
ಹುಬ್ಬಳ್ಳಿ, (ನವೆಂಬರ್ 11): ನಗರದ ಗ್ಲೋಬಲ್ ಕಾಲೇಜು ಮುಂಭಾಗದಲ್ಲಿ ಕಳೆದ ರಾತ್ರಿ ಇಬ್ಬರು ಯುವಕರಿಗೆ ಚಾಕು ಇರಿಯಲಾಗಿದೆ. ಅಭಿಷೇಕ್ ಬಂಡಿವಂಡರ್, ಮಾರುತಿ ಬಂಡಿವಂಡರ್ ಚಾಕು ಇರಿತಕ್ಕೊಳಗಾದ ಯುವಕರು. ಒಂದೇ ಹುಡುಗಿಯನ್ನು ಇಬ್ಬರು ಲವ್ ಮಾಡುತ್ತಿದ್ದು, ಇದೇ ವಿಚಾರಕ್ಕೆ ಬರ್ತ್ ಡೇ ಪಾರ್ಟಿಗೆಂದು ಕರೆದು ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಇನ್ನು ಗಲಾಟೆಯಲ್ಲಿ ಪ್ರೀತಿ ಮಾಡಿದವನು ಪರಾದ್ರೆ ಆತನ ಜೊತೆ ಹೋಗಿದ್ದವರು ಚಾಕು ಇರಿತಕ್ಕೊಳಗಾಗಿದ್ದಾರೆ.
ಹುಬ್ಬಳ್ಳಿ ನಗರದ ದೇಶಪಾಂಡೆ ನಗರದ ನಿವಾಸಿಗಳಾದ ಇಬ್ಬರು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ (ನವೆಂಬರ್ 10) ರಾತ್ರಿ ತಮ್ಮದೇ ಏರಿಯಾದ ಪವನ್ ಅನ್ನೋ ಸ್ನೇಹಿತ ಜೊತೆ ಹೋಗಿ ಸಂಕಷ್ಟ ತಂದುತೊಂಡಿದ್ದಾರೆ. ಹೌದು ಪವನ ಜೊತೆ ಮಣಿಕಂಠ ಅನ್ನೋನ ಬರ್ತಡೇ ಪಾರ್ಟಿಗೆ ಕಳೆದ ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಹೋಗಿದ್ದರಂತೆ. ಆದ್ರೆ ಬರ್ತಡೇ ಪಾರ್ಟಿಗೆ ಕರೆದಿದ್ದ ಮಣಿಕಂಠ, ಬರ್ತಡೇ ಮುನ್ನವೇ ಪವನ ಮತ್ತು ಆತನ ಜೊತೆ ಹೋಗಿದ್ದ ಅಭಿಷೇಕ್, ಮಾರುತಿ ಜೊತೆ ಜಗಳ ಆರಂಭಿಸಿದ್ದ. ಗಲಾಟೆಯಲ್ಲಿ ಮಣಿಕಂಠ್ ಮತ್ತು ಆತನ ಸ್ನೇಹಿತರು ಅಭಿಷೇಕ ಮತ್ತು ಮಾರುತಿ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಸ್ಥಳೀಯರು ಬಂದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಹೌದು…ಮಣಿಕಂಠ ಮತ್ತು ಪವನ್, ಇಬ್ಬರು ಗ್ಲೋಬಲ್ ಕಾಲೇಜ್ ನಲ್ಲಿ ಬಿಬಿಎ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ. ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದಾರಂತೆ. ಇದೇ ಕಾರಣಕ್ಕೆ ತಿಂಗಳ ಹಿಂದೆ ಇಬ್ಬರ ನಡುವೆ ಜಗಳವಾಗಿತ್ತಂತೆ. ನಿನ್ನೆ ತನ್ನ ಬರ್ತಡೇ ಪಾರ್ಟಿ ಇದೆ.ಆಗಿರೋ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿ ಮಣಿಕಂಠ, ಪವನ್ ನನ್ನು ಕರೆಸಿದ್ದನಂತೆ. ಪವನ್ ಒಬ್ಬನೇ ಹೋಗದೆ ಮಾರುತಿ ಮತ್ತು ಅಭಿಷೇಕ ನನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ. ಆದ್ರೆ ಗಲಾಟೆಯಲ್ಲಿ ಪ್ರೀತಿ ಮಾಡಿದವನು ಪರಾದ್ರೆ ಆತನ ಜೊತೆ ಹೋಗಿದ್ದವರು ಚಾಕು ಇರಿತಕ್ಕೊಳಗಾಗಿದ್ದಾರೆ. ಇನ್ನು ಮಾಹಿತಿ ಗೊತ್ತಾಗುತ್ತಿದ್ದಂತೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಕಿಮ್ಸ್ ಗೆ ಬೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಚಾಕು ಇರಿತಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಮುಖ ಆರೋಪಿ ಮಣಿಕಂಠ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಕಾಲೇಜಿನಲ್ಲಿ ಓದುವುದನ್ನು ಬಿಟ್ಟು ಪ್ರೀತಿ ಪ್ರೇಮ ಅಂತ ಹೋದವರು ಇದೀಗ ಕಂಬಿ ಹಿಂದೆ ಹೋಗಿದ್ದಾರೆ. ಆದ್ರೆ ತಮಗೆ ಸಂಬಂಧ ಇಲ್ಲದ ವಿಚಾರಕ್ಕೆ ಸ್ನೇಹಿತನ ಜೊತೆ ಹೋದವರು ಚಾಕು ಇರಿತಕ್ಕೊಳಗಾಗಿದ್ದು ಮಾತ್ರ ದುರ್ದೈವವೇ ಸರಿ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ