ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಯಿಂದ ಸಿಕಂದರಾಬಾದ್ ಗೆ ನಿತ್ಯ ರೈಲು ಸೇವೆ ಆರಂಭ: ಪ್ರಲ್ಹಾದ್ ಜೋಶಿ ಮನವಿಗೆ ಸ್ಪಂದಿಸಿದ ರೈಲ್ವೇ ಸಚಿವ ವೈಷ್ಣವ್

Pralhad Joshi: ಬೆಳಗಾವಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಸಿಕಂದರಾಬಾದ್ ವರೆಗೆ ನಿತ್ಯ ರೈಲು ಸೇವೆ ಆರಂಭಿಸುವ ಕುರಿತಂತೆ ಈ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಒತ್ತಾಯಿಸಿದ್ದರು.

ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಯಿಂದ ಸಿಕಂದರಾಬಾದ್ ಗೆ ನಿತ್ಯ ರೈಲು ಸೇವೆ ಆರಂಭ: ಪ್ರಲ್ಹಾದ್ ಜೋಶಿ ಮನವಿಗೆ ಸ್ಪಂದಿಸಿದ ರೈಲ್ವೇ ಸಚಿವ ವೈಷ್ಣವ್
ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಯಿಂದ ಸಿಕಂದರಾಬಾದ್ ಗೆ ನಿತ್ಯ ರೈಲು ಸೇವೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 18, 2023 | 7:48 AM

ಹುಬ್ಬಳ್ಳಿ: ಬೆಳಗಾವಿಯಿಂದ (Belagavi) ಸಿಕಂದರಾಬಾದ್ (Secunderabad) ನಿತ್ಯ ರೈಲ್ವೇ ಸಂಚಾರದ ಬಹು ದಿನಗಳ ಬೇಡಿಕೆ ಕಡೆಗೂ ಈಡೇರಿದೆ. ನಿನ್ನೆ ಮಂಗಳವಾರದಿಂದ ಈ ಮಾರ್ಗದಲ್ಲಿ ರೈಲ್ವೇ ಸೇವೆ (Railway) ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwin Vaishnav) ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಬೆಳಗಾವಿಯಿಂದ ಹುಬ್ಬಳ್ಳಿ (Hubballi) ಮಾರ್ಗವಾಗಿ ಸಿಕಂದರಾಬಾದ್ ವರೆಗೆ (South Western Railways – SWR) ನಿತ್ಯ ರೈಲು ಸೇವೆ ಆರಂಭಿಸುವ ಕುರಿತಂತೆ ಈ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಒತ್ತಾಯಿಸಿದ್ದರು. ಜೋಶಿ ಅವರ ಮನವಿಗೆ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಇದೀಗ ಜನವರಿ 17 ರಿಂದ ಈ ರೈಲ್ವೇ ಸೇವೆ ಆರಂಭವಾಗಿದ್ದು, ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೆಳಗಾವಿಯಿಂದ ಹೊರಡುವ ರೈಲು ಖಾನಾಪುರ, ಲೋಂಡಾ, ಹುಬ್ಬಳ್ಳಿ, ಕೊಪ್ಪಳ, ಬಳ್ಳಾರಿ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಚಿತ್ತಾಪುರ, ಮಳಖೇಡ ರೋಡ್, ಬೇಗಂಪೇಟ ಮಾರ್ಗದ ಮೂಲಕ ಸಿಕಂದರಾಬಾದ್ ತಲುಪಲಿದೆ.

ಬೆಳಗಾವಿಯಿಂದ ಮಧ್ಯಾಹ್ನ 1.10ಕ್ಕೆ ಹೊರಡಲಿರುವ ರೈಲು ಬೆಳಗ್ಗೆ 5.50ಕ್ಕೆ ಸಿಕಂದರಾಬಾದ್ ತಲುಪಲಿದೆ. ಸಿಕಂದರಾಬಾದ್ ನಿಂದ ರಾತ್ರಿ 10:20ಕ್ಕೆ ಹೊರಟು ಸಂಜೆ 3.55 ಕ್ಕೆ ಬೆಳಗಾವಿ ತಲುಪಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ಈ ವಿಶೇಷ ರೈಲು ಆರಂಭಿಸುವ ನಿರ್ಧಾರ ಕೈಗೊಂಡು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಹೃತ್ಫೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:44 am, Wed, 18 January 23