Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ Tv9 ಎಜುಕೇಶನ್ ಎಕ್ಸ್​ಪೋ... 30 ಅಧಿಕ ವಿದ್ಯಾಸಂಸ್ಥೆಗಳು ಭಾಗಿ

ಹುಬ್ಬಳ್ಳಿಯಲ್ಲಿ Tv9 ಎಜುಕೇಶನ್ ಎಕ್ಸ್​ಪೋ… 30 ಅಧಿಕ ವಿದ್ಯಾಸಂಸ್ಥೆಗಳು ಭಾಗಿ

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: May 05, 2024 | 4:18 PM

ಹುಬ್ಬಳ್ಳಿಯಲ್ಲಿ ನಿನ್ನೆಯಿಂದ ಟಿವಿ9 ಎಜುಕೇಶನ್ ಸಮ್ಮಿಟ್(TV9 Kannada Education Summit) ಆರಂಭವಾಗಿದ್ದು ಉತ್ತಮವಾದ ಪ್ರತಿಕ್ರಿಯೆ ದೊರಕಿದೆ. ಹುಬ್ಬಳ್ಳಿಯ(Hubballi) ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ್ ಗಾರ್ಡನ್​ನಲ್ಲಿ ನಿನ್ನೆ ಎಜುಕೇಶನ್ ಸಮ್ಮಿಟ್ ಆರಂಭವಾಗಿದ್ದು, ಇವತ್ತು ಕೊನೆಯ ದಿನವಾಗಿದೆ‌.

ಹುಬ್ಬಳ್ಳಿ, ಮೇ.05: ಹುಬ್ಬಳ್ಳಿಯಲ್ಲಿ ನಿನ್ನೆಯಿಂದ ಟಿವಿ9 ಎಜುಕೇಶನ್ ಸಮ್ಮಿಟ್(TV9 Kannada Education Summit) ಆರಂಭವಾಗಿದ್ದು ಉತ್ತಮವಾದ ಪ್ರತಿಕ್ರಿಯೆ ದೊರಕಿದೆ. ಹುಬ್ಬಳ್ಳಿಯ(Hubballi) ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ್ ಗಾರ್ಡನ್​ನಲ್ಲಿ ನಿನ್ನೆ ಎಜುಕೇಶನ್ ಸಮ್ಮಿಟ್ ಆರಂಭವಾಗಿದ್ದು, ಇವತ್ತು ಕೊನೆಯ ದಿನವಾಗಿದೆ‌. ಈ ಎಜುಕೇಶನ್ ಎಕ್ಸಪೋದಲ್ಲಿ ಮೂವತ್ತಕ್ಕು ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿಯಾಗಿವೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಟಿವಿ9 ಎಜುಕೇಶನ್ ಸಮ್ಮಿಟ್ ಆಯೋಜನೆ ಮಾಡಿದ್ದು, ಇವತ್ತು ಕೊನೆಯ ದಿನವಾದ ಹಿನ್ನಲೆ ವಿದ್ಯಾರ್ಥಿಗಳ ಪೋಷಕರು ಎಜುಕೇಶನ್ ಎಕ್ಸಪೋ ಗೆ ಆಗಮಿಸಿ ಮಹತ್ವದ ಮಾಹಿತಿ ಪಡೆದುಕೊಂಡರು. ಟಿವಿ9 ಕಳೆದ ಏಳು ವರ್ಷಗಳಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಎಜುಕೇಶನ್ ಎಕ್ಸಪೋ ಆಯೋಜನೆ ಮಾಡುತ್ತಿದೆ. ಆರು ವರ್ಷ ಎಜುಕೇಶನ್ ಎಕ್ಸಪೋ ಅಭೂತ ಪೂರ್ವ ಯಶಸ್ಸು ಕಂಡಿತ್ತು. ಈ ಬಾರಿಯೂ ಮೊದಲನೇ ದಿನ ಸಮ್ಮಿಟ್​ಗೆ ಉತ್ತಮ ಪ್ರತಿಕ್ರೀಯೆ ಸಿಕ್ಕಿದ್ದು, ಇಂದು ಕೊನೆಯ ದಿನವಾಗಿದ್ದು ವಿದ್ಯಾರ್ಥಿಗಳು ಉತ್ತಮ ಮಾಹಿತಿ ಪಡೆದುಕೊಂಡರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ