ನಿಂಬೆ ಅಂದ್ರೆ ರೇವಣ್ಣನ ನಿಂಬೆ ಹಣ್ಣು ಅಲ್ಲ, ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಹಾಸ್ಯ
ಡಿಸಿಎಂ ಡಿಕೆ ಶಿವಕುಮಾರ್ ಅವರು ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿ ಸರ್ವಜ್ಞನ ಮಾತಗಳನ್ನು ನೆನಪಿಸಿಕೊಂಡರು, ಜತೆಗೆ ಹಾಸ್ಯವಾಗಿ ಮಾತನಾಡಿದ್ದಾರೆ. ಈ ಬಗ್ಗೆ ವಿಡಿಯೋ ಇಲ್ಲಿದೆ.
ಬಾಗಲಕೋಟೆ, ಮೇ.3: ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DKShivakumar) ಅವರು ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಬಾಗಲಕೋಟೆ ತುಂಬಾ ವಿಶ್ವಾಸದಿಂದ ಬಂದಿದ್ದೇನೆ ಎಂದರು. ಸಮಾವೇಶದಲ್ಲಿ ಸರ್ವಜ್ಞನ ವಚನ ಹೇಳಿದರು, ನಿಂಬೆಗಿಂ ಹುಳಿಯಿಲ್ಲ । ತುಂಬೆಗಿಂ ಕರಿದಿಲ್ಲ । ನಂಬಿಗೆಯಿಂದಧಿಕ ಗುಣ್ವವಿಲ್ಲ । ದೈವವುಂ । ಶುಭವಿಂದಿಲ್ಲ ಸರ್ವಜ್ಞ||ಮಾವು, ದ್ರಾಕ್ಷೆ ಎಲ್ಲದಕ್ಕಿಂತ ನಿಂಬೆ ಹಣ್ಣಿನ ಹುಳಿ ಶ್ರೇಷ್ಠ, ನಿಂಬೆ ಅಂದ್ರೆ ರೇವಣ್ಣನ ನಿಂಬೆ ಅಲ್ಲ ಎಂದು ಹ್ಯಾಸವಾಗಿ ಹೇಳಿದರು. ನಾನು ಮತ್ತು ಸಿಎಂ ಸಿದ್ಧರಾಮಯ್ಯ ಅವರು ಅಪಾರ ನಂಬಿಕೆ ಇಟ್ಟುಕೊಂಡಿದ್ದೇವೆ. ಇಲ್ಲಿಯವರೆಗೆ ಒಬ್ಬ ಸಂಸದ ಸಂಸತ್ನಲ್ಲಿ ನಿಮ್ಮ ಪರವಾಗಿ ಬಾಯಿಬಿಟ್ಟಿಲ್ಲ ಈ ಬಾರಿ ಒಬ್ಬರ ಹೆಣ್ಮಗಳು ಪಾರ್ಲಿಮೆಂಟ್ನಲ್ಲಿ ಮಾತನಾಡಲಿದ್ದಾಳೆ, ಬಾಗಲಕೋಟೆ ಜನರ ಪರವಾಗಿ ನಿಲ್ಲುತ್ತಾರೆ. ಆ ಹೆಣ್ಮಗಳನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಅವಳನ್ನು ಗೆಲ್ಲಿಸಿ ಸಂಸತ್ಗೆ ಕಳುಹಿಸುತ್ತೀರಾ ಎಂದು ಹೇಳಿದರು. ಸಮಾವೇಶದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಬೆಂಗಳೂರು ದಕ್ಷಿಣ ಅಭ್ಯರ್ಥಿ ಸೌಮ್ಯ ರೆಡ್ಡಿ, ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ, ಮಾಜಿ ಸಚಿವ ಎಸ್ ಆರ್ ಪಾಟೀಲ್, ಅಜಯ್ ಕುಮಾರ್ ಸರನಾಯಕ್ ಭಾಗಿಯಾಗಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ