ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಅದ್ವಾನ

ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಅದ್ವಾನ

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:May 03, 2024 | 3:43 PM

ನಿನ್ನೆಯಷ್ಟೇ ಬೆಂಗಳೂರಿನಲ್ಲಿ ತಿಂಗಳುಗಳ ನಂತರ ಮಳೆಗೆ ಬಂದಿದೆ. ನಿನ್ನೆ ಹಾಗೂ ಇವತ್ತು ನಗರದಲ್ಲಿ ಗರಿಷ್ಟ 38ಉಷ್ಣಾಂಶ ಇದ್ದು, ಬೆಳಿಗ್ಗೆಯಿಂದ ಬಿಸಿ ಹಾಗೂ ಆರ್ದ್ರ ವಾತಾವರಣವಿತ್ತು. ಮಳೆ ಹಿನ್ನಲೆ ಹಾಟ್ ಸಿಟಿ ಕೂಲ್ ಕೂಲ್ ಆಗಿದೆ. ಇನ್ನು ಕೆ.ಆರ್ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಅದ್ವಾನವಾಗಿದ್ದು, ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದೆ.

ಬೆಂಗಳೂರು, ಮೇ.03:b ಬಿರು ಬಿಸಿಲಿಗೆ ಕಂಗಾಲಾಗಿದ್ದ ಬೆಂಗಳೂರಿಗರು ವರುಣನ(Bengaluru Rain) ಆಗಮನದಿಂದ ಸಂತಸಗೊಂಡಿದ್ದಾರೆ. ಹೌದು, ನಿನ್ನೆಯಷ್ಟೇ ಬೆಂಗಳೂರಿನಲ್ಲಿ ತಿಂಗಳುಗಳ ನಂತರ ಮಳೆಗೆ ಬಂದಿದೆ. ಇಂದು(ಮೇ.03) ಕೂಡ ನಗರದ ಕೆ.ಆರ್‌ಪುರಂ ವೈಟ್ ಫಿಲ್ಡ್, ವಿಧಾನ ಸೌಧ.ಚಾಲುಕ್ಯ ಸರ್ಕಲ್. ಶಿವಾನನಂದ ಸರ್ಕಲ್ ,ಮೈಸೂರು ಬ್ಯಾಂಕ್ ಮೆಜೆಸ್ಟಿಕ್ ಸೇರಿದಂತೆ  ಬೆಂಗಳೂರು ದಕ್ಷಿಣ ಭಾಗದಲ್ಲಿ ಭರ್ಜರಿ ಮಳೆಯಾಗಿದೆ.

ಕೆಆರ್ ಮಾರುಕಟ್ಟೆಯಲ್ಲಿ ಅದ್ವಾನ

ನಿನ್ನೆ ಹಾಗೂ ಇವತ್ತು ನಗರದಲ್ಲಿ ಗರಿಷ್ಟ 38ಉಷ್ಣಾಂಶ ಇದ್ದು, ಬೆಳಿಗ್ಗೆಯಿಂದ ಬಿಸಿ ಹಾಗೂ ಆರ್ದ್ರ ವಾತಾವರಣವಿತ್ತು. ಮಳೆ ಹಿನ್ನಲೆ ಹಾಟ್ ಸಿಟಿ ಕೂಲ್ ಕೂಲ್ ಆಗಿದೆ. ಇನ್ನು ಕೆ.ಆರ್ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಅದ್ವಾನವಾಗಿದ್ದು, ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದೆ. ಇದರಿಂದ ರಸ್ತೆ ಫುಲ್ ಬ್ಲಾಕ್ ಆಗಿದ್ದು, ರಸ್ತೆಯ ಮಧ್ಯದಷ್ಟು ಮಳೆ ನೀರು ನಿಂತಿದೆ. ಇತ್ತ ಪ್ಯಾಲೇಸ್ ರಸ್ತೆಯಲ್ಲಿ ಮಳೆ ಹಿನ್ನಲೆ ಪ್ಯಾಲೇಸ್ ರಸ್ತೆ ಅಂಡರ್ ಪಾಸ್​ಗಳಲ್ಲಿ ಜನರು ಆಸರೆ ಪಡೆದಿದ್ದಾರೆ.

ಬೆಂಗಳೂರಿನ ಜಯನಗರ, ಬಸವನಗುಡಿ, ಚಾಮಾರಾಜಪೇಟೆ, ವಸಂತನಗರ ಕೆ.ಆರ್.ಸರ್ಕಲ್, ಹೈಕೋರ್ಟ್, ಕಬ್ಬನ್ ಪಾರ್ಕ್​ನಲ್ಲಿ ವರುಣನ ಆಗಮನವಾಗಿದೆ. ಸೌತ್ ಎಂಡ್ ಸರ್ಕಲ್ ಬಳಿಯೂ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಜೊತೆಗೆ ಬೆಂಗಳೂರು ದಕ್ಷಿಣದ ಜಿಪಿ ನಗರದ ಆರ್ ಬಿ ಐ ಲೇಔಟ್ ನಲ್ಲಿ ಗುಡುಗು ಸಹಿತ ಮಳೆ ಆರಂಭವಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 03, 2024 03:38 PM