ಕನ್ನಡದಲ್ಲಿದ್ದ ಕಾರಣಕ್ಕೆ ಚೆಕ್​​ ತಿರಸ್ಕಾರ: ಬ್ಯಾಂಕ್​ಗೆ 85 ಸಾವಿರ ರೂ. ದಂಡ ವಿಧಿಸಿದ ಕೋರ್ಟ್​

| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2022 | 12:10 PM

ಧಾರವಾಡದ ವಾದಿರಾಜಾಚಾರ್ಯ ಇನಾಮದಾರ್ ಎಂಬುವವರ ಚೆಕ್​ನ್ನು ಕನ್ನಡದಲ್ಲಿದಿದ್ದಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಎಸ್‌ಬಿಐ ಬ್ಯಾಂಕ್​ ತಿರಸ್ಕರಿತ್ತು.

ಕನ್ನಡದಲ್ಲಿದ್ದ ಕಾರಣಕ್ಕೆ ಚೆಕ್​​ ತಿರಸ್ಕಾರ: ಬ್ಯಾಂಕ್​ಗೆ 85 ಸಾವಿರ ರೂ. ದಂಡ ವಿಧಿಸಿದ ಕೋರ್ಟ್​
ಕನ್ನಡದಲ್ಲಿ ಬರೆದಿರುವ ಚೆಕ್​​.
Follow us on

ಧಾರವಾಡ: ಕನ್ನಡದಲ್ಲಿದ್ದ ಕಾರಣಕ್ಕೆ ಬ್ಯಾಂಕ್ ಚೆಕ್​ನ್ನು ಅಮಾನ್ಯ ಹಿನ್ನೆಲೆ ಧಾರವಾಡದ ಗ್ರಾಹಕರ ವ್ಯಾಜ್ಯಗಳ ಆಯೋಗ ಬ್ಯಾಂಕ್‌ಗೆ 85,177ರೂ ದಂಡ ವಿಧಿಸಿದೆ. ಧಾರವಾಡದ ವಾದಿರಾಜಾಚಾರ್ಯ ಇನಾಮದಾರ್ ಎಂಬುವವರ ಚೆಕ್​ನ್ನು ಕನ್ನಡದಲ್ಲಿದಿದ್ದಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಎಸ್‌ಬಿಐ ಬ್ಯಾಂಕ್​ ತಿರಸ್ಕರಿತ್ತು. ಚೆಕ್ ಮೂಲಕ ವಾದಿರಾಜಾಚಾರ್ಯ ವಿದ್ಯುತ್ ಬಿಲ್ ಪಾವತಿ ಮಾಡಿದ್ದು, 6000 ರೂ. ಎಂದು ಕನ್ನಡದಲ್ಲಿ ಬರೆದು ಚೆಕ್ ನೀಡಲಾಗಿದೆ. ಕನ್ನಡದ ಅಂಕಿಗಳು ತಿಳಿಯದ ಕಾರಣ ಚೆಕ್ ಅಮಾನ್ಯ ಮಾಡಲಾಗಿದೆ. ಇದರಿಂದ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ಧಾರವಾಡದ ಕಲ್ಯಾಣ ನಗರ 2ನೇ ಕ್ರಾಸ್‌ನಲ್ಲಿನ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಚೆಕ್‌ ಮುಖಾಂತರ ವಿದ್ಯುತ್ ಬಿಲ್ ತುಂಬದಂತೆ ಹೆಸ್ಕಾಂ ನಿರ್ಬಂಧ‌ ಹೇರಿದ್ದು, ನೊಂದ ವಾದಿರಾಜಾಚಾರ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ.

8 ತಿಂಗಳ ವಿಚಾರಣೆ ಬಳಿಕ ಗೆಲುವು

ಇದು ಕನ್ನಡಕ್ಕಾದ ಅವಮಾನ ಅಂತಾ ಕಾನೂನು ಹೋರಾಟ ಮಾಡಿದ್ದ ವಾದಿರಾಜಾಚಾರ್ಯ ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರೆ. ಆದರೆ ಎಲ್ಲ ವ್ಯವಹಾರಕ್ಕೂ ಕನ್ನಡ ಬಳಕೆ ಮಾಡುತ್ತಿದ್ದು, ಕನ್ನಡಕ್ಕಾಗಿ ಕಾನೂನು ಹೋರಾಟ ಮಾಡಿ ಕೊನೆಗೆ 8 ತಿಂಗಳ ವಿಚಾರಣೆ ಬಳಿಕ ಗೆಲುವು ಸಾಧಿಸಿದ್ದಾರೆ. ಕನ್ನಡ ಕಡೆಗಣಿಸೋ ಬ್ಯಾಂಕ್‌ಗಳಿಗೆ ಈ ತೀರ್ಪು ಎಚ್ಚರಿಕೆ ಗಂಟೆಯಾಗಬೇಕು. ನಾನು ಇಂಗ್ಲಿಷ್ ಉಪನ್ಯಾಸಕನಾಗಿದ್ದರು, ಕನ್ನಡ ನಮ್ಮ ಆಡಳಿತ ಭಾಷೆ. ಕನ್ನಡಿಗರಾಗಿ ಕನ್ನಡ ಬಳಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಬ್ಯಾಂಕ್​ಗಳಲ್ಲಿ ತ್ರಿಭಾಷಾ ನೀತಿಯಡಿಯಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಯನ್ನು ಎತ್ತಿಹಿಡಿಯುವುದರಿಂದ ಈ ತೀರ್ಪು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್​ನಾಗಭೂಷಣ ಮಾತನಾಡಿದ್ದು, ಈ ತೀರ್ಪು ಒಂದು ನಿದರ್ಶನವಾಗಬೇಕು. ಪಿಎಸ್​ಯು ಮತ್ತು ಕೇಂದ್ರ ಕಚೇರಿಗಳು ಪ್ರಾದೇಶಿಕ ಭಾಷೆಗಳನ್ನು ಗೌರವಿಸುವುದಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:10 am, Fri, 9 September 22