ಕರ್ನಾಟಕ ಏಕೀಕರಣಗೊಂಡು 50 ವರ್ಷ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಸಂಭ್ರಮ-50 ವಿಶೇಷ ಕಾರ್ಯಯೋಜನೆಗಳು

Kannada and Culture Minister Shivaraj Tangadagi: ಕರ್ನಾಟಕ (Karnataka) ನಾಮಕರಣದ ಸುವರ್ಣ ಮಹೋತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕಾರ್ಯಕ್ರಮದ ರೂಪರೇಷೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ವಿಶೇಷ ಸಭೆ ನಡೆದಿದೆ.

ಕರ್ನಾಟಕ ಏಕೀಕರಣಗೊಂಡು 50 ವರ್ಷ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಸಂಭ್ರಮ-50 ವಿಶೇಷ ಕಾರ್ಯಯೋಜನೆಗಳು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಸಂಭ್ರಮ-50
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​

Updated on:Aug 22, 2023 | 4:56 PM

ಧಾರವಾಡ, ಆಸಗ್ಟ್​ 22: ಕರ್ನಾಟಕ (Karnataka) ನಾಮಕರಣದ ಸುವರ್ಣ ಮಹೋತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕಾರ್ಯಕ್ರಮದ ರೂಪರೇಷೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ (Kannada and Culture Minister Shivaraj Tangadagi) ನೇತೃತ್ವದಲ್ಲಿ ವಿಶೇಷ ಸಭೆ ನಡೆದಿದೆ. ಧಾರವಾಡ ನಗರದ ವಿದ್ಯಾವರ್ಧಕ ಸಂಘದಲ್ಲಿ ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಸಭೆ ನಡೆದಿದ್ದು, ಬೆಳಗಾವಿ ವಿಭಾಗದ 7 ಜಿಲ್ಲೆಗಳ ಸಾಹಿತಿ ಹಾಗೂ ಕಲಾವಿದರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯೋತ್ಸವ ದಿನವಾದ ನವೆಂಬರ್ 1ರಿಂದ (Kannada Rajyotsava 2023) ನಿತ್ಯವೂ ಕಾರ್ಯಕ್ರಮಗಳನ್ನು ‌ಆಯೋಜನೆ ಮಾಡುವ ಬಗ್ಗೆ ಚರ್ಚೆ ನಡೆದಿದೆ.

ಮೈಸೂರು ರಾಜ್ಯಕ್ಕೆ ಕರ್ನಾಟಕ ಅಂತಾ ನಾಮಕರಣ ಮಾಡಿ ಈ ನವೆಂಬರ್ ಗೆ 50 ವರ್ಷಗಳಾಗುತ್ತವೆ. ಹಲವಾರು ಶತಮಾನಗಳಿಂದ ಇಂದಿನವರೆಗೂ ಕನ್ನಡ ಭಾಷೆ ಉಳಿಸಲು ಅನೇಕರು ಶ್ರಮಿಸಿದ್ದಾರೆ. ಇದೇ ವೇಳೆ ಕರ್ನಾಟಕ ಅಂತಾ ನಾಮಕರಣ ಮಾಡಿ 50 ವರ್ಷಗಳು ಆಗಿರೋ ಹಿನ್ನೆಲೆಯಲ್ಲಿ ಒಂದಿಡೀ ವರ್ಷ ಈ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ವೇಳೆಯಲ್ಲಿ ಕಾರ್ಯಕ್ರಮಗಳು ಹೇಗಿರಬೇಕು ಅನ್ನೋದನ್ನು ನಿರ್ಧರಿಸಲು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಹೊಸ ಉಪಾಯ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿಯೂ ಎಲ್ಲ ಬಗೆಯ ಜನರ ಸಲಹೆಗಳನ್ನು ಪಡೆಯಲು ನಿರ್ಧರಿಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ಜಿಲ್ಲೆಗಳ ಜನರ ಸಲಹೆ ಪಡೆಯಲು ಧಾರವಾಡದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ಬಾರಿಯ ನವೆಂಬರ್ 1 ರಿಂದ ಮುಂದಿನ ವರ್ಷದ ನವೆಂಬರ್ 1 ರವರೆಗೆ ಒಂದಿಡೀ ವರ್ಷ ಈ ಸಂಭ್ರಮವನ್ನು ಕರ್ನಾಟಕ ಸಂಭ್ರಮ-50 ಅನ್ನೋ ಹೆಸರಿನಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅನ್ನೋ ಧ್ಯೇಯ ವಾಕ್ಯದ ಮೂಲಕ ಈ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಏಳು ಜಿಲ್ಲೆಗಳ ಸುಮಾರು 500 ಜನರೊಂದಿಗೆ ಸಭೆ ನಡೆಸಲಾಯಿತು. ಬೆಳಗಾವಿ, ಧಾರವಾಡ, ಗದಗ್, ಹಾವೇರಿ, ವಿಜಯಪುರ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಬಂದಿದ್ದ ಪ್ರತಿನಿಧಿಗಳು ತಮ್ಮ ಸಲಹೆಗಳನ್ನು ನೀಡಿದರು. ಸಾಹಿತಿಗಳು, ಕಲಾವಿದರು, ಜನಪದ ಕಲಾವಿದರು, ಸಂಗೀತ ಕಲಾವಿದರು, ಚಿತ್ರ ಕಲಾವಿದರು, ಸಿನಿಮಾ ನಟರು, ಮಠಾಧೀಶರು, ಕನ್ನಡ ಪರ ಸಂಘಟನೆ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಏಳು ಜಿಲ್ಲೆಗಳಿಂದ ಬಂದಿದ್ದ ಎಲ್ಲ ವಿಭಾಗಗಳ ಪ್ರತಿನಿಧಿಗಳು ತಮ್ಮ ಸಲಹೆಗಳನ್ನು ನೀಡಿದರು. ಎಲ್ಲರಿಗೂ ತಮ್ಮ ಸಲಹೆ ನೀಡಲು ಅವಕಾಶ ಸಿಗೋದಿಲ್ಲ ಅನ್ನೋ ಕಾರಣಕ್ಕೆ ಎಲ್ಲರಿಗೂ ಲಕೋಟೆಯೊಂದನ್ನು ನೀಡಲಾಗಿತ್ತು. ಎಲ್ಲರೂ ತಮ್ಮ ಸಲಹೆಗಳನ್ನು ಬರೆದು, ಅದರಲ್ಲಿ ತಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಬರೆದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ನೀಡಲು ಸೂಚಿಸಲಾಗಿತ್ತು. ಇದೇ ರೀತಿ ಎಲ್ಲರೂ ತಮ್ಮ ತಮ್ಮ ಸಲಹೆಗಳನ್ನು ನೀಡಿದರು.

ಅನೇಕರು ಧಾರವಾಡದ ವಿದ್ಯಾವರ್ಧಕ ಸಂಘ ಎಷ್ಟೋ ವರ್ಷಗಳಿಂದ ನಾಡು-ನುಡಿಗಾಗಿ ಕೆಲಸ ಮಾಡುತ್ತಲೇ ಇದೆ. ಇದೇ ಕಾರಣಕ್ಕೆ ಈ ಕಾರ್ಯಕ್ರಮವನ್ನು ವಿದ್ಯಾವರ್ಧಕ ಸಂಘದಿಂದ ಶುರು ಮಾಡಬೇಕು ಅಂದರೆ, ಮತ್ತೆ ಕೆಲವರು ಸರಳಗನ್ನಡದ ಮೂಲಕ ವಚನ ಹೇಳಿದ ಬಸವಣ್ಣನ ನೆಲ ಕೂಡಲಸಂಗಮದಿಂದ ಈ ಕಾರ್ಯಕ್ರಮ ಆರಂಭವಾಗಲಿ. ಕೊನೆಗೆ ಇದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮುಕ್ತಾಯವಾಗಲಿ ಅಂತಾ ಸಲಹೆ ನೀಡಿದರು. ಮತ್ತೆ ಕೆಲವರು ಈ ಕಾರ್ಯಕ್ರಮಕ್ಕಾಗಿಯೇ ವಿಭಿನ್ನ ಲೋಗೋವೊಂದನ್ನು ಅನಾವರಣಗೊಳಿಸಿ, ಆ ಲೋಗೋದಡಿಯಲ್ಲಿಯೇ ಕಾರ್ಯಕ್ರಮವನ್ನು ನಡೆಸಲಿ ಅಂತಾ ಸಲಹೆ ನೀಡಿದರು.

ಡೆಪ್ಯೂಟಿ ಚೆನ್ನಬಸಪ್ಪ ಅವರು 1856 ರಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಅನ್ನೋ ಪದವನ್ನು ಹೇಳಿದ್ದರು. ಡೆಪ್ಯೂಟಿ ಚೆನ್ನಬಸಪ್ಪ, ವೆಂಕಟರಾವ್ ಆಲೂರು ಸೇರಿದಂತೆ ಅನೇಕರು ಕರ್ನಾಟಕದ ಅಸ್ಮಿತೆ, ಸ್ವಾಭಿಮಾನ ಚಳುವಳಿಗೆ ಸಾಕಷ್ಟು ಶ್ರಮವಹಿಸಿದ್ದಾರೆ. ಅಂಥವರ ಬಗ್ಗೆ ಎಲ್ಲ ಜಿಲ್ಲೆಗಳಲ್ಲಿ ಅರಿವು ಮೂಡಿಸಬೇಕು. ಇಂಥ ಮಹಾನ್ ವ್ಯಕ್ತಿಗಳ ಬಗ್ಗೆ ಸಣ್ಣ ಸಣ್ಣ ಪುಸ್ತಕಗಳನ್ನು ಮುದ್ರಿಸಿ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಬೇಕು ಅನ್ನೋ ಸಲಹೆ ಜೊತೆಗೆ ಅವರೆಲ್ಲರ ಬಗ್ಗೆ ಎಲ್ಲ ಕಡೆ ಉಪನ್ಯಾಸ ಏರ್ಪಡಿಸಬೇಕು ಅನ್ನೋ ಮಾತು ಕೂಡ ಕೇಳಿ ಬಂತು.

ಇನ್ನು ಚಿತ್ರಕಲಾವಿದರು, ಇಂಥ ಸುಸಂದರ್ಭದಲ್ಲಿ ಆಯಾ ಜಿಲ್ಲೆಗಳು ಚಿತ್ರ ಕಲಾವಿದರಿಗೆ ಪ್ರತಿಯೊಂದು ಹಳ್ಳಿಯಲ್ಲಿ ಕರ್ನಾಟಕದ ಬಗೆಗಿನ ಚಿತ್ರಗಳನ್ನು ಬಿಡಿಸಲು ಅವಕಾಶ ಕಲ್ಪಿಸಬೇಕು ಅಂತಾ ಸಲಹೆ ನೀಡಿದರು. ಇದೇ ವೇಳೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು, ಕಳೆದ ಬಾರಿ ದೇಶದಲ್ಲಿ ನಡೆದ ಹರ್ ಘರ್ ತಿರಂಗಾ ಮಾದರಿಯ ಅಭಿಯಾನವನ್ನು ಆರಂಭಿಸಬೇಕು. ಎಲ್ಲರ ಮನೆಗಳ ಮೇಲೆ ಮೂರು ದಿನಗಳ ಕನ್ನಡ ಬಾವುಟ ಹಾರಿಸುವಂತೆ ಸರಕಾರ ಕರೆ ಕೊಡಬೇಕು ಅಂತಾ ಸಲಹೆ ನೀಡಿದರು. ಸಂಗೀತ ಕಲಾವಿದರು, ನವೆಂಬರ್ 1 ರಂದು ರಾಜ್ಯದ ಪ್ರತಿಯೊಂದು ಗ್ರಾಮ, ನಗರಗಳಿಂದ ಒಂದೇ ಕಾಲಕ್ಕೆ ಎಲ್ಲರೂ ಸೇರಿ ಕನ್ನಡ ಗೀತೆಗಳನ್ನು ಹಾಡೋ ಮೂಲಕ ಈ ಕಾರ್ಯಕ್ರಮಕ್ಕೆ ಹೊಸ ಬಗೆಯ ರೂಪವನ್ನು ನೀಡಬೇಕು ಅಂತಾ ಅಭಿಪ್ರಾಯಪಟ್ಟರು.

ಇದೇ ವೇಳೆ ಚಿತ್ರನಟ, ರಂಗಕಲಾವಿದ ಯಶವಂತ ಸರದೇಶಪಾಂಡೆ ಅವರು ಸಲಹೆ ಸಾಕಷ್ಟು ಗಮನ ಸೆಳೆಯಿತು. ನಾವು ಇದೀಗ ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಜನರನ್ನು ಮುಟ್ಟೋದು ಹೇಗೆ? ಅನ್ನೋದರ ಬಗ್ಗೆ ಗಮನ ಹರಿಸಬೇಕು. ಹೀಗಾಗಿ ನಾವು ಹೆಚ್ಚು ಜನರನ್ನು ಮುಟ್ಟಬೇಕೆಂದರೆ ರೀಲ್ಸ್, ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಲೇಬೇಕು. ಇದೀಗ ನಾವು ಡಿಜಿಟೀಲಕರಣ ಮೂಲಕ ಜನರನ್ನು ತಲುಪಬೇಕು. ಇನ್ನು ಇತ್ತೀಚಿಗೆ ಸೆಟ್ಲೈಟ್ ಚಾನೆಲ್ ಗಳು ಜನರನ್ನು ಬೇಗನೇ ಮುಟ್ಟುತ್ತಿವೆ. ಹೀಗಾಗಿ ವಾರಕ್ಕೆ ಎರಡು ದಿನಗಳಾದರೂ ರಿಯಾಲಿಟಿ ಶೋದಂಥ ಕಾರ್ಯಕ್ರಮಗಳನ್ನು ಮಾಡಿ, ಅವುಗಳ ಮೂಲಕ ಜನರನ್ನು ಮುಟ್ಟಬೇಕು. ಆ ಮೂಲಕ ಈ ವರ್ಷವನ್ನು ವಿಭಿನ್ನವಾಗಿ ಆಚರಿಸಬೇಕು ಅನ್ನೋ ಸಲಹೆ ನೀಡಿದರು. ಅವರ ಸಲಹೆಯಂತೆಯೇ ರಂಗ ನಿರ್ದೇಶಕ ಪ್ರಕಾಶ ಗರುಡಾ, ಈ ಸಂದರ್ಭದಲ್ಲಿ ಆ್ಯಪ್ ಸಿದ್ದಪಡಿಸಿ, ಅದರ ಮೂಲಕ ಜನರನ್ನು ಮುಟ್ಟಬೇಕು. ಇತ್ತೀಚಿನ ದಿನಗಳಲ್ಲಿ ಆ್ಯಪ್ಗಳು ಸಾಕಷ್ಟು ಜನರನ್ನು ಕಡಿಮೆ ಅವಧಿಯಲ್ಲಿ ಮುಟ್ಟುತ್ತಿವೆ. ಹೀಗಾಗಿ ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಲಿ ಅನ್ನೋ ಸಲಹೆ ನೀಡಿದರು. ಈ ಆ್ಯಪ್ಗೆ ಕರ್ನಾಟಕ-50 ಅನ್ನೋ ಹೆಸರನ್ನು ಇಟ್ಟರೆ ಒಳ್ಳೆಯರು ಅನ್ನೋ ಸಲಹೆ ನೀಡಿದರು. ಈ ಸಲಹೆಗೂ ಸಾಕಷ್ಟು ಉತ್ತಮ ಸ್ಪಂದನೆ ದೊರೆಯಿತು.

ಹಿರಿಯ ಸಾಹಿತಿಗಳು, ಜಿಲ್ಲೆಗೊಂದು ಕನ್ನಡ ಭವನ ನಿರ್ಮಿಸಿ, ಅಲ್ಲಿ ನಿತ್ಯವೂ ಕನ್ನಡದ ನಡೆಯಬೇಕು ಅಂದರೆ, ಕನ್ನಡಪರ ಸಂಘಟನೆಯ ನಾಯಕರು, ಎಲ್ಲ ಕಡೆ ಕನ್ನಡದಲ್ಲಿಯೇ ಬೋರ್ಡ್ ಇರುವಂತೆ ನೋಡಿಕೊಳ್ಳಬೇಕು ಅಂದರು. ಇನ್ನು ಜಾನಪದ ಕಲಾತಂಡಗಳ ಸದಸ್ಯರು, ಜಿಲ್ಲೆಗೊಂದು ಕಲಾ ತಂಡ ಮಾಡಿ, ವರ್ಷವಿಡೀ ಅದು ಜಿಲ್ಲೆಯಲ್ಲಿ ತಿರುಗಾಡಿ, ಕನ್ನಡ ಬಗ್ಗೆ ಅರಿವು, ಅಭಿಮಾನ ಮೂಡಿಸಬೇಕು ಅಂತಾ ಸಲಹೆ ನೀಡಿದರು. ಬೆಳಗಾವಿಯಿಂದ ಬಂದಿದ್ದ ಅನೇಕರು, ಗಡಿ ಭಾಗಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಇಲ್ಲದಿದ್ದರೆ ಅಲ್ಲಿನ ಜನರು ಯಾವತ್ತೂ ಕನ್ನಡದ ಬಗ್ಗೆ ಗಮನ ಹರಿಸೋದೇ ಇಲ್ಲ ಅನ್ನೋ ಆತಂಕ ವ್ಯಕ್ತಪಡಿಸಿದರು. ಇನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ, ಎಲ್ಲ ಕಡೆಗಳಲ್ಲಿಯೂ ಗೋಡೆ ಮೇಲೆ ಬರಹಗಳನ್ನು ಬರೆಸಬೇಕು. ಎಲ್ಲರೂ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಸುತ್ತೇವೆ ಅಂತಾ ನಿರ್ಧರಿಸಬೇಕು. ಏಕೆಂದರೆ ಬಹುತೇಕ ಖಾಸಗಿ ಶಾಲಾ-ಕಾಲೇಜುಗಳು ರಾಜಕಾರಣಿಗಳದ್ದೇ ಆಗಿವೆ. ಹೀಗಾಗಿ ಈ ರೀತಿ ಮಾಡೋ ಮೂಲಕ ಅವರು ತಮ್ಮ ಬದ್ಧತೆಯನ್ನು ಅವರು ಮೆರೆಯಬೇಕಿದೆ ಅಂತಾ ಸಲಹೆ ನೀಡಿದರು.

ಇದೇ ವೇಳೆ ಬೆಂಗಳೂರಿನಲ್ಲಿನ ಅನೇಕ ರಸ್ತೆ, ಬಡಾವಣೆಗಳ ಹೆಸರುಗಳ ಬಗ್ಗೆಯೂ ಪ್ರಸ್ತಾಪವಾಯಿತು. ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್ ಗೆ ದೇವರಾಜು ಅರಸು ಹೆಸರನ್ನಾಗಿ ಬದಲಿಸಬೇಕು ಅನ್ನೋದರಿಂದ ಹಿಡಿದು ವಿಲ್ಸನ್ ಗಾರ್ಡನ್, ಕನ್ನಿಂಗ್ ಹ್ಯಾಮ್ ಸೇರಿದಂತೆ ಅನೇಕ ಹೆಸರುಗಳ ಬದಲಾವಣೆ ಆಗಬೇಕಿದೆ ಅಂತಾ ಅನೇಕರು ಸಲಹೆ ನೀಡಿದರು.

ಎಲ್ಲರ ಸಲಹೆ ಪಡೆದ ಬಳಿಕ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಎಲ್ಲರಿಂದ ಅನೇಕ ಅಮೂಲ್ಯ ಸಲಹೆಗಳು ಬಂದಿವೆ. ಅನೇಕರಿಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ. ಅವರೆಲ್ಲ ತಮ್ಮ ಅಮೂಲ್ಯ ಸಲಹೆಗಳನ್ನು ಬರೆದು ನೀಡಿದ್ದಾರೆ. ಎಲ್ಲರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇದೇ ಕೆಲಸಕ್ಕೆ ಅಂತಾ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಎಲ್ಲ ಕಡೆಗಳಿಂದ ಬಂದ ಸಲಹೆಗಳನ್ನು ಕ್ರೋಢೀಕರಿಸಿ, ಅಂತಿಮವಾಗಿ ಕೆಲ ಸಲಹೆಗಳಂತೆ ಕೆಲಸ ಮಾಡಲಾಗುವುದು. ನಿಮ್ಮ ಬಳಿ ಕರ್ನಾಟಕ, ಕನ್ನಡ ಭಾಷೆಗೆ ಸಂಬಂಧಿಸಿದ ಯಾವುದಾದರೂ ದಾಖಲೆ, ಫೋಟೋ, ನಕ್ಷೆಗಳಿದ್ದರೆ ನನ್ನ ಇಲಾಖೆಗೆ ಕಳಿಸಿ. ನಾನು ಅವುಗಳ ಡಿಜಿಟಲೀಕರಣ ಮಾಡಿ, ನಿಮ್ಮ ಹೆಸರಿನಲ್ಲಿಯೇ ಪ್ರಕಟಿಸುತ್ತೇವೆ ಅಂದರು. ಇದು ಅಧಿಕಾರಿಗಳ ಸಂಭ್ರಮ ಆಗಬಾರದು, ಜನರ ಸಂಭ್ರಮ ಆಗಬೇಕು ಅನ್ನೋದು ನನ್ನ ಆಸೆ, ಎಲ್ಲರೂ ಇದರಲ್ಲಿ ಭಾಗಿಯಾಗಬೇಕು ಅಂದರು. ಇನ್ನು ಇದೇ ತಿಂಗಳು 28 ರಂದು ಕಲಬುರ್ಗಿ ವಿಭಾಗದ ಸಭೆ ಕರೆದಿದ್ದೇನೆ. ಸೆ. 4 ಕ್ಕೆ ಮೈಸೂರು ವಿಭಾಗದ ಸಭೆ ನಡೆಸಲಾಗುವುದು. ಎಲ್ಲ‌ರ ಸಲಹೆ ಕ್ರೋಢೀಕರಿಸಿ ಉತ್ತಮವಾದ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಅಂದರು. ಇದೇ ವೇಳೆ ಕೆಲವರು ಕರ್ನಾಟಕ ಪದ್ಮ ಪ್ರಶಸ್ತಿ ಆರಂಭಿಸಿ ಅಂತಾನೂ ಸಲಹೆ ನೀಡಿದ್ದಾರೆ. ಈ ಬಗ್ಗೆ ಎಲ್ಲರೊಡನೆ ಚರ್ಚಿಸಿ ನಿರ್ಧರಿಸಲಾಗುವುದು ಅಂದರು.

ಮೊದಲ ಬಾರಿಗೆ ಇಂಥದ್ದೊಂದು ಸಭೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದು ಮತ್ತು ಅದರಲ್ಲಿ ಸಾಹಿತಿಗಳು, ಕಲಾವಿದರು, ಚಿತ್ರನಟರು, ಮಠಾಧೀಶರು ಸೇರಿದಂತೆ ಎಲ್ಲ ಬಗೆಯ ಜನರು ಈ ಕಾರ್ಯಕ್ರಮದಲ್ಲಿ ಭಾವಹಿಸಿದ್ದು ವಿಶೇಷವಾಗಿತ್ತು. ಕೆಲವು ಯುವಕರು ತಮಗೆ ಸಲಹೆ ನೀಡಲು ಅವಕಾಶ ಸಿಗಲಿಲ್ಲ ಅಂತಾ ಕೂಗಾಡಲು ಶುರು ಮಾಡಿದಾಗ ಸಚಿವ ಶಿವರಾಜ ತಂಗಡಗಿ ಒಮ್ಮೆ ನಗುತ್ತಾ, ಮತ್ತೊಮ್ಮೆ ಸಿಟ್ಟಿನಿಂದ ಬೈದು ಅವರನ್ನು ಸುಮ್ಮನೇ ಕೂಡಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಇದೇ ವೇಳೆ ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಅವರ ತಾಳ್ಮೆ ಬಗ್ಗೆ ಕಾರ್ಯಕ್ರಮಕ್ಕೆ ಬಂದಿದ್ದವರು ಮೆಚ್ಚುಗೆ ಸೂಚಿಸಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ ಇಂಥದ್ದೊಂದು ಕಾರ್ಯಕ್ರಮದ ಮೂಲಕ ಎಲ್ಲರಿಂದ ಸಲಹೆ ಪಡೆದು, ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ ಮಾಡಲು ನಿರ್ಧರಿಸಿರೋದಕ್ಕೆ ಒಳ್ಳೆಯ ಪ್ರಶಂಸೆ ಬರುತ್ತಿರೋದು ಮಾತ್ರ ಸತ್ಯ.

Published On - 11:56 am, Tue, 22 August 23

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು