ಇಂದು ರಾಷ್ಟ್ರಪತಿಯಿಂದ ತ್ರಿಬಲ್ ಐಟಿ (IIIT), ಮುಂದೆ ಡಿಸೆಂಬರಿನಲ್ಲಿ ಪ್ರಧಾನಿ ಮೋದಿಯಿಂದ ಐಐಟಿ (IIT) ಕ್ಯಾಂಪಸ್ ಕೂಡ ಉದ್ಘಾಟನೆ -ಪ್ರಲ್ಹಾದ್ ಜೋಶಿ

| Updated By: ಸಾಧು ಶ್ರೀನಾಥ್​

Updated on: Sep 26, 2022 | 6:47 PM

IIIT-Dharwad: ಧಾರವಾಡಕ್ಕೆ ತ್ರಿಬಲ್ ಐಟಿ ಸಂಸ್ಥೆ ತರುವಲ್ಲಿ ಶ್ರಮಿಸಿದ್ದ ಧಾರವಾಡ ಲೋಕಸಭಾ ಸಂಸದ ಹಾಗು ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ ಜೋಶಿ, ತ್ರಿಬಲ್ ಐಟಿ  ಅಷ್ಟೇ ಅಲ್ಲ, ಐಐಟಿ (IIT) ಸಂಸ್ಥೆಯ ಕ್ಯಾಂಪಸ್ ಕೂಡ ಉದ್ಘಾಟನೆಗೆ ಸಿದ್ಧವಾಗಿ ತಲೆಯೆತ್ತಿದೆ ಎಂದರು.

ಇಂದು ರಾಷ್ಟ್ರಪತಿಯಿಂದ ತ್ರಿಬಲ್ ಐಟಿ (IIIT), ಮುಂದೆ ಡಿಸೆಂಬರಿನಲ್ಲಿ ಪ್ರಧಾನಿ ಮೋದಿಯಿಂದ ಐಐಟಿ (IIT) ಕ್ಯಾಂಪಸ್ ಕೂಡ ಉದ್ಘಾಟನೆ -ಪ್ರಲ್ಹಾದ್ ಜೋಶಿ
ತ್ರಿಬಲ್ ಐಟಿ (IIIT) ಅಷ್ಟೇ ಅಲ್ಲ, ಡಿಸೆಂಬರ್ ನಲ್ಲಿ ಐಐಟಿ (IIT) ಕ್ಯಾಂಪಸ್ ಕೂಡ ಉದ್ಘಾಟನೆಗೆ ಸಜ್ಜಾಗಿದೆ - ಪ್ರಲ್ಹಾದ್ ಜೋಶಿ
Follow us on

ಧಾರವಾಡ: ಡಿಸೆಂಬರ್ ತಿಂಗಳ ಅಂತ್ಯದೊಳಗೆ ಧಾರವಾಡ ಐಐಟಿ (IIT-Dharwad) ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಅವರು, ಪ್ರತಿಷ್ಠಿತ ಧಾರವಾಡದ “ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT-Dharwad) ಉದ್ಘಾಟನಾ ಕಾರ್ಯಕ್ರಮದಲ್ಲಿಂದು ಪಾಲ್ಗೊಂಡು ಮಾತನಾಡುತ್ತಿದ್ದರು. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು (Draupadi Murmu) ಅವರು ಇಂದು ತ್ರಿಬಲ್ ಐಟಿ (IIIT) ಸಂಸ್ಥೆ ಕ್ಯಾಂಪಸ್ ಉದ್ಘಾಟಿಸಿದರು.

ಧಾರವಾಡಕ್ಕೆ ತ್ರಿಬಲ್ ಐಟಿ ಸಂಸ್ಥೆ ತರುವಲ್ಲಿ ಶ್ರಮಿಸಿದ್ದ ಧಾರವಾಡ ಲೋಕಸಭಾ ಸಂಸದ ಹಾಗು ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ ಜೋಶಿ, ತ್ರಿಬಲ್ ಐಟಿ  ಅಷ್ಟೇ ಅಲ್ಲ, ಐಐಟಿ (IIT) ಸಂಸ್ಥೆಯ ಕ್ಯಾಂಪಸ್ ಕೂಡ ಉದ್ಘಾಟನೆಗೆ ಸಿದ್ಧವಾಗಿ ತಲೆಯೆತ್ತಿದೆ ಎಂದರು. ಇಂದು ರಾಷ್ಟ್ರಪತಿ ಮುರ್ಮು ಅವರು ಧಾರವಾಡ ತ್ರಿಬಲ್ ಐಟಿ ಸಂಸ್ಥೆ ಕ್ಯಾಂಪಸ್ ಲೋಕಾರ್ಪಣೆಗೊಳಿಸಿದ್ದಾರೆ. ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಧಾರವಾಡ ಐಐಟಿ (IIT) ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಇದೇ ವೇಳೆ ಘೋಷಿಸಿದರು.

ಧಾರವಾಡದ ಎರಡು ಪ್ರತಿಷ್ಠಿತ ಸಂಸ್ಥೆಗಳ ಕ್ಯಾಂಪಸ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಆ ವೇಳೆಯೇ ಪ್ರಧಾನಿ ಮೋದಿ ಅವರು ಈ ಎರಡೂ ಸಂಸ್ಥೆಗಳ ಕ್ಯಾಂಪಸ್ ಐದು ವರ್ಷದ ಸರ್ಕಾರದ ಅವಧಿಯಲ್ಲೇ ಪೂರ್ಣಗೊಳ್ಳಲಿದೆಯಾ? ಎಂದು ಪ್ರಶ್ನಿಸಿದ್ದರು. ಇಂದು ಎರಡೂ ಸಂಸ್ಥೆಗಳ ಕ್ಯಾಂಪಸ್ ಸಿದ್ಧವಾಗಿ ತಲೆಯೆತ್ತಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಿಂದೆಂದಿಗಿಂತ ಹೆಚ್ಚಿನ ವೇಗದಲ್ಲಿ ಪ್ರಗತಿ ಕಾಣುತ್ತಿದ್ದು, ಈ ಸಮಯದಲ್ಲಿ ಧಾರವಾಡದಲ್ಲಿ ಐಐಐ-ಟಿ (IIIT) ಕಾರ್ಯಾರಂಭ ಮಾಡುತ್ತಿರುವುದು ಅತ್ಯಂತ ಸಂತಸ ಮೂಡಿಸಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಶ್ರೀ ಬಸವರಾಜ್‌ ಬೊಮ್ಮಾಯಿ, ಸಂಸ್ಥೆಯ ನಿರ್ದೇಶಕರಾದ ಪ್ರೊ. ಕವಿ ಮಹೇಶ್‌, ಕುಲಸಚಿವರ ಪ್ರೊ. ಚೆನ್ನಪ್ಪ ಅಕ್ಕಿ, ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ರಾಷ್ಟ್ರಪತಿ ಮುರ್ಮು ಅವರಿಗೆ ಪೌರ ಸನ್ಮಾನ

ಹುಬ್ಬಳ್ಳಿ-ಧಾರವಾಡದ ಜನತೆಯ ಪರವಾಗಿ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಪೌರ ಸನ್ಮಾನ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಪ್ತಲ್ಹಾದ್ ಜೋಶಿ ಹುಬ್ಬಳ್ಳಿ ಧಾರವಾಡದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದೆ. ರಾಷ್ಟ್ರಪತಿ ಮುರ್ಮು ಅವರಿಗೆ ನಮ್ಮ ಮಹಾನಗರ ಪಾಲಿಕೆಯಿಂದ ಸನ್ಮಾನಿಸಿದ್ದು ಅತ್ಯಂತ ಹೆಮ್ಮೆ. 35 ವರ್ಷದ ಬಳಿಕ ರಾಷ್ಟ್ರಪತಿಗಳಿಗೆ ಪೌರ ಸನ್ಮಾನ ಮಾಡುವ ಅವಕಾಶ ಅವಳಿ ನಗರ ಪಾಲಿಕೆಗೆ ದೊರೆತಿರುವುದು ಗೌರವದ ಸಂಗತಿ ಎಂದು ಅಭಿಪ್ರಾಯಪಟ್ಟರು.