ಸಂತ್ರಸ್ತೆಯೊಂದಿಗೆ ಎಸ್ಐಟಿ ಅಧಿಕಾರಿಗಳು ರೇವಣ್ಣನ ಮನೆಗೆ ಬರುತ್ತಿದ್ದಂತೆಯೇ ಧಾವಿಸಿದ ವಕೀಲರು!
ಆದರೆ, ಪೊಲೀಸ್ ಅಧಿಕಾರಿಗಳು ಮನೆ ಕಂಪೌಂಡಿನೊಳಗೆ ಪ್ರವೇಶಿಸಿದ ಸ್ವಲ್ಪ ಹೊತ್ತಿನಲ್ಲೇ ರೇವಣ್ಣನ ವಕೀಲರು ಅಲ್ಲಿಗೆ ಧಾವಿಸುತ್ತಾರೆ. ಅಂದರೆ ಅಧಿಕಾರಿಗಳು ರೇವಣ್ಣರನ್ನು ಈಗಲೇ ಬಂಧಿಸುವ ಸಾಧ್ಯತೆ ಇಲ್ಲದಿಲ್ಲ. ಮೈಸೂರಿನ ಕಿಡ್ನ್ಯಾಪಿಂಗ್ ಪ್ರಕರಣದಲ್ಲಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿದ್ದರು. ವಕೀಲರು ಅದನ್ನು ಏನಾದರು ತೆಗೆದುಕೊಂಡು ಬಂದಿದ್ದಾರೆಯೇ?
ಹಾಸನ: ಬೆಳಗ್ಗೆ ಪೊಲೀಸರು ಬೇಟಿ ನೀಡಿದಾಗಲೇ ಎಸ್ಐಟಿ ಅಧಿಕಾರಿಗಳ (SIT officials) ಹೊಳೆನರಸೀಪುರದಲ್ಲಿರುವ ಶಾಸಕ ಹೆಚ್ ಡಿ ರೇವಣ್ಣ (HD Revanna) ಮನೆಗೆ ಬರುವುದು ಖಚಿತವಾಗಿತ್ತು. ನಮಗೆ ಲಭ್ಯವಾಗಿರುವ ದೃಶ್ಯಗಳಲ್ಲಿ ಏನನ್ನೂ ಸ್ಪಷ್ಟವಾಗಿ ನೋಡಲಾಗಲ್ಲ. ಅಧಿಕಾರಿಗಳು ಸಂತ್ರಸ್ತೆಯನ್ನೂ (victim) ತಮ್ಮೊಂದಿಗೆ ಕರೆತಂದಿದ್ದಾರೆ. ಇದು ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲ ಪ್ರಕರಣವಾಗಿರುವುದರಿಂದ ಮಾಧ್ಯಮದವರಿಗೆ ಸನ್ನಿವೇಶಗಳನ್ನು ಕೆಮೆರಾಗಳಲ್ಲಿ ಸೆರೆಹಿಡಿಯುವ ಅವಕಾಶವಿರಲ್ಲ. ಸ್ಥಳದ ಮಹಜರ್ ನಡೆಸಲು ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆಯನ್ನು ರೇವಣ್ಣ ಮನೆಗೆ ಕರೆದೊಯ್ದಿರುವ ಸಾಧ್ಯತೆ ಇದೆ. ಆದರೆ, ಪೊಲೀಸ್ ಅಧಿಕಾರಿಗಳು ಮನೆ ಕಂಪೌಂಡಿನೊಳಗೆ ಪ್ರವೇಶಿಸಿದ ಸ್ವಲ್ಪ ಹೊತ್ತಿನಲ್ಲೇ ರೇವಣ್ಣನ ವಕೀಲರು ಅಲ್ಲಿಗೆ ಧಾವಿಸುತ್ತಾರೆ. ಅಂದರೆ ಅಧಿಕಾರಿಗಳು ರೇವಣ್ಣರನ್ನು ಈಗಲೇ ಬಂಧಿಸುವ ಸಾಧ್ಯತೆ ಇಲ್ಲದಿಲ್ಲ. ಮೈಸೂರಿನ ಕಿಡ್ನ್ಯಾಪಿಂಗ್ ಪ್ರಕರಣದಲ್ಲಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿದ್ದರು. ವಕೀಲರು ಅದನ್ನು ಏನಾದರು ತೆಗೆದುಕೊಂಡು ಬಂದಿದ್ದಾರೆಯೇ? ಒಟ್ಟಿನಲ್ಲಿ ಈಗ ರೇವಣ್ಣನ ಹೊಳೆನರಸೀಪುರ ಮನೆ ಚಟುವಟಿಕೆಯ ಕೇಂದ್ರವಾಗಿದ್ದು ಎಲ್ಲರ ದೃಷ್ಟಿ ಅದರ ಮೇಲೆ ನೆಟ್ಟಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೆಚ್ ಡಿ ರೇವಣ್ಣ ಹೊಳೆನರಸೀಪುರ ಮನೆಗೆ ಮತ್ತೊಮ್ಮೆ ಭೇಟಿ ನೀಡಿದ ಪೊಲೀಸ್ ತಂಡ, ಬಂಧನ ಸನ್ನಿಹಿತ?