ಪ್ರಜ್ವಲ್ ರೇವಣ್ಣ ಪ್ರಕರಣಲ್ಲಿ ದೇವೇಗೌಡ ಮತ್ತು ನನ್ನ ವಿರುದ್ಧ ಯಾಕೆ ಮೀಡಿಯ ಟ್ರಯಲ್? ಹೆಚ್ ಡಿ ಕುಮಾರಸ್ವಾಮಿ

ಪ್ರಜ್ವಲ್ ರೇವಣ್ಣ ಪ್ರಕರಣಲ್ಲಿ ದೇವೇಗೌಡ ಮತ್ತು ನನ್ನ ವಿರುದ್ಧ ಯಾಕೆ ಮೀಡಿಯ ಟ್ರಯಲ್? ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 03, 2024 | 5:20 PM

ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಇನ್ನೂ ಆರೋಪಿ ಸ್ಥಾನದಲ್ಲಿದ್ದಾರೆ ಮತ್ತು ದೇವೇಗೌಡರದ್ದಾಗಲೀ ಅಥವಾ ತನ್ನದಾಗಲಿ ಇದರಲ್ಲಿ ಯಾವುದೇ ಪಾತ್ರವಿಲ್ಲ ಆದರೂ ತಮ್ಮನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ನೋವಿನಿಂದ ಪ್ರಶ್ನಿಸಿದರು.

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ (Raja Amareshwara Nayak) ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳ ಪ್ರಕರಣದಲ್ಲಿ ಮಾಧ್ಯಮವರು ತನ್ನನ್ನು ಮತ್ತು ಹೆಚ್ ಡಿ ದೇವೇಗೌಡರನ್ನು (HD Devegowda) ಮೀಡಿಯ ಟ್ರಯಲ್ ಗೆ ಒಳಪಡಿಸಿರುವುದನ್ನು ತೀವ್ರವಾಗಿ ಆಕ್ಷೇಪಿಸಿದರು. ಏಪ್ರಿಲ್ 21 ರಂದು ಪೆನ್ ಡ್ರೈವ್ ಗಳ ಹಂಚಿಕೆ ನಡೆಯಿತು ಮತ್ತು 26 ರಂದು ಮತದಾನ ನಡೆಯಿತು. ಅಲ್ಲಿಂದ ಇಲ್ಲಿಯವರೆಗೆ ಪ್ರತಿದಿನ ಬೆಳಗ್ಗೆ 5.30-6.00 ಗಂಟೆಗೆ ಮಾಧ್ಯಮದವರು ಕೆಮೆರಾಗಳೊಂದಿಗೆ ದೇವೇಗೌಡ ಮತ್ತು ತನ್ನ ಮನೆ ಮುಂದೆ ಬಂದು ನಿಂತವರು ರಾತ್ರಿ 12 ಗಂಟೆಯವರೆಗೆ ಅಲ್ಲೇ ಇರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಇನ್ನೂ ಆರೋಪಿ ಸ್ಥಾನದಲ್ಲಿದ್ದಾರೆ ಮತ್ತು ದೇವೇಗೌಡರದ್ದಾಗಲೀ ಅಥವಾ ತನ್ನದಾಗಲಿ ಇದರಲ್ಲಿ ಯಾವುದೇ ಪಾತ್ರವಿಲ್ಲ ಆದರೂ ತಮ್ಮನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ನೋವಿನಿಂದ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಕುಮಾರಸ್ವಾಮಿ, ಶಿವಕುಮಾರ್ ವಿರುದ್ಧ ಆರೋಪ ಮಾಡಬಹುದು ಅದರೆ ಅವು ತನಿಖೆಯಲ್ಲಿ ಸಾಬೀತಾಗಬೇಕು: ಸತೀಶ್ ಜಾರಕಿಹೊಳಿ