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:11 pm, Mon, 16 January 23