ಮಗಳ ಹತ್ಯೆ ಮತ್ತು ಚುನಾವಣೆ ಬೇರೆ ಬೇರೆ ವಿಷಯಗಳು, ಕಾಂಗ್ರೆಸ್ಸಿಗನಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿರಂಜನ ಹಿರೇಮಠ
ಜೋಶಿ ಅವರ ಉಪಕಾರ ಬಹಳ ದೊಡ್ಡದು, ಅವರೇ ತನ್ನ ನೆರವಿಗೆ ನಿಲ್ಲಬೇಕು ಅಂತ ಹೇಳಿದ್ದೂ ಇದೆ, ನಂತರ ತಮ್ಮ ಪಕ್ಷದ ಮುಖಂಡರು ಸಹ ತನ್ನನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ, ಬೇರೆ ಬೇರೆ, ಪಕ್ಷಗಳ ನಾಯಕರು ಸಹ ಭೇಟಿಯಾಗಿದ್ದಾರೆ, ಆದರೆ 5 ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತನ್ನ ಜವಾಬ್ದಾರಿ ನಿಭಾಯಿಸುತ್ತಿರುವುದಾಗಿ ನಿರಂಜನ್ ಹೇಳಿದರು.
ಹುಬ್ಬಳ್ಳಿ: ನೇಹಾ ಹಿರೇಮಠ (Neha Hiremath) ಹತ್ಯೆ ನಡೆದು ಕೇವಲ ಎರಡು ವಾರ ಮಾತ್ರ ಕಳೆದಿದ್ದರೂ ಅವರ ತಂದೆ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ ಹಿರೇಮಠ (Niranjan Hiremath) ತಮ್ಮನ್ನು ಚುನಾವಣಾ ಪ್ರಚಾರ ಕಾರ್ಯದಲ್ಲಿ (campaigning) ತೊಡಗಿಸಿಕೊಂಡಿರುವುದು ಕ್ಷೇತ್ರದ ಜನ ಹುಬ್ಬೇರಿಸುವಂತೆ ಮಾಡಿದೆ. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು ನೇಹಾ ಹತ್ಯೆ ವಿಚಾರವೇ ಬೇರೆ, ಚುನಾವಣಾಯೇ ಬೇರೆ, ತಾನೊಬ್ಬ ಮೂಲ ಕಾಂಗ್ರೆಸ್ಸಿಗ, ಪಕ್ಷ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಕೆಲ ಜವಾಬ್ದಾರಿ ತನ್ನ ಮೇಲಿರುತ್ತವೆ, ಪಕ್ಷದ ಕಾರ್ಯಕರ್ತನಾಗಿ ಅವುಗಳನ್ನು ನಿಭಾಯಿಸುತ್ತಿದ್ದೇನೆ ಎಂದು ಹೇಳಿದರು.
ನೇಹಾ ಹತ್ಯೆ ನಡೆದಾಗ ಕೂಡಲೇ ನಿಮ್ಮ ನೆರವಿಗೆ ಧಾವಿಸಿದ್ದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ಈಗ ನೀವು ಅವರ ವಿರುದ್ಧವೇ ಕಾಂಗ್ರೆಸ್ ಅಭ್ಯರ್ಥಿಗಾಗಿ ಮತ ಕೇಳುತ್ತಿದ್ದೀರಲ್ಲ, ಇದು ಎಷ್ಟರಮಟ್ಟಿಗೆ ಸರಿ ಅಂತ ಕೇಳಿದಾಗ ಕೊಂಚ ಗೊಂದಲಕ್ಕೆ ಬಿದ್ದ ನಿರಂಜನ ನಂತರ ಚೇತರಿಸಿಕೊಂಡು, ಜೋಶಿ ಅವರ ಉಪಕಾರ ಬಹಳ ದೊಡ್ಡದು, ಅವರೇ ತನ್ನ ನೆರವಿಗೆ ನಿಲ್ಲಬೇಕು ಅಂತ ಹೇಳಿದ್ದೂ ಇದೆ, ನಂತರ ತಮ್ಮ ಪಕ್ಷದ ಮುಖಂಡರು ಸಹ ತನ್ನನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ, ಬೇರೆ ಬೇರೆ, ಪಕ್ಷಗಳ ನಾಯಕರು ಸಹ ಭೇಟಿಯಾಗಿದ್ದಾರೆ, ಆದರೆ 5 ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತನ್ನ ಜವಾಬ್ದಾರಿ ನಿಭಾಯಿಸುತ್ತಿರುವುದಾಗಿ ನಿರಂಜನ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ನೇಹಾ ಕೊಲೆಯಾದ ದಿನದಿಂದ ಇವತ್ತಿನವರೆಗೆ ನನ್ನ ಹೇಳಿಕೆ ಮತ್ತು ನಿಲುವಿನಲ್ಲಿ ಬದಲಾವಣೆ ಇಲ್ಲ: ನಿರಂಜನ್ ಹಿರೇಮಠ