ಗನ್‌ ತೋರಿಸಿ ಜೆಡಿಎಸ್‌ ನಾಯಕಿ ಮೇಲೆಯೇ ಪ್ರಜ್ವಲ್‌ ಅತ್ಯಾಚಾರ, ಇಲ್ಲಿದೆ ಇಂಚಿಂಚು ಡಿಟೇಲ್ಸ್!

ಗನ್‌ ತೋರಿಸಿ ಜೆಡಿಎಸ್‌ ನಾಯಕಿ ಮೇಲೆಯೇ ಪ್ರಜ್ವಲ್‌ ಅತ್ಯಾಚಾರ, ಇಲ್ಲಿದೆ ಇಂಚಿಂಚು ಡಿಟೇಲ್ಸ್!

ರಮೇಶ್ ಬಿ. ಜವಳಗೇರಾ
|

Updated on: May 03, 2024 | 4:07 PM

ಪ್ರಜ್ವಲ್ ರೇವಣ್ಣ ವಿರುದ್ಧ ಜೆಡಿಎಸ್​ ನಾಯಕಿಯೇ ಅತ್ಯಾಚಾರ ದೂರು ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕೊಟ್ಟ ದೂರಿನಲ್ಲಿ ಭಯಾನಕ ಸತ್ಯಗಳು ಹೊರಬಂದಿದ್ದು, ಗನ್‌ ಪಾಯಿಂಟ್‌ ಇಟ್ಟು ಜೆಡಿಎಸ್‌ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಇನ್ನು ಖುದ್ದು ಜಿಲ್ಲಾ ಜೆಡಿಎಸ್​ ನಾಯಕಿಯೇ ತನ್ನ ಮೇಲಾದ ಅತ್ಯಾಚಾರದ ಸಂಗತಿಯನ್ನು ಎಳೆಎಳೆಯಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಬೆಂಗಳೂರು, (ಮೇ 03): ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ದಾಖಲಾಗಿರುವ ರೇಪ್ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಈಗ ಜೆಡಿಎಸ್‌ ನಾಯಕಿ, ಸಂತ್ರಸ್ತೆ ದೂರಿನಲ್ಲಿ ತನಗಾದ ಅನ್ಯಾಯವನ್ನು ಹಾಗೂ ಅತ್ಯಾಚಾರದ ಸಂಗತಿಯನ್ನು ಎಳೆಎಳೆಯಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ನೇರವಾಗಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕೊಟ್ಟ ದೂರಿನಲ್ಲಿ ಭಯಾನಕ ಸತ್ಯಗಳು ಹೊರಬಂದಿದ್ದು, ಗನ್‌ ಪಾಯಿಂಟ್‌ ಇಟ್ಟು ಜೆಡಿಎಸ್‌ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನಲ್ಲಿ ಜೆಡಿಎಸ್​ ನಾಯಕಿ, ಸಂತ್ರಸ್ತೆ ಹೇಳಿದ್ದೇನು? ಪ್ರಜ್ಲಲ್ ರೇವಣ್ಣ ಏನೆಲ್ಲಾ ಮಾಡಿದ್ದ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ