ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣ; AIMIM ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಹೊನ್ಯಾಳ್ ಬಂಧನ
ಈಗ ಇವರಿಬ್ಬರೂ ಮಾಸ್ಟರ್ ಮೈಂಡ್ ಅಲ್ಲ ಅಂತಾ ಹೇಳುತ್ತಿದ್ದಾರೆ. ಇವರನ್ನು ಹಿಡಿದ ಮೇಲೆ ಇವರಲ್ಲ ಎಂದು ಹೇಳುತ್ತಿದ್ದಾರೆ. ಗಲಭೆ ಪ್ರಕರಣದಲ್ಲಿ ಎಷ್ಟು ಮಾಸ್ಟರ್ ಮೈಂಡ್ ಇದಾವೇನೋ? ಎಷ್ಟೇ ಜನ ಇದ್ದರೂ ವಿಡಿಯೋ ನೋಡಿ ಹಿಡಿಯಬೇಕು.
ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ (AIMIM) ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಹೊನ್ಯಾಳ್ ಬಂಧನ ಮಾಡಲಾಗಿದೆ. ಪೊಲೀಸರ ವಿಚಾರಣೆ ವೇಳೆ ಮಾಸ್ಟರ್ ಮೈಂಡ್ ಮೌಲ್ವಿ ನಜೀರ್ ಹೆಸರು ಪ್ರಸ್ತಾಪಿಸಿದ್ದು, ಹೀಗಾಗಿ ಪಾಲಿಕೆ ಸದಸ್ಯ ನಜೀರ್ ಅಹಮ್ಮದ್ ಹೊನ್ಯಾಳ್ ಬಂಧಿಸಲಾಗಿದೆ. ಗಲಭೆಯಲ್ಲಿ ನಜೀರ್ ಅಹಮ್ಮದ್ ಪಾತ್ರದ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದ್ದು, ಒಂದೊಂದಾಗಿ ಘಟಾನುಘಟಿಗಳ ಹೆಸರು ಹೊರಬರುತ್ತಿವೆ.
ಧಾರವಾಡ ನಗರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಕುರಿತು ಹೇಳಿಕೆ ನೀಡಿದ್ದು, ಮಾಸ್ಟರ್ ಮೈಂಡ್ ಮೌಲ್ವಿ ವಸೀಂ, ಆರೀಫ್ನನ್ನು ಬಂಧಿಸಿದ್ದಾರೆ. ಈಗ ಇವರಿಬ್ಬರೂ ಮಾಸ್ಟರ್ ಮೈಂಡ್ ಅಲ್ಲ ಅಂತಾ ಹೇಳುತ್ತಿದ್ದಾರೆ. ಇವರನ್ನು ಹಿಡಿದ ಮೇಲೆ ಇವರಲ್ಲ ಎಂದು ಹೇಳುತ್ತಿದ್ದಾರೆ. ಗಲಭೆ ಪ್ರಕರಣದಲ್ಲಿ ಎಷ್ಟು ಮಾಸ್ಟರ್ ಮೈಂಡ್ ಇದಾವೇನೋ? ಎಷ್ಟೇ ಜನ ಇದ್ದರೂ ವಿಡಿಯೋ ನೋಡಿ ಹಿಡಿಯಬೇಕು. ಪೊಲೀಸರು, ಕಾನೂನು ತನ್ನ ಪಾಡಿಗೆ ಕೆಲಸ ಮಾಡುತ್ತಿದೆ. ಕುಮ್ಮಕ್ಕು ಕೊಟ್ಟವರನ್ನು ಹಿಡಿಯಲು ಸೂಚನೆ ಕೊಟ್ಟಿದ್ದೆವು. ಆ ಕೆಲಸವನ್ನು ಪೊಲೀಸರು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಬಂಧಿತರಿಗೆ ಬಾಂಗ್ಲಾ ಲಿಂಕ್ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಗಲಭೆಯ ಪ್ರಮುಖ ಕಿಂಗ್ ಪಿನ್ ರುದ್ರಗೌಡಾ ಪಾಟೀಲ್ರನ್ನ ಕಲ್ಬುರ್ಗಿಯ ತಾತ್ಕಾಲಿಕ ಸಿಐಡಿ ಕಚೇರಿಗೆ ರಾತ್ರಿ 10 ಗಂಟೆಗೆ ಕರೆತರುವ ಸಾಧ್ಯತೆಯಿದೆ. ಐವನ್ ಶಾಯಿ ಗೆಸ್ಟ್ ಹೌಸ್ಗೆ ಕರೆತಂದ ನಂತರ ಜಡ್ಜ್ ಮುಂದೆ ಪೊಲೀಸ್ ಹಾಜರು ಪಡಿಸಲ್ಲಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಮುಂಜಾನೆ ಸಿಐಡಿಯಿಂದ ರುದ್ರಗೌಡಾ ಬಂಧನ ಮಾಡಲಾಗಿದೆ. ಸಿಐಡಿಯಿಂದ ತನಿಕೆ ಚುಕುಗೊಳ್ಳುತ್ತಿದಂತೆ ರುದ್ರಗೌಡಾ ಪಾಟೀಲ್ ನಾಪತ್ತೆಯಾಗಿದ್ದ. ಪಿಎಸ್ಐ ಪರೀಕ್ಷೆ ಅಕ್ರಮದ ಇನ್ನೊಬ್ಬ ಲೇಡಿ ಕಿಂಗ್ಪಿನ್ಗಾಗಿ ಸಿಐಡಿಯಿಂದ ಶೋಧ ನಡೆದಿತ್ತು. ದಿವ್ಯಾ ಹಾಗರಗಿ ಪತ್ತೆಗಾಗಿ ಸಿಐಡಿಯಿಂದ ತಿವ್ರ ಶೋಧ ಇನ್ನೂ ಲೇಡಿ ಕಿಂಗ್ಫಿನ್ ಪತ್ತೆಯಾಗಿಲ್ಲ. ಇನ್ನೇರಡು ದಿನದಲ್ಲಿ ದಿವ್ಯಾ ಹಾಗರಗಿಯನ್ನ ಬಂಧಿಸಲಿರುವ ಸಿಐಡಿ ಪೊಲೀಸ್…? ಈ ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ತೊಡಗಿದವರು ಬಹಳಷ್ಟು ಪಳಗಿದವರಾಗಿದ್ದಾರೆ. ಹೀಗಾಗಿ ಬಂಧಿಸಿದವರೆಲ್ಲರನ್ನ ಚಾನಾಕ್ಷತನದಿಂದ ಸಿಐಡಿ ತಂಡ ಬಾಯಿ ಬಿಡಿಸುತ್ತಿದೆ.
ದಿಡ್ಡಿ ಆಂಜನೇಯ ದೇಗುಲಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ
ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಹಳೇ ಹುಬ್ಬಳ್ಳಿ ಠಾಣೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿದ್ದಾರೆ. ಹಾಗೂ ಸಂಚಾರ, ಅಪರಾಧ ವಿಭಾಗ ಡಿಸಿಪಿ ಗೋಪಾಲ್ ಜತೆ ಪ್ರಕರಣದ ಕುರಿತು ಠಾಣೆಯಲ್ಲಿ ಚರ್ಚ ನಡೆಸಿದ್ದಾರೆ. ಬಳಿಕ ಗಲಭೆ ವೇಳೆ ದಾಳಿಗೊಳಗಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆ ಪಕ್ಕದಲ್ಲಿರುವ ದಿಡ್ಡಿ ಆಂಜನೇಯ ದೇಗುಲದ ಮೇಲೆ ಪುಂಡರು ಕಲ್ಲೆಸೆದಿದ್ದರು. ಹೀಗಾಗಿ ದೇವಸ್ಥಾನಕ್ಕೆ ಮುತಾಲಿಕ್ ಭೇಟಿ ನೀಡಿದ್ದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಹಿಂದೆ ಕಾಂಗ್ರೆಸ್ನ ಕೈವಾಡವಿದೆ ಇನ್ನು ಹಳೇ ಹುಬ್ಬಳ್ಳಿ ಗಲಾಟೆ ಸಂಬಂಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಬಂಧಿತ ಮೌಲ್ವಿ ವಸೀಂ ಪಠಾಣ್ಗೆ ಬಾಂಗ್ಲಾದ ಲಿಂಕ್ ಇದೆ. ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಹಿಂದೆ ಕಾಂಗ್ರೆಸ್ನ ಕೈವಾಡವಿದೆ. ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರನನ್ನು ಬಂಧಿಸಬೇಕು. ಕಿಡಿಗೇಡಿಗಳು ಪೊಲೀಸರನ್ನೇ ಹತ್ಯೆಗೈಯ್ಯಲು ಪ್ರಯತ್ನಿಸಿದ್ದಾರೆ. ಬಂಧಿತ ವಸೀಂ ರಜಾ ಅಕಾಡೆಮಿಯ ಅಧ್ಯಕ್ಷನಾಗಿದ್ದಾನೆ. ರಜಾ ಅಕಾಡೆಮಿ ಮೂಲ ಬಾಂಗ್ಲಾದಲ್ಲಿದೆ, ತನಿಖೆಯಾಗಬೇಕು. ಇಂಥವರ ವಿರುದ್ಧ ಕ್ರಮಕೈಗೊಳ್ಳಲು ಬಿಜೆಪಿ ಸರ್ಕಾರ ಹೆದರುತ್ತಿದೆ. ನೀವು ಕೂಡ ಬುಲ್ಡೋಜರ್ ತೆಗೆದುಕೊಂಡು ಬನ್ನಿ ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ;
ಧರ್ಮ ದಂಗಲ್ ನಡುವೆ ಮೈಸೂರಿನಲ್ಲಿ ಸೌಹಾರ್ದತೆಯ ಸಂದೇಶ ಸಾರಿದ ಮುಸ್ಲಿಂ ಸಮುದಾಯದ ಯುವಕರು; ವಿಡಿಯೋ ನೋಡಿ
Published On - 3:35 pm, Sat, 23 April 22