ಹರಿದು ಬರುತ್ತಿದೆ ಚರಂಡಿ ನೀರು… ಐತಿಹಾಸಿಕ ಕೆರೆ ಗಬ್ಬೆದ್ದು ನಾರುತ್ತಿದೆ! ಯಾವುದು ಆ ಕೆರೆ, ಹೇಗಿದೆ ಅದರ ದುಃಸ್ಥಿತಿ?
Sewage water flowing in to Unkal Lake: ಹುಬ್ಬಳ್ಳಿ ನಗರದಲ್ಲಿರೋ ಏಕೈಕ ಪ್ರೇಕ್ಷಣೀಯ ಸ್ಥಳ ಉಣಕಲ್ ಕೆರೆ. ಹು-ಧಾ ಪಾಲಿಕೆಯ ವಿಪಕ್ಷ ನಾಯಕಿ ಸುವರ್ಣ ಕೆರೆಯ ನೀರನ್ನು ಟೆಸ್ಟ್ ಮಾಡಿಸಿದ್ದು ನೀರು ಯೋಗ್ಯವಲ್ಲ ಅನ್ನೋ ವರದಿ ಬಂದಿದೆ. ಆದರೂ ಇದೇ ನೀರಲ್ಲಿಕೆಲವರು ತರಕಾರಿ ಬೆಳೆಯುತ್ತಿದ್ದಾರೆ. ಅದನ್ನು ಯಾರೂ ಸೇವಿಸಬೇಡಿ, ಯಾರೂ ಉಣಕಲ್ ಕೆರೆಯ ನೀರನ್ನು ಮುಟ್ಟಬೇಡಿ ಎಂದು ಮನವಿ ಮಾಡಿದ್ದಾರೆ.
ಅದು ಐತಿಹಾಸಿಕ ಕೆರೆ.. ಅಲ್ಲಿಗೆ ನಿತ್ಯ ನೂರಾರು ಪ್ರವಾಸಿಗರು ಬರ್ತಾರೆ.. ಹೊರ ಜಿಲ್ಲೆಯಿಂದಲೂ ಅಲ್ಲಿಗೆ ಪ್ರವಾಸಿಗರು ಬರ್ತಾರೆ.ಐತಿಹಾಸಿಕ ಕೆರೆಯ ಸುತ್ತಮುತ್ತ ವಾಯುವಿಹಾರಕ್ಕೂ ಜನ ಬರ್ತಾರೆ..ಆದ್ರೆ ಆ ಕೆರೆಯ ನೀರು ಇದೀಗ ಹಸಿರು ಬಣ್ಣಕ್ಕೆ ತಿರುಗಿದೆ.ಕೆರೆಯ ನೀರು ಸಂಪೂರ್ಣ ಹಸಿರಾಗಿದ್ದು ದುರ್ವಾಸನೆ ಬರ್ತಿದೆ..ಐತಿಹಾಸಿಕ ಕೆರೆಯ ನೀರು ಸಂಪೂರ್ಣ ಮಲಿನವಾಗಿದೆ.ಇದಕ್ಕೆಲ್ಲ ಕಾರಣ ಚರಂಡಿ ನೀರು..ಹಾಗಾದ್ರೆ ಆ ಐತಿಹಾಸಿಕ ಕೆರೆ ಯಾವ ರೀತಿ ಇದೆ ಅನ್ನೋದರ ವಿವರಣೆ ಇಲ್ಲಿದೆ ನೋಡಿ..
ಒಂದು ಕಡೆ ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದ ಕೆರೆ ನೀರು..ಇನ್ನೊಂದು ಕಡೆ ಮಲಿನವಾದ ಕೆರೆ..ಮತ್ತೊಂದು ಕಡೆ ಕೆರೆಗೆ ಹರಿದು ಬರ್ತಿರೋ ಚರಂಡಿ ನೀರು.. ಹೌದು ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.ಹುಬ್ಬಳ್ಳಿಯ ಐತಿಹಾಸಿಕ ಉಣಕಲ್ ಕೆರೆ ನೀರು ಇದೀಗ ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ.ಹುಬ್ಬಳ್ಳಿಯ ಕೂಗಳತೆ ದೂರದಲ್ಲಿರೋ ಉಣಕಲ್ ಕೆರೆಗೆ ಅದರದೇ ಆತ ಇತಿಹಾಸವಿದೆ.ಕೆರೆಯ ಸುತ್ರ ಮುತ್ತ ವಿಶಾಲವಾದ ಗಾರ್ಡನ್ ಕೂಡಾ ಇದೆ.ಇದೇ ಕಾರಣಕ್ಕೆ ಹುಬ್ಬಳ್ಳಿ ಧಾರಾವಾಡ ಸೇರಿ ಉತ್ತರ ಕರ್ನಾಟಕ ಭಾಗದ ಬಹುತೇಕ ಜನ ಉಣಕಲ್ ಕೆರೆಗೆ ಬರ್ತಾರೆ.ಆದ್ರೆ ಉಣಕಲ್ ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ದುರ್ವಾಸನೆ ಬರ್ತಿದೆ.
ಇದಕ್ಕೆಲ್ಲ ಕಾರಣ ಉಣಕಲ್ ಕೆರೆ ಸೇರ್ತಿದೆ ಚರಂಡಿ ನೀರು.ಹೌದು ಹುಧಾ ಅವಳಿ ನಗರದಲ್ಲಿ ಚರಂಡಿ ನೀರು ನೇರವಾಗಿ ಉಣಕಲ್ ಕೆರೆ ನೀರು ಸೇರ್ತಿದೆ.ಮೂರ್ನಾಲ್ಕು ಚರಂಡಿ ನೀರು ಹರಿದು ಬಂದು ಕೆರೆಗೆ ಸೇರ್ತಿರೋ ಕಾರಣಕ್ಕೆ ಉಣಕಲ್ ಕೆರೆ ನೀರು ಸಂಪೂರ್ಣವಾಗಿ ಮಲೀನವಾಗಿದೆ,ಇನ್ನು ಈ ಉಣಕಲ್ ಕೆರೆ ನೀರು ಯೋಗ್ಯವಲ್ಲ ಅನ್ನೋ ವರದಿಯೂ ಬಂದಿದೆ.ಹುಧಾ ಪಾಲಿಕೆಯ ವಿಪಕ್ಷ ನಾಯಕಿ ಸುವರ್ಣ ನೀರನ್ನು ಟೆಸ್ಟ್ ಮಾಡಿಸಿದ್ದು ನೀರು ಯೋಗ್ಯವಲ್ಲ ಅನ್ನೋ ವರದಿ ಬಂದಿದೆ.ನೀರು ಮುಟ್ಟಿದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರತ್ತೆ ಅನ್ನೋ ಬೆಚ್ಚಿ ಬೀಳಿಸೋ ಅಂಶ ಬಹಿರಂಗವಾಗಿದೆ.ಇದೇ ನೀರಲ್ಲಿಕೆಲವರು ತರಕಾರಿ ಬೆಳೆಯುತ್ತಿದ್ದು,ಅದನ್ನು ಯಾರೂ ಸೇವಿಸಬೇಡಿ,ಯಾರೂ ಉಣಕಲ್ ಕೆರೆಯ ನೀರು ಮುಟ್ಟಬೇಡಿ ಎಂದು ಹುಧಾ ಪಾಲಿಕೆಯ ವಿಪಕ್ಷ ನಾಯಕಿ ಮನವಿ ಮಾಡಿದ್ರು..
ಇನ್ನು ಉಣಕಲ್ ಕೆರೆ ಐತುಹಾಸಕ ಕೆರೆಯಾಗಿದೆ.ಸುಮಾರು 400 ಎಕರೆ ವೀಸ್ತಿರ್ಣ ಹೊಂದಿರೋ ಕೆರೆಯ ನೀರನ್ನು ಮುಂಚೆ ಕುಡಿಯೋಕೆ ಬಳಸ್ತಿದ್ರು.ಸುಮಾರು 20 ವರ್ಷದ ಕೆಳಗೆ ಕುಡಿಯೋಕೆ ಅಕ್ಕಪಕ್ಕದ ಜನ ಬಳಸ್ತಿದ್ರು.ಆದ್ರೆ ಇದೀಗ ನೀರು ಕುಡಿಯೋದನ್ನ ಬಿಟ್ಟಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ಉಣಕಲ್ ಕೆರೆಯ ನೀರು ದಿನದಿಂದ ದಿನಕ್ಕೆ ಮಲೀನವಾಗ್ತಿದೆ..ಕೆರೆಯೆ ನೀರಿನಲ್ಲಿ ಪಾಚಿಗಟ್ಟಿದ್ದು,ದುರ್ವಾಸನೆ ಬೀರುತ್ತಿದೆ.ಇದರಿಂದ ಉಣಕಲ್ ಕೆರೆಗೆ ಬರೋ ಪ್ರವಾಸಿಗರು ಮೂಗು ಮುಚ್ಚುಕೊಂಡು ಓಡಾಡೋ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ದಿನ ಸಂಜೆ ಉಣಕಲ್ ಸುತ್ತ ಮುತ್ತ ಇರೋ ಜನ ವಾಯುವಿಹಾರಕ್ಕೆಂದು ಉಣಕಲ್ ಕೆರೆಗೆ ಬರ್ತಿದ್ರು,ಆದ್ರೆ ಕೆರೆಯಿಂದ ಯಾವಾಗ ದುರ್ವಾಸನೆ ಹೊರ ಬರ್ತಿದೆಯೋ ಅವತ್ತಿಂದ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ.ಪ್ರತಿ ರವಿವಾರ ರಾಜ್ಯದ ನಾನಾ ಭಾಗದಿಂದಇಲ್ಲಿಗೆ ಜನ ಬರ್ತಾರೆ,ಹಣ ಕೊಟ್ಟು ಟಿಕೆಟ್ ತಗೆದುಕೊಂಡು ಹೋಗಿ ಎಂಜಾಯ್ ಮಾಡ್ತಾರೆ.ಆದ್ರೆ ಪ್ರವಾಸಿಗರ ಇದೀಗ ಕೆರೆ ನೋಡಿ ನಾವ ಯಾಕೆ ಹಣ ಕೊಡಬೇಕು ಎಂದು ಮೂಗು ಮುರಿಯುತ್ತಿದ್ದಾರೆ.ಜಿಲ್ಲಾಡಳಿತ ಪ್ರವಾಸಿಗರಿಂದ ಹಣ ಪಡೆದು ಅಭಿವೃದ್ಧಿ ಮಾಡೋದನ್ಮೆ ಮರೆತು ಬಿಟ್ಟಿದೆ..ಕೆರೆ ನೋಡೋಕೆ ಚೆನ್ನಾಗಿದೆ,ಆದ್ರೆ ಕೆರೆ ಬಹಳ ವಾಸನೆ ಬರ್ತಿದೆ ಅನ್ನೋದು ಜನರ ಆರೋಪ.
ಹುಬ್ಬಳ್ಳಿ ನಗರದಲ್ಲಿರೋ ಏಕೈಕ ಪ್ರೇಕ್ಷಣೀಯ ಸ್ಥಳ ಉಣಕಲ್ ಕೆರೆ.ಇದೀಗ ಕೆರೆ ಸಂಪೂರ್ಣ ಹಸಿರಾಗಿದ್ದು,ಕೆರೆಗೆ ಚರಂಡಿ ನೀರು ಸೇರಿ ಮಲೀನವಾಗಿದೆ.400 ಎಕರೆ ವಿಸ್ತೀರ್ಣದ ಕೆರೆ ನೀರು ಹಸಿರಾಗಿದ್ರು ಹುಧಾ ಪಾಲಿಕೆಯಾಗಲಿ,ಜಿಲ್ಲಾಡಳಿತವಾಗಲಿ ಇತ್ತ ತಿರುಗಿ ನೋಡ್ತಿಲ್ಲ.ಉಣಕಲ್ ಕೆರೆ ಅಭಿವೃದ್ಧಿ ಹೆಸರಲ್ಲಿ ಕೋಟಿ ಕೋಟಿ ಖರ್ಚು ಮಾಡಿದ್ತು,ಅದೆಲ್ಲವೂ ಕೆರೆಯ ನೀರಲ್ಲಿ ಹೋಮ ಮಾಡಿದಂತಾಗಿದೆ..
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ