AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರದರ್​ ಕುಮಾರಸ್ವಾಮಿಗೆ ಎಲ್ಲವೂ ಗೊತ್ತು, ಕೇಂದ್ರದಿಂದ ಮಾಹಿತಿ ಪಡೆದಿರ್ತಾರೆ ಎಂದ ಡಿಕೆ ಶಿವಕುಮಾರ್

ಬ್ರದರ್​ ಕುಮಾರಸ್ವಾಮಿಗೆ ಎಲ್ಲವೂ ಗೊತ್ತು, ಕೇಂದ್ರದಿಂದ ಮಾಹಿತಿ ಪಡೆದಿರ್ತಾರೆ ಎಂದ ಡಿಕೆ ಶಿವಕುಮಾರ್

ನಯನಾ ರಾಜೀವ್
|

Updated on: May 02, 2024 | 11:28 AM

Share

ಕುಮಾರಸ್ವಾಮಿಗೆ ಎಲ್ಲವೂ ಗೊತ್ತು ಕೇಂದ್ರದಿಂದ ಮಾಹಿತಿ ಪಡೆದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಬ್ರದರ್​ ಕುಮಾರಸ್ವಾಮಿಗೆ ಎಲ್ಲವೂ ಗೊತ್ತು ಕೇಂದ್ರದಿಂದ ಮಾಹಿತಿ ಪಡೆದಿರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar)​ ಹೇಳಿದ್ದಾರೆ. ಪ್ರಜ್ವಲ್​ ರೇವಣ್ಣ(Prajwal Revanna) ಲೈಂಗಿಕ ಕಿರುಕುಳ ಆರೋಪದಲ್ಲಿ ಪೆನ್​ಡ್ರೈವ್​ ನೀಡಿದ್ದ ಡ್ರೈವರ್​ ಕಾರ್ತಿಕ್​ ಮಲೇಷ್ಯಾಗೆ ತೆರಳಿದ್ದು ಹೇಗೆ ಎಂಬ ಪ್ರಶ್ನೆ ಕುರಿತು ಡಿಕೆಶಿ ಉತ್ತರ ನೀಡಿದ್ದಾರೆ.

ನಮಗೆ ಕಾರ್ತಿಕ್​ ಮಲೇಷ್ಯಾಗೆ ಏಕೆ ಹೇಗೆ ಹೋಗಿದ್ದಾರೆ ಎನ್ನುವ ವಿಚಾರ ಗೊತ್ತಿಲ್ಲ, ತೋಟದ ಮನೆಯಲ್ಲಿ ಮತ್ತೆಲ್ಲೋ ಬಚ್ಚಿಡುವ ಅವಶ್ಯಕತೆ ನನಗಿಲ್ಲ, ನಾಣು ರಸ್ತೆಯಲ್ಲಿ ಫೈಟ್​ ಮಾಡುತ್ತೇನೆ, ಹಿಂದಿನಿಂದ ಕೆಲಸ ಮಾಡುವುದಿಲ್ಲ ಎಂದರು.

ಕಾರ್ತಿಕ್​ ಪೆನ್​ಡ್ರೈವ್​ ಅನ್ನು ಬಿಜೆಪಿಯವರಿಗೆ ಕೊಟ್ಟೆ ಎಂದು ಹೇಳಿದ್ದಾರೆ ಅಡ್ವೊಕೇಟ್​ ಒಬ್ಬರು ನಾನು ಕುಮಾರಸ್ವಾಮಿ ಅಭಿಮಾನಿ ಪೆನ್​ಡ್ರೈವ್​ ಅನ್ನು ಅವರಿಗೆ ಮೊದಲು ಕೊಟ್ಟಿದ್ದೆ ಎನ್ನುವ ಹೇಳಿಕೆ ಕೂಡ ನೀಡಿದ್ದಾರೆ ಹೀಗಿದ್ದಾಗ ಈ ವಿಚಾರಗಳ ಕುರಿತು ನನಗೆ ಏನು ಹೇಳಲು ಸಾಧ್ಯ, ಅವರು ಹೇಳಿದರೆ ನಾವು ಕೇಳಬಹುದು ಎಂದಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More