ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲಿಯೂ ಹುಲಿ ಉಗುರಿನ ಲಾಕೆಟ್ ಪತ್ತೆ

| Updated By: ಆಯೇಷಾ ಬಾನು

Updated on: Oct 26, 2023 | 2:50 PM

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಳಿಯನ ಕೊರಳಿನಲ್ಲಿಯೂ ಹುಲಿ ಉಗುರು ಕಂಡು ಬಂದಿದೆ. ಮದುವೆ ಸಮಯದಲ್ಲಿ ಫೋಟೋಶೂಟ್​ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದ ರಜತ್ ಫೋಟೋ ಈಗ ವೈರಲ್ ಆಗಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲಿಯೂ ಹುಲಿ ಉಗುರಿನ ಲಾಕೆಟ್ ಪತ್ತೆ
ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಳಿಯ ರಜತ್ ಉಳ್ಳಾಗಡ್ಡಿ ಮಠ
Follow us on

ಹುಬ್ಬಳ್ಳಿ, ಅ.26: ಬಿಗ್‌ಬಾಸ್ ಸ್ಪರ್ಧಿ ಸಂತೋಷ್ ಪ್ರಕರಣ ನಂತರ ಅನೇಕರಿಗೆ ಹುಲಿ ಉಗುರು ಉರುಳಾಗ್ತಿದೆ (Tiger Claw Locket Row). ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಅನೇಕ ಸೆಲೆಬ್ರೆಟಿಗಳಿಗೆ ಈಗಾಗಲೇ ಅರಣ್ಯಾಧಿಕಾರಿಗಳು (Forest Officials) ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯ ಈಗ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅಳಿಯ ಕೊರಳಲ್ಲಿಯೂ ಹುಲಿ ಉಗುರಿನ ಲಾಕೆಟ್ ಕಂಡು ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಳಿಯನ ಕೊರಳಿನಲ್ಲಿಯೂ ಹುಲಿ ಉಗುರು ಕಂಡು ಬಂದಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಅವರಿಗೆ ಕ್ಷೇತ್ರ ಬಿಟ್ಟು‌ಕೊಟ್ಟ ಡಿಕೆ ಶಿವಕುಮಾರ್ ಅವರ ನಿಕಟ ರಜತ್ ಉಳ್ಳಾಗಡ್ಡಿಮಠ ಅವರ ಕೊರಳಲ್ಲಿ ಹುಲಿ ಉಗುರು ಪೆಂಡೆಂಟ್ ಕಾಣಿಸಿಕೊಂಡಿದೆ. ಮದುವೆ ಸಮಯದಲ್ಲಿ ಫೋಟೋಶೂಟ್​ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದ ರಜತ್ ಫೋಟೋ ಈಗ ವೈರಲ್ ಆಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅಕ್ಕನ ಮಗಳನ್ನು ಮದುವೆಯಾಗಿರುವ ರಜತ್ ಉಳ್ಳಾಗಡ್ಡಿ ಮಠ ಅವರು ರಾಜಕೀಯ ವಲಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ಅಂತಲೇ ಫೇಮಸ್. ಈ ಹಿಂದೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಆಗಿದ್ದ ರಜತ್ ಶೆಟ್ಟರ್ ಸೋಲಿನ ಬಳಿಕ ರಾಜಿನಾಮೆ ನೀಡಿದ್ದರು.

ಇದನ್ನೂ ಓದಿ: ಹುಲಿ ಉಗುರು: ದರ್ಶನ್​ ವಿರುದ್ಧ ದೂರು ನೀಡಿದವರಿಗೆ ಅಭಿಮಾನಿಗಳಿಂದ ಕೊಲೆ ಬೆದರಿಕೆ

ಬಿಗ್ ಬಾಸ್ ಮನೆಯಲಿದ್ದ ವರ್ತೂರ್ ಸಂತೋಷ್ ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ಅಂತಾ ದೂರು ಬರ್ತಿದ್ದಂತೆ, ಅರಣ್ಯಾಧಿಕಾರಿಗಳು ಸೀದಾ ಸೀದಾ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟು ಸಂತೋಷ್​​ರನ್ನ ಅರೆಸ್ಟ್ ಮಾಡಿ, ಕೊನೆಗೆ ಜೈಲಿಗೂ ಕಳುಹಿಸಿದ್ರು. ಬಳಿಕ ನಟ ದರ್ಶನ್ , ಜಗ್ಗೇಶ್, ರಾಕ್​ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ ಮನೆಯ ಮೇಲೆ ದಾಳಿ ನಡೆಸಿ ಶೋಧ ನಡೆಸಿದ ಅಧಿಕಾರಿಗಳು, ನೋಟಿಸ್ ನೀಡಿದ್ರು. ನೋಟಿಸ್ ನೀಡಿದ್ರೂ, ಅದ್ರಲ್ಲಿ ಯಾರಿಗೂ ಕಾಲ ಮಿತಿಯನ್ನೇ ಹಾಕಿಲ್ಲ. ಇಷ್ಟೇ ಸಮಯದಲ್ಲಿ ಬಂದು ಉತ್ತರಿಸುವಂತೆಯೂ ತಿಳಿಸಿಲ್ಲ. ಹೀಗಾಗಿ ಸಂತೋಷ್​ಗೆ ಒಂದು ನ್ಯಾಯ. ಉಳಿದವರಿಗೆ ಒಂದು ನ್ಯಾಯವಾ ಅಂತಾ ಜನರು ಪ್ರಶ್ನಿಸ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:29 pm, Thu, 26 October 23