ಧಾರವಾಡ: ಸಿಗರೇಟ್​ಗಾಗಿ ಮೊಬೈಲ್ ಟವರ್ ಏರಿ ಕುಳಿತ ಮಾನಸಿಕ ಅಸ್ವಸ್ಥ

ಮಾನಸಿಕ ಅಸ್ವಸ್ಥನೊಬ್ಬ ಮೊಬೈಲ್ ಟಾವರ್ ಮೇಲೆ ಹತ್ತಿ ಕುಳಿತು ಜನರನ್ನು ಬೆಚ್ಚಿಬೀಳಿಸಿದ ಘಟನೆ ಧಾರವಾಡದ ಆಲೂರು ವೆಂಕಟರಾವ್ ವೃತ್ತದ ಬಳಿ ನಡೆದಿದೆ.

ಧಾರವಾಡ: ಸಿಗರೇಟ್​ಗಾಗಿ ಮೊಬೈಲ್ ಟವರ್ ಏರಿ ಕುಳಿತ ಮಾನಸಿಕ ಅಸ್ವಸ್ಥ
ಮೊಬೈಲ್ ಟವರ್ ಏರಿ ಕುಳಿತ ಮಾನಸಿಕ ಅಸ್ವಸ್ಥ
Follow us
TV9 Web
| Updated By: Rakesh Nayak Manchi

Updated on:Jan 17, 2023 | 6:24 PM

ಧಾರವಾಡ: ಸದ್ಯ ಪರಿಸ್ಥಿತಿ ಹೇಗಿದೆ ಎಂದರೆ ಯಾರು ಏನೇ ನೋವು ಮಾಡಿದರು ಅದನ್ನು ಪ್ರತಿಭಟಿಸಲು ಸಿಗುವ ಸ್ಥಳವೆಂದರೆ ಅದು ಮೊಬೈಲ್ ಟವರ್. ಮನೆಯಲ್ಲಿ ಹೆಂಡತಿ ಕಾಟ, ಪ್ರೀತಿ ನಿರಾಕರಿಸಿದರೆ, ಜಮೀನು ವಿವಾದ, ಸರ್ಕಾರದ ಇಲಾಖೆಯಿಂದ ಆಗಬೇಕಾಗಿದ್ದ ಕೆಲಸ ಆಗದಿದ್ದಾಗ ಅಥವಾ ಇನ್ಯಾವುದೇ ಸಂದರ್ಭವನ್ನು ಪ್ರತಿಭಟಿಸಲು ಮೊಬೈಲ್ ಟವರ್ ಏರುತ್ತಾರೆ. ಇದೇ ರೀತಿಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಸಿಗರೇಟ್​ ಮತ್ತು ಸಿಗರ್​ಲೈಟ್​​ಗಾಗಿ ಮೊಬೈಲ್ ಟವರ್ ಏರಿ (Man climbs mobile tower) ಜನರನ್ನು ಬೆಚ್ಚಿಬೀಳಿಸಿದ ಘಟನೆ ಧಾರವಾಡದ (Dharwad) ಆಲೂರು ವೆಂಕಟರಾವ್ ವೃತ್ತದ ಬಳಿ ನಡೆದಿದೆ.

ಮಾನಸಿಕ ಅಸ್ವಸ್ಥನಾಗಿರುವುದರಿಂದ ಆತ ಏನು ಬೇಕಾದರೂ ಮಾಡಬಲ್ಲ. ಹೀಗಾಗಿ ಈತನನ್ನು ಸುರಕ್ಷಿತವಾಗಿ ಕೆಳಗಿಳಿಸುವುದು ಕಷ್ಟದ ಕೆಲಸ. ಇದೇ ಕಾರಣಕ್ಕೆ ಸ್ಥಳದಲ್ಲಿ ಜಮಾಯಿಸಿದ ಜನರು ಜನರು ಹೇಗಪ್ಪಾ ಈತನನ್ನು ಕೆಳಗಿಳಿಸುವುದು ಎಂಬ ಚಿಂತೆಯಲ್ಲಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ವ್ಯಕ್ತಿಯ ಮನವೋಲಿಸುವ ಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಮೊಬೈಲ್ ಟವರ್​​ಗಳನ್ನೇ ಟಾರ್ಗೇಟ್ ಮಾಡಿ RRU ಕಾರ್ಡ್​​ಗಳ ಕಳವು; ದೂರು ನೀಡಿದ ಇಂಡಸ್ ಟವರ್ ಕಂಪನಿ

ಟಾವರ್ ಏರಿ ಕುಳಿತ ಮಾನಸಿಕ ಅಸ್ವಸ್ಥನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಓರ್ವ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಓರ್ವ ಪೊಲೀಸ್ ಸಿಬ್ಬಂದಿ ಮಾನಸಿಕ ವ್ಯಕ್ತಿಯ ಮನವೋಲಿಸುತ್ತಾ, ಮಾತನಾಡುತ್ತಾ ಟವರ್ ಒಳಗಿಂದ ಮೇಲಕ್ಕೆ ಹತ್ತಿದ್ದಾರೆ. ಈ ವೇಳೆ ಕೈಯಲ್ಲಿ ರಾಡ್ ಹಿಡಿದುಕೊಂಡಿರುವ ಮಾನಸಿಕ ಅಸ್ವಸ್ಥ ವ್ಯಕ್ತಿ ಹಾರುವ ಬೆದರಿಕೆ ಹಾಕಿದ್ದಾನೆ. ಹೀಗಾಗಿ ವ್ಯಕ್ತಿಯ ಅಮೂಲ್ಯ ಜೀವದ ಹಿನ್ನಲೆ ವ್ಯಕ್ತಿಯ ಬಳಿ ಹೋಗಲು ಹಿಂದೇಟು ಹಾಕಿದ್ದಾರೆ.

ವ್ಯಕ್ತಿಯನ್ನು ಮನವೋಲಿಸುವ ನಿಟ್ಟಿನಲ್ಲಿ ಸಿಬ್ಬಂದಿ ಊಟ ನೀಡಿದ್ದಾರೆ. ಆದರೆ ಊಟವನ್ನು ಆತ ಎಸೆದಿದ್ದು, ಸಿಗರೇಟ್ ಮತ್ತು ಸಿಗರ್​ಲೈಟ್ ಬೇಕೆಂದು ಪಟ್ಟುಹಿಡಿದು ಟವರ್ ತುತ್ತ ತುದಿಯಲ್ಲಿ ಕುಳಿತುಕೊಂಡಿದ್ದಾನೆ. ಹೀಗಾಗಿ ಪೊಲೀಸರು ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದು, ಸಿಗರೇಟ್ ಮತ್ತು ಸಿಗರ್​ಲೈಟ್ ನೀಡಿ ಟವರ್​ನಿಂದ ಕೆಳಗಿಳಿಸುವ ಪ್ಲಾನ್ ಹಾಕಿಕೊಂಡಿದ್ದಾರೆ.

ಇನ್ನಷ್ಟು ಅಪ್​ಡೇಟ್ಸ್​ಗಾಗಿ ನಿರೀಕ್ಷಿಸಿ…

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Tue, 17 January 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್