ಹುಬ್ಬಳ್ಳಿಯಲ್ಲಿ ಇಂದಿನಿಂದ 2 ದಿನ ಟಿವಿ9 ಕನ್ನಡ ಎಜುಕೇಶನ್ ಎಕ್ಸ್​ಪೋ 2024

ಹುಬ್ಬಳ್ಳಿಯಲ್ಲಿ ಇಂದಿನಿಂದ 2 ದಿನ ಟಿವಿ9 ಕನ್ನಡ ಎಜುಕೇಶನ್ ಎಕ್ಸ್​ಪೋ 2024

ವಿವೇಕ ಬಿರಾದಾರ
| Updated By: ಗಂಗಾಧರ​ ಬ. ಸಾಬೋಜಿ

Updated on: May 04, 2024 | 3:24 PM

ಬೆಂಗಳೂರು, ಕಲಬುರಗಿಯಲ್ಲಿ ನಡೆದ ಟಿವಿ9 ಎಜುಕೇಶನ್ ಸಮಿಟ್ (TV9 Kannada Education Summit) ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಈಗ ಹುಬ್ಬಳ್ಳಿಯಲ್ಲಿ ಆಯೋಜನೆ ಆಯೋಜಿಸಲಾಗಿದೆ. ಇಂದು ಮೇ 04 ಮತ್ತು 05 ರಂದು ನಡೆಯಲಿದೆ. ಹುಬ್ಬಳ್ಳಿಯಲ್ಲಿ 6ನೇ ಬಾರಿಗೆ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ ಆಯೋಜಿಸಲಾಗುತ್ತಿದೆ.

ಹುಬ್ಬಳ್ಳಿ, ಮೇ 04: ಬೆಂಗಳೂರು, ಕಲಬುರಗಿಯಲ್ಲಿ ನಡೆದ ಟಿವಿ9 ಎಜುಕೇಶನ್ ಸಮಿಟ್ (TV9 Kannada Education Summit) ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಈಗ ಹುಬ್ಬಳ್ಳಿಯಲ್ಲಿ ಆಯೋಜನೆ ಆಯೋಜಿಸಲಾಗಿದೆ. ಇಂದು ಮೇ 04 ಮತ್ತು 5 ಎರಡು ದಿನ ನಡೆಯಲಿದೆ. ಹುಬ್ಬಳ್ಳಿಯಲ್ಲಿ 6ನೇ ಬಾರಿಗೆ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ ಆಯೋಜಿಸಲಾಗುತ್ತಿದೆ. ನಗರದ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನ್‌ನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಈ ಎಕ್ಸ್​ಪೋ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಿಗೆ ಯಾವ ಕಾಲೇಜು ಮತ್ತು ಕೋರ್ಸ್ ಸೇರಬಹುದು ಎಂಬುದನ್ನು ಈ ಶೃಂಗಸಭೆಯಲ್ಲಿ ಮಾರ್ಗದರ್ಶನ ಸಿಗಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತದೆ. ಅಡ್ಮಿಶನ್, ಕೋರ್ಸ್, ಪಠ್ಯಕ್ರಮ, ಸ್ಪರ್ಧಾತ್ಮಕ ಪರೀಕ್ಷೆ, ಹೊಸ ವೃತ್ತಿ ಅವಕಾಶ ಮೊದಲಾದ ಬಗ್ಗೆ ಮಾಹಿತಿಯನ್ನು ಪಡೆಯಲು ಒಳ್ಳೆಯ ವೇದಿಕೆ ಇದಾಗಿದೆ. ವಿದ್ಯಾರ್ಥಿಗಳು ತಮ್ಮಿಚ್ಛೆಯ ಕೋರ್ಸ್​ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಅಡ್ಮಿಶನ್ ವಿಧಾನಗಳ ಬಗ್ಗೆ ತಿಳಿದುಕೊಳ್ಳಲು ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ ಸಹಾಯಕವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.