ನೀವು ಭಾವಚಿತ್ರ ಸುಟ್ಟಿಲ್ಲ, ಭಾರತ ಮಾತೆ‌ಯನ್ನ ಸುಟ್ಟಿದ್ದೀರಿ: ಕಾಂಗ್ರೆಸ್​​ನವರ ವಿರುದ್ಧ ಪ್ರಮೋದ ಮುತಾಲಿಕ್ ಕಿಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 20, 2022 | 11:14 AM

ಸಿದ್ದರಾಮಯ್ಯನವರು ಎಲ್ಲ ಕಡೆ ಅಡ್ಡ ನಮಸ್ಕಾರ ಮಾಡುತ್ತಾರೆ. ಇದೆಲ್ಲಾ ಮತಗಳ ದಾಹಕ್ಕಾಗಿ ನಡೆಯುತ್ತಿರುವ ನಾಟಕ. ನಿಮ್ಮ ನಾಟಕ ಬೇಡ, 60 ವರ್ಷದಲ್ಲಿ ನಿಮ್ಮ ಬಣ್ಣ ಬಯಲಾಗಿದೆ.

ನೀವು ಭಾವಚಿತ್ರ ಸುಟ್ಟಿಲ್ಲ, ಭಾರತ ಮಾತೆ‌ಯನ್ನ ಸುಟ್ಟಿದ್ದೀರಿ: ಕಾಂಗ್ರೆಸ್​​ನವರ ವಿರುದ್ಧ ಪ್ರಮೋದ ಮುತಾಲಿಕ್ ಕಿಡಿ
ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್
Follow us on

ಧಾರವಾಡ: ನಿನ್ನೆ ಧಾರವಾಡ ನಗರದಲ್ಲಿ ಕಾಂಗ್ರೆಸ್​ನವರು ಸಾವರ್ಕರ್ (veer savarkar) ಚಿತ್ರ ಸುಟ್ಟು ಹಾಕಿದ್ದು ಹೇಯ ಕೃತ್ಯ. ಇದೊಂದು ದೇಶದ್ರೋಹಿ‌ ಕೃತ್ಯ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿಕೆ ನೀಡಿದರು. ನೀವು ಭಾವಚಿತ್ರ ಸುಟ್ಟಿಲ್ಲ, ಭಾರತ ಮಾತೆ‌ ಸುಟ್ಟಿದ್ದೀರಿ. ಅವರು ತಮ್ಮ ಅರ್ಧ ಜೀವನ ಜೈಲಿನಲ್ಲಿ ಕಳೆದಂಥ ವ್ಯಕ್ತಿ. ನೀವು ಕ್ರಾಂತಿಕಾರಿಯ ಭಾವಚಿತ್ರ ಸುಟ್ಟಿದ್ದೀರಿ. ನಿಮಗೆ ದೇಶಭಕ್ತಿ ಇಲ್ಲ. ನಿಮಗೆ ಸಿದ್ದರಾಮಯ್ಯ ಬೇಕು. ನಿಮ್ಮ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಮೊಟ್ಟೆ ಒಗೆದಿದ್ದು ತಪ್ಪು. ಇದನ್ನು ಎಲ್ಲರೂ ಹೇಳುತ್ತಿದ್ದಾರೆ. ಇಂಥ ವ್ಯಕ್ತಿಯನ್ನ ಅಪಮಾನ ಮಾಡಿದ್ದು‌ ಸರಿಯಲ್ಲ. ಎಲ್ಲರೂ ಕ್ಷಮೆ ಕೇಳಬೇಕು. ನಿಮ್ಮ ಇಂದಿರಾಗಾಂಧಿ ಸಾರ್ವಕರ್ ಅತ್ಯಂತ ದೇಶದ ಭಕ್ತ ಎಂದು ಲೆಟರ್ ಕೊಟ್ಟಿದ್ದಾರೆ. ಅವರ ಭಾವಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ ಎಂದು ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದರು.

ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಕೇಸ್: ಶಾಸಕರ ಭವನದಲ್ಲಿ ಮೊಟ್ಟೆ ಬ್ಯಾನ್​, ಶಾಸಕರ ಕೊಠಡಿಗೆ ಬಿಗಿ ಭದ್ರತೆ

ಸಿದ್ದರಾಮಯ್ಯ ನಾಸ್ತಿಕ ಎಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ

ಮಾಜಿ ಸಿಎಂ ಸಿದ್ದರಾಮಯ್ಯ ರಂಭಾಪುರಿ ಪೀಠಕ್ಕೆ ಭೇಟಿ ವಿಚಾರವಾಗಿ ಮಾತನಾಡಿದ್ದು, ಸಿದ್ದರಾಮಯ್ಯನವರು ಎಲ್ಲ ಕಡೆ ಅಡ್ಡ ನಮಸ್ಕಾರ ಮಾಡುತ್ತಾರೆ. ಇದೆಲ್ಲಾ ಮತಗಳ ದಾಹಕ್ಕಾಗಿ ನಡೆಯುತ್ತಿರುವ ನಾಟಕ. ನಿಮ್ಮ ನಾಟಕ ಬೇಡ, 60 ವರ್ಷದಲ್ಲಿ ನಿಮ್ಮ ಬಣ್ಣ ಬಯಲಾಗಿದೆ. ಹಣೆಗೆ ಕುಂಕುಮ ಹಚ್ಚಿದರೆ ಸಿದ್ದರಾಮಯ್ಯ ಉರಿದು ಬೀಳ್ತಾರೆ. ನಿಮ್ಮ ಬೂಟಾಟಿಕೆ ಮಾತು ಎಲ್ಲ ಸ್ವಾಮೀಜಿಗಳಿಗೂ ಗೊತ್ತು. ಸಿದ್ದರಾಮಯ್ಯ ನಾಸ್ತಿಕ ಎಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ ಮಾಡಿದರು.

ಕಾಂಗ್ರೆಸ್​​ನ 12 ಮುಖಂಡರ ವಿರುದ್ಧ ಎಫ್‌ಐಆರ್ ದಾಖಲು

ನಗರದಲ್ಲಿ ವಿ.ಡಿ.ಸಾವರ್ಕರ್ ಫೋಟೋ ಸುಟ್ಟ ಪ್ರಕರಣ ಸಂಬಂಧ ಕಾಂಗ್ರೆಸ್​​ನ 12 ಮುಖಂಡರ ವಿರುದ್ಧ ಧಾರವಾಡ ಉಪನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಬಜರಂಗದಳ ಮುಖಂಡ ಶಿವಾನಂದ ದೂರು ಆಧರಿಸಿ ಎಫ್​​ಐಆರ್​​ ದಾಖಲು ಮಾಡಿದ್ದು, ನಿನ್ನೆ ಮಧ್ಯಾಹ್ನ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಪ್ರತಿಕೃತಿ ದಹನ ಮಾಡಲಾಗಿತ್ತು. ಈ ವೇಳೆ ಕಾರ್ಯಕರ್ತರು ಸಾವರ್ಕರ್ ಫೋಟೋ ಸುಟ್ಟಿದ್ದರು. ಎಫ್‌ಐಆರ್‌‌ನಲ್ಲಿ ಅರವಿಂದ ಏಗನಗೌಡರ್ ಆರೋಪಿ ನಂ.1, ಧಾರವಾಡ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲ್​​ಕುಮಾರ್, ಮಹಾನಗರ ‘ಕೈ’ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, FIRನಲ್ಲಿ ಬಹುತೇಕರು ವಿನಯ್ ಕುಲಕರ್ಣಿ ಆಪ್ತರ ಹೆಸರಿವೆ ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 11:13 am, Sat, 20 August 22