ಕಾಂಗ್ರೆಸ್ ನಾಯಕನಾಗಿ ಸಂತುಷ್ಟನಾಗಿರುವೆ, ಬಿಜೆಪಿ ಸೃಷ್ಟಿಯ ಒಕ್ಕಲಿಗ ನಾಯಕತ್ವ ಬೇಕಿಲ್ಲ: ಡಿಕೆ ಶಿವಕುಮಾರ್
ಎಲ್ಲರಿಗೂ ಈಗ ಮಳೆ ಬೇಕಾಗಿದೆ, ಅದರಿಂದ ತೊಂದರೆ ಏನೂ ಇಲ್ಲ, ರಾಜ್ಯದ ಜನತೆಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಚೆನ್ನಾಗಿ ಮಳೆಯಾದರೆ ಈ ಬಾಬತ್ತಿನಲ್ಲಿ ದಿನವೊಂದಕ್ಕೆ ಸರ್ಕಾರಕ್ಕೆ 1,000 ಕೋಟಿ ರೂ. ಪ್ರಯೋಜನವಾಗುತ್ತದೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಾನು ಒಕ್ಕಲಿಗರ ನಾಯಕನಾಗುವ ಪ್ರಯತ್ನ ಮಾಡುತ್ತಿಲ್ಲ, ಅದರೆ ಒಕ್ಕಲಿಗನಾಗಿ ಹುಟ್ಟಿದ್ದೇನೆ ಮತ್ತು ಸಮುದಾಯಕ್ಕೆ (Vokkaliga Community) ತನ್ನಿಂದಾಗುವ ಸಹಾಯ ಮಾಡುತ್ತೇನೆ, ಒಕ್ಕಲಿಗ ನಾಯಕತ್ವ ಬಿಜೆಪಿಯ ಸೃಷ್ಟಿ, ತನಗೆ ಆ ನಾಯಕತ್ವ ಬೇಕಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ನಾಯಕನಾಗಿ ಗುರುತಿಸಿಕೊಂಡಿದ್ದೇನೆ, ಕಳೆದ 4 ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ (KPCC president) ಕೆಲಸ ಮಾಡುತ್ತಿದ್ದೇನೆ ಮತ್ತು ತಾನು ಮಾಡುತ್ತಿರುವ ಕೆಲಸ ಆತ್ಮತೃಪ್ತಿ ನೀಡಿದೆ ಎಂದು ಶಿವಕುಮಾರ್ ಹೇಳಿದರು. ನಿನ್ನೆ ನಗರದಲ್ಲಿ ಮಳೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಮಳೆಯಾಗಲಿ, ಇನ್ನಷ್ಟು ಮಳೆಯಾಗಲಿ ಅಂತ ಭಗವಂತನನ್ನು ಪ್ರಾರ್ಥಿಸುತ್ತೇನೆ, ಅದರಿಂದ ತೊಂದರೆ ಏನೂ ಇಲ್ಲ, ಎಲ್ಲರಿಗೂ ಈಗ ಮಳೆ ಬೇಕಾಗಿದೆ, ರಾಜ್ಯದ ಜನತೆಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಚೆನ್ನಾಗಿ ಮಳೆಯಾದರೆ ಈ ಬಾಬತ್ತಿನಲ್ಲಿ ದಿನವೊಂದಕ್ಕೆ ಸರ್ಕಾರಕ್ಕೆ 1,000 ಕೋಟಿ ರೂ. ಪ್ರಯೋಜನವಾಗುತ್ತದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಖ್ಯಮಂತ್ರಿಯಾಗಲು ಶಿವಕುಮಾರ್ ಏನಾದರೂ ಮಾಡಬಲ್ಲರು, ಸಿದ್ದರಾಮಯ್ಯ ಎಚ್ಚರದಿಂದಿರಬೇಕು: ರಾಜುಗೌಡ, ಮಾಜಿ ಶಾಸಕ