ಧಾರವಾಡ: ಭೂಗತ ಪಾತಕಿಗೆ ಲಾಡ್ಜ್‌ನಲ್ಲಿ ಪ್ರೇಯಸಿ ಜೊತೆ ಸರಸ ಸಲ್ಲಾಪವಾಡಲು ಅವಕಾಶ ಕಲ್ಪಿಸಿಕೊಟ್ಟ ಬಳ್ಳಾರಿ ಪೊಲೀಸರು; ಹುಬ್ಬಳ್ಳಿ-ಧಾರವಾಡ ಕಮಿಷನರ್​ ದಾಳಿ

ಭೂಗತ ಪಾತಕಿಗೆ ಪ್ರೇಯಸಿ ಜೊತೆ ಸರಸ ಸಲ್ಲಾಪಕ್ಕೆಂದು ಲಾಡ್ಜ್‌ನಲ್ಲಿ ಅವಕಾಶ ಕಲ್ಪಿಸಿದ್ದ ಬಳ್ಳಾರಿ ಪೊಲೀಸರು ಮತ್ತು ಭೂಗತಪಾತಕಿಯನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಮ್‌ ರೆಡ್‌ಹ್ಯಾಂಡ್‌ ಆಗಿ ಹಿಡದಿದ್ದಾರೆ.

ಧಾರವಾಡ: ಭೂಗತ ಪಾತಕಿಗೆ ಲಾಡ್ಜ್‌ನಲ್ಲಿ ಪ್ರೇಯಸಿ ಜೊತೆ ಸರಸ ಸಲ್ಲಾಪವಾಡಲು ಅವಕಾಶ ಕಲ್ಪಿಸಿಕೊಟ್ಟ ಬಳ್ಳಾರಿ ಪೊಲೀಸರು; ಹುಬ್ಬಳ್ಳಿ-ಧಾರವಾಡ ಕಮಿಷನರ್​ ದಾಳಿ
ಭೂಗತಪಾತಕಿಯನ್ನು ವಶಕ್ಕೆ ಪಡೆದ ಧಾರವಾಡ ಪೊಲೀಸರು
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 20, 2022 | 9:40 PM

ಧಾರವಾಡ: ಭೂಗತ ಪಾತಕಿಗೆ ಲಾಡ್ಜ್‌ನಲ್ಲಿ (Lodge) ಪ್ರೇಯಸಿ ಜೊತೆ ಸರಸ ಸಲ್ಲಾಪವಾಡಲು ಅವಕಾಶ ಕಲ್ಪಿಸಿಕೊಟ್ಟ ಬಳ್ಳಾರಿ (Bellary) ಪೊಲೀಸರು  (Police) ಮತ್ತು ಭೂಗತಪಾತಕಿಯನ್ನು ಹುಬ್ಬಳ್ಳಿ-ಧಾರವಾಡ (Hubli-Dharwad) ನಗರ ಪೊಲೀಸ್ ಆಯುಕ್ತ ಲಾಬೂರಾಮ್‌ ರೆಡ್‌ಹ್ಯಾಂಡ್‌ ಆಗಿ ಹಿಡದಿದ್ದಾರೆ. ಬಳ್ಳಾರಿ ಪೊಲೀಸರು ಭೂಗತಪಾತಕಿ ಬಚ್ಚಾಖಾನ್​ನ್ನು ಧಾರವಾಡದ ಕೋರ್ಟ್‌ಗೆ ಹಾಜರು ಪಡಿಸಲು ಕರೆತಂದಿದ್ದರು.

ಮಾರ್ಗಮಧ್ಯೆ ಆರೋಪಿಗೆ, ತಮ್ಮ ವಶದಲ್ಲಿ ಇದ್ದಾಗಲೇ ಬಳ್ಳಾರಿ ಪೊಲೀಸರು ಧಾರವಾಡದ ರಾಯಾಪುರ ಬಳಿಯ ಪ್ರಕೃತಿ ಲಾಡ್ಜ್‌ನಲ್ಲಿ ಸರಸ ಸಲ್ಲಾಪಕ್ಕೆ ಅವಕಾಶ ಮಾಡಿಕೊಟ್ಟರು. ಬಚ್ಚಾಖಾನ್ ಪ್ರೇಯಸಿ ಲಾಡ್ಜ್‌ಗೆ ಮೊದಲೇ ಬಂದು ಕಾಯುತ್ತಿದ್ದಳು.

ಮಾಹಿತಿ ತಿಳಿದ ಕಮೀಷನರ್​ ಲಾಬೂರಾಮ್‌ ಖುದ್ದು ಲಾಡ್ಜ್‌ ಮೇಲೆ ದಾಳಿ ಮಾಡಿದ್ದಾರೆ. ಆಗ ಪ್ರೇಯಸಿ ಜೊತೆ ಸರಸ ಸಲ್ಲಾಪ ನಡೆಸುತ್ತಿದ್ದ ಬಚ್ಚಾಖಾನ್​ ಅನ್ನು ವಶಕ್ಕೆ ಪಡೆದು ಪೊಲೀಸರು ವಿದ್ಯಾಗಿರಿ ಠಾಣೆಗೆ ಕರೆ ತಂದಿದ್ದಾರೆ.

ಆ್ಯಪ್‌ ಮೂಲಕ ಅಮಾಯಕರಿಗೆ ವಂಚಿಸಿ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ

ದಾವಣಗೆರೆ: ಆ್ಯಪ್‌ವೊಂದರ  ಮೂಲಕ ಪರಿಚಯ ಮಾಡಿಕೊಂಡು ಅಮಾಯಕರಿಗೆ ವಂಚಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು  ದಾವಣಗೆರೆ  ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು 2 ಮೊಬೈಲ್‌, ಆಟೋ ಜಪ್ತಿ ಮಾಡಿಕೊಂಡಿದ್ದಾರೆ. ಗ್ಯಾಂಗ್​ ಗ್ರೇಂಡರ್​ಗೇ ಆಪ್ ಮೂಲಕ ಅಮಾಯಕರನ್ನು ವಂಚಿಸಿ ದರೋಡೆ ಮಾಡುತ್ತಿತ್ತು. ಗ್ಯಾಂಗ್ ಅಮಾಯಕರನ್ನು ನಿರ್ಜನ‌ ಪ್ರದೇಶಕ್ಕೆ ಕರೆಸಿ ಅವರಿಂದ ಹಣ ಒಡವೆ ಕಸಿದುಕೊಳ್ಳುತ್ತಿತ್ತು.

ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಗ್ಯಾಂಗ್​ನ ಇಬ್ಬರು ಸದಸ್ಯರನ್ನು ಬಂಧಿಸಿದ್ದು, ಇಂತಹ ಸದಸ್ಯರಿಗೆ ಆಶ್ರಯ ನೀಡಿ ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದ ಆರೋಪದ ಮೇಲೆ ಕೆಆರ್​ಎಸ್ ಪಕ್ಷದ ಜಿಲ್ಲಾದ್ಯಕ್ಷ ಮಾಲತೇಶ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರು ಮಾಲತೇಶ್​ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಪೊಲೀಸರ ವಿರುದ್ದ ಕೆಆರ್​ಎಸ್ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ತಂದೆಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗ ಆತ್ಮಹತ್ಯೆ

ಬೆಂಗಳೂರು: ತಂದೆಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ. ಚಂದು (19) ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡಿರುವ ಯುವಕ. ಚಂದು ತಂದೆಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಪ್ರತಿದಿನ ಅಪ್ಪ- ಮಗನ ಮಧ್ಯೆ ಗಲಾಟೆ ನಡೆಯುತಿತ್ತು. ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ನಂತರ, ಮಗ ಚಂದು ರೂಮ್ ಬಾಗಿಲು ಹಾಕಿಕೊಂಡಿದ್ದ. ಆದರೆ ಬೆಳಗ್ಗೆ ರೂಮ್ ಬಾಗಿಲು ತೆಗೆದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ: ವಿಡಿಯೋ ಮಾಡಿ ತಡರಾತ್ರಿ ಯುವಕ ನೇಣಿಗೆ ಶರಣು

ರಾಮನಗರ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೊಬ್ಬ ಶುಕ್ರವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮೊದಲು ಸಾವಿನ ಬಗ್ಗೆ ವಿಡಿಯೋ ಮಾಡಿಟ್ಟಿದ್ದಾನೆ. ಮಾಗಡಿ ತಾಲೂಕಿನ ಸೋಲೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಹಾಸನ‌ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕುಂಬೇನಹಳ್ಳಿ ಗ್ರಾಮದ ಗೋಪಾಲ (22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವ. ಕುದೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ‌ ದಾಖಲಾಗಿದೆ.

ಕುಂಬೇನಹಳ್ಳಿಯ ಗೋಪಾಲ ಸಾಯುವ ಮೊದಲು ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ ಆತನ ಮಾತುಗಳು ಹೀಗಿವೆ: ಇವತ್ತು ತುಂಬಾ ಖುಷಿಯಾಗಿರೋ ದಿನ. ಮನಸ್ಸಿನಲ್ಲಿ ಯಾವುದೇ ಕಲಹ, ಬೇಜಾರು ಇಲ್ಲ. ನಾಳೆ ಏನು ಎಂದು ಯೋಚನೆ ಮಾಡದೇ ಇರುವ ದಿನ. ಬೇರೆಯವರಿಗೆ ನನ್ನಿಂದ ತೊಂದರೆ ಆಗಬಾರದು. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಯಾರೂ ಕಾರಣರಲ್ಲ. ನಾನು ಹಾಗೂ ನನ್ನ ಜೀವನವೇ ಇದಕ್ಕೆ ಕಾರಣ. ಕ್ಷಮೆ ಕೇಳುವ ಯೋಗ್ಯತೆ ಇಲ್ಲ. ನನ್ನಿಂದ ನಷ್ಟನೇ ಜಾಸ್ತಿ ಆಗಿದೆ. ಯಾರಿಗೂ ಕೆಟ್ಟದ್ದು ಮಾಡಿಲ್ಲ. ಯಾರನ್ನೂ ದೂಷಿಸಬೇಡಿ. ಪತ್ರ ಕೂಡ ಬರೆದಿದ್ದೇನೆ. ಯಾರಿಗೂ ಸಿಗುವುದಿಲ್ಲ. ಅದಕ್ಕಾಗಿ ವಿಡಿಯೋ ಮಾಡುತ್ತಿದ್ದೇನೆ ಎಂದು ಯುವಕ ವಿಡಿಯೋದಲ್ಲಿ ಮಾತನಾಡಿದ್ದಾನೆ

Published On - 9:08 pm, Sat, 20 August 22

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ