ಕಣ್ಮುಚ್ಚಿ ತೆಗೆಯೋದ್ರಲ್ಲಿ ಡಿಕೆ ಶಿವಕುಮಾರ್ ಸ್ವಾಗತಕ್ಕೆ ತಂದಿದ್ದ ಸೇಬು ಹಾರ ಉಡೀಸ್
ಲೋಕಸಭಾ ಚುನಾವಣೆ ಹಿನ್ನಲೆ ಧಾರವಾಡ(Dharwad) ಜಿಲ್ಲೆಯ ಕುಂದಗೋಳಕ್ಕೆ ಹೆಲಿಕ್ಯಾಪ್ಟರ್ ಮೂಲಕ ಡಿಕೆ ಶಿವಕುಮಾರ್(DK Shivakumar) ರಗಡ್ ಎಂಟ್ರಿಕೊಟ್ಟಿದ್ದಾರೆ. ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ಗೆ ಕೈ ಕಾರ್ಯಕರ್ತರು ಬೃಹತ್ ಸೇಬಿನ ಹಾರ ಹಾಕಿ ಹೂ ಮಳೆಗರೆದು ಭರ್ಜರಿ ಸ್ವಾಗತ ಮಾಡಿದರು.
ಧಾರವಾಡ, ಮೇ.04: ಲೋಕಸಭಾ ಚುನಾವಣೆ ಹಿನ್ನಲೆ ಧಾರವಾಡ(Dharwad) ಜಿಲ್ಲೆಯ ಕುಂದಗೋಳಕ್ಕೆ ಹೆಲಿಕ್ಯಾಪ್ಟರ್ ಮೂಲಕ ಡಿಕೆ ಶಿವಕುಮಾರ್(DK Shivakumar) ರಗಡ್ ಎಂಟ್ರಿಕೊಟ್ಟಿದ್ದಾರೆ. ಕೈ ಅಭ್ಯರ್ಥಿ ವಿನೋದ್ ಅಸೂಟಿ ಪರ ಡಿಕೆ ಶಿವಕುಮಾರ್ ಮತಯಾಚನೆ ಮಾಡಲಿದ್ದಾರೆ. ಇನ್ನು ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ಗೆ ಕೈ ಕಾರ್ಯಕರ್ತರು ಬೃಹತ್ ಸೇಬಿನ ಹಾರ ಹಾಕಿ ಹೂ ಮಳೆಗರೆದು ಭರ್ಜರಿ ಸ್ವಾಗತ ಮಾಡಿದರು. ಈ ವೇಳೆ ಡಿಸಿಎಂಗೆ ಮಾಜಿ ಶಾಸಕ ಡಾ.ಯತೀಂದ್ರ, ಕೈ ಅಭ್ಯರ್ಥಿ ವಿನೋದ್ ಅಸೂಟಿ, ಹಾಸ್ಯ ಕಲಾವಿದ ಸಾಧು ಕೋಕಿಲಾ ಸಾಥ್ ನೀಡಿದ್ದಾರೆ. ಇನ್ನು ಸೇಬಿನ ಹಾರ ಹಾಕಿದ ಕೆಲವೇ ಕ್ಷಣಗಳಲ್ಲಿ ಸೇರಿದ್ದ ಜನರು ಉಡೀಸ್ ಮಾಡಿದ್ದಾರೆ. ಇದು ಕುಂದಗೋಳ ಪಟ್ಟಣದಲ್ಲಿ ನಡೆಯುತ್ತಿರೋ ಬೃಹತ್ ಪ್ರಚಾರ ಸಭೆ ಇದಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos