‘ಸರಳವಾಸ್ತು’ ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್: 800 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಪೊಲೀಸ್
‘ಸರಳವಾಸ್ತು’ ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್ ಸಂಬಂಧ ಸುಮಾರು 800 ಪುಟಗಳ ಚಾರ್ಜ್ಶೀಟ್ನ್ನು ಜೆಎಂಎಫ್ಸಿ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ.
ಹುಬ್ಬಳ್ಳಿ: ನಗರದಲ್ಲಿ ‘ಸರಳವಾಸ್ತು’ ಚಂದ್ರಶೇಖರ್ ಗುರೂಜಿ (Chandrashekhar Guruji) ಹತ್ಯೆ (Murder) ಕೇಸ್ ಸಂಬಂಧ ಸುಮಾರು 800 ಪುಟಗಳ ಚಾರ್ಜ್ಶೀಟ್ನ್ನು ಜೆಎಂಎಫ್ಸಿ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಮಾಹಿತಿ ನೀಡಿದರು. ಜು.5ರಂದು ಉಣಕಲ್ ಕ್ರಾಸ್ ಬಳಿಕ ಖಾಸಗಿ ಹೋಟೆಲ್ನಲ್ಲಿ ‘ಸರಳವಾಸ್ತು’ ಚಂದ್ರಶೇಖರ್ ಗುರೂಜಿ ಹತ್ಯೆಗೀಡಾಗಿದ್ದರು. ಬೆಳಗಾವಿ ಜಿಲ್ಲೆ ರಾಮದುರ್ಗ ಬಳಿ ಹಂತಕರಾದ ಮಹಾಂತೇಶ್ ಶಿರೂರು, ಮಂಜುನಾಥ್ ಮರೇವಾಡ ಕೃತ್ಯವೆಸಗಿದ್ದು, ಪೊಲೀಸರು ಅವರು ಬಂಧಿಸಿದ್ದರು. ಗುರೂಜಿ ಕೊಲೆಯಾದ ಮೂರು ತಿಂಗಳ ಬಳಿಕ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಘಟನೆ ಹಿನ್ನೆಲೆ:
ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್ನಲ್ಲಿ ಜುಲೈ 5ರಂದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿಚಾರಣೆ ನಡೆಸಲಾಗಿತ್ತು. ಹಂತಕರು ಹತ್ಯೆಗೆ ಕಾರಣ ತಿಳಿಸಿದ್ದಾರೆ. ಹಲವು ವರ್ಷಗಳಿಂದ ಗುರೂಜಿ ಜೊತೆ ಕೆಲಸ ಮಾಡುತ್ತಿದ್ದ ಮಹಾಂತೇಶ್ ಮತ್ತು ಮಂಜುನಾಥ್ ಹಣಕಾಸು, ಆಸ್ತಿ ವಿಚಾರಕ್ಕೆ ಹತ್ಯೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಇನ್ನು ಸಾಕ್ಷಿಗಳು, ಆರೋಪಿಗಳ ಹೇಳಿಕೆಯಿಂದ ಈ ಕಾರಣ ದೃಢವಾಗಿದೆ.
ಆರೋಪಿಗಳು ಗುರೂಜಿ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. 2 ವರ್ಷಗಳಿಂದ ಆರೋಪಿಗಳು ಹಾಗೂ ಗುರೂಜಿ ನಡುವೆ ವೈಮನಸ್ಸು ಶುರುವಾಗಿದೆ. ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸಾಕಷ್ಟು ಆತ್ಮೀಯವಾಗಿದ್ದರು. ಗುರೂಜಿಯ ಬಲ ಹಾಗೂ ಬಲಹೀನತೆಯ ಬಗ್ಗೆಯೂ ತಿಳಿದುಕೊಂಡಿದ್ದರು. ಅಲ್ಲದೆ ಗುರೂಜಿ ಮೂಲಗಳನ್ನೆ ಬಳಿಸಿ ಸಪರೇಟ್ ಆಗಿ ವಾಸ್ತು ವ್ಯವಹಾರ ನಡೆಸುತ್ತಿದ್ದರು. ಈ ವಿಚಾರ ಗುರೂಜಿಗೆ ತಿಳಿದು ವಾದ-ವಿವಾದಗಳು ನಡೆದಿತ್ತು. ಆಸ್ತಿ ನೀಡಿಲ್ಲಾ ಅಂದರೆ ಗುರೂಜಿ ನಮಗೆ ಏನಾದರು ಮಾಡಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದ ಹಂತಕರು ಆಸ್ತಿ ಪಡೆಯುವ ಮೊದಲು ಕೊಲೆ ಮಾಡಬೇಕೆಂದು ನಿರ್ಧರಿಸಿದ್ದರು.
ಸಂಧಾನಕ್ಕೆಂದು ಕರೆದು ಸಾವಿನ ದಾರಿ ತೋರಿಸಿದ ಹಂತಕರು: ಹಂತಕರು ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಹೋಟೆಲ್ಗೆ ಬಂದಿದ್ದರು. ಚಾಕು ತಂದಿದ್ದು ಗೊತ್ತಾಗಬಾರದು ಅಂತ ದಾಖಲೆ ಪತ್ರಗಳ ಮಧ್ಯೆ ಚಾಕು ಇಟ್ಟುಕೊಂಡು ಬಂದಿದ್ದರು. ಗುರೂಜಿ ಹತ್ಯೆ ನಂತರ ದಾಖಲೆ ಬಿಟ್ಟು ಪರಾರಿಯಾಗಿದ್ದರು. ಕೊಲೆ ಬಳಿಕ ಒಂದು ಚಾಕು ಹೋಟೆಲ್ ಮುಂಭಾಗದ ಕಸದ ರಾಶಿಯಲ್ಲಿ ಎಸೆದಿದ್ದರು. ಇನ್ನೊಂದು ಮಾರ್ಗ ಮಧ್ಯೆ ಎಸೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.